ಇದು ನನ್ನ ದುರ್ಗದ ಬೈಲಿನ ಲೇಖನಕ್ಕೆ ಉತ್ತರವಾಗಿ ನನ್ನ ಗುರುದ್ರೋಣಾಚಾರ್ಯ ಶ್ರೀ ಗೋಪಾಲ ವಾಜಪೇಯಿ ಅವರು ಬರೆದು ಕಳಿಸಿದ ಮೇಲ್ ಇದು.
ನನ್ನ ನೆನಪುಗಳ ಜೊತೆ ತಮ್ಮ ಅನುಭವಗಳ, ನೆನಪುಗಳನ್ನು ಹಂಚಿಕೊಂಡಿದ್ದು ನನಗೆ ಬಹಳ ಖುಷಿಆಗಿದೆ...ಅವರು ನೋಡಿದ ಅಥವಾ ನಾನು ನೋಡಿದ
ಹುಬ್ಬಳ್ಳಿ ಈಗ ಇಲ್ಲ ಆದರೆ ನಮ್ಮ ನೆನಪಿನಲ್ಲಿ ಮನದಲ್ಲಿ ಅದು ಸದಾ ಇದೆ. ಹೌದು ಅದು ಹಾಗೆಯೇ ಬಿಟ್ಟುಬಂದ ಊರಿನ ನೆನಪು ಯಾವಾಗಲೂ
ಕಾಡುತ್ತದೆ.
ಯಾವುದೇ ಲೇಖಕ ಪ್ರತಿಸಾದ ಬೇಡುತ್ತಾನೆ. ಕಾಮೆಂಟುಗಳು ಮಾಡುವುದು ಇದೇ ಕೆಲಸವನ್ನು. ಆದರೆ ಇಲ್ಲಿ ನನಗೆ ಪ್ರತಿಯಾಗಿ ಸಿಕ್ಕಿದ್ದು ಅತ್ಯಮೂಲ್ಯವಾದದ್ದು.
ಇಲ್ಲಿ ಅನುಭವದ ರಸಪಾಕವಿದೆ..ಈ ಪದಗಳಲ್ಲಿ ಆ ಒಂದುಕಾಲಘಟ್ಟದ ಚಿತ್ರಣಮಾತ್ರ ಅಲ್ಲ ಅಂದಿನ ಆ ಕಾಲವನ್ನು ಹಾಗೆಯೇ ಅನಾಮತ್ತಾಗಿ ಎತ್ತಿಕೊಂಡು ಬಂದ
ಹುಮ್ಮಸ್ಸಿದೆ...
Source: ದೇಸಾಯರ ಅಂಬೋಣ
’ಅದು ಅಸ್ತ್ರ; ಹಿಡಿದಿಡಲು ಶಕ್ತಿ ಹುಟ್ಟುವ ತನಕ ಬಳಸಬೇಡ’
ಚಾಕು ಹಿಡಿದಿದ್ದ ಕೈಗಳಿಗೆ ಉಪದೇಶಿಸಿದ್ದರು ಅಪ್ಪ!
ಅವರೆಂದಿದ್ದು ಅರ್ಥವಾಗದಿದ್ದರೂ ಗಂಭೀರ ಮುಖದ
ಎದುರು ನಿಲ್ಲುವ ಎದೆಗಾರಿಕೆ ನನ್ನಲ್ಲಿರದೆ
ಕುಯ್ಯಬೇಕೆಂದಿದ್ದ ಕನಸಿಗೆ ತರ್ಪಣ ಬಿಟ್ಟಿದ್ದೆ
ಚಾಪೆ, ಸೋಫದ ಸ್ಪಂಜು, ಮರದ ತೊಗಟೆಗಳ
ನಿರಾಳದ ನಿಟ್ಟುಸಿರು ನನ್ನ ಕಿವಿದೆರೆಗಳಿಗೂ ಬಿದ್ದಿತ್ತು
ನನ್ನನ್ನು ಅಣಕಿಸಿದ್ದಕ್ಕೆ ಅವುಗಳ ಮೇಲೆ ಸಿಟ್ಟು ಹುಟ್ಟುತ್ತಿತ್ತು!
ಮುಂದೆಂದೋ ಯಾರ ಮಾತನ್ನೂ ಕೇಳಬೇಕಿರದಾಗ
ಮನದಾಸೆಗಳನ್ನೆಲ್ಲಾ ಈಡೇರಿಸುವೆ ಎಂದು ಪ್ರತಿಜ್ಞೆ ಮಾಡಿದ್ದೆ
ಮನೆಯಲ್ಲಿರದ ಅಪ್ಪನನ್ನು ಕೆಣಕಲೆಂದೇ ಹಿಡಿದಿದ್ದೆ ದೊಡ್ದ ಕತ್ತರಿ
ತೋಟವಿಡೀ ಕಳೆಯೋ ಗಿಡವೋ ಹೂವೋ ಹಣ್ಣೋ
ಒಂದೂ ನೋಡದೆ...
Source: ಅಲೆ - ಮರಳು
ಮತ್ತೆ ಇಂದು ನಿನ್ನ ಪಕ್ಕದಲ್ಲಿ ನಡೆಯುತ್ತಿದ್ದೇನೆ
ನಿನ್ನ ಕಣ್ಣುಗಳಲ್ಲಿ ಮತ್ತದೇ ಭಾವನೆ;
ನಿನ್ನ ಮುಂದುವರಿಕೆ ನಾನೆಂಬ ಕಾಮನೆ
ನಿನಗೆ ನೀ ಕಟ್ಟಿದ ಪ್ರತಿಷ್ಟೆಯ ಮರದ ನೆರಳಿನಲ್ಲಿ
ನಾನು ಹೂ ಬಿಟ್ಟು ಫಲಕೊಡಬೇಕೆಂಬ ನಿರೀಕ್ಷೆ
ನನ್ನ ಬಗೆಗಿನ ಕಥೆಗಳಲ್ಲಿ ಇದೂ ಸೇರಿ
ನಾನಾಗಬಲ್ಲೆ ಮಹಾನ್ ಎಂಬ ಪೀಠದ ಉತ್ತರಾಧಿಕಾರಿ
ಎಂಬ ಅಭಿಮಾನ;ಹೆಮ್ಮೆ!
ನನಗೋ ಸ್ವಾತಂತ್ರ್ಯದ ಇಕ್ಕೆಲಗಳಲ್ಲಿ
ಒಂದೊಂದು ರೆಕ್ಕೆಯ ಕಟ್ಟಿ
ಮತ್ತೆ ಎಲ್ಲವನ್ನೂ ಮೀರಿ ಹಾರುವಾಸೆ
ನನ್ನ ಕನಸುಗಳನ್ನು ನಿನ್ನ ಕನಸುಗಳೆಂದು ನೀನು ಹೇಳಿದರೂ
ನೀ ಒಪ್ಪುವ ಕಲ್ಪನೆಗಳಲ್ಲಿ ನನ್ನ ಕನಸಿಗೆ ಸ್ಥಾನವಿದ್ದರೆ
ನೀನೂ ಅದಕ್ಕೆ ಬಣ್ಖ ಹಚ್ಚುವೆ,
ಆ ಕನಸನ್ನು ಮರಿಯೆಂಬಂತೆ ಸಾಕುವೆ
...
Source: ಅಲೆ - ಮರಳು
೧೯೫೯ರಲ್ಲಿ ಜನರಲ್ ತಿಮ್ಮಯ್ಯ ಭಾರತ ಚೀನಾ ಯುದ್ಧದ ಸಾಧ್ಯತೆ ಮತ್ತು ಅದಕ್ಕೆ ಬೇಕಾದ ತಯಾರಿಯನ್ನು ಮಾಡಲು ಒಪ್ಪಿಗೆ ಕೇಳಿದಾಗ ಆಗಿನ ರಕ್ಷಣಾ ಮಂತ್ರಿಯಾಗಿದ್ದ ಕೃಷ್ಣ ಮೆನನ್ ಅದನ್ನು ನಿರಾಕರಿಸಿದ್ದರು. ಇದರಿಂದ ಕುಪಿತಗೊಂಡ ಜನರಲ್ ರಾಜೀನಾಮೆಯನ್ನು ಎಸೆದಿದ್ದರು. ಜನರಿಂದ ಸರ್ಕಾರ ಎನ್ನುವ ಅರ್ಥದ ಪ್ರಜಾಪ್ರಭುತ್ವ ಶುರುವಾದ ಹೊತ್ತಲ್ಲೇ ಜನರು ಬದಲಿಸಬಯಸುವ ಸರ್ಕಾರದ ನೀತಿಗಳನ್ನು ಬದಲಿಸುವ ಅನುಮತಿ ಆಗಲೇ ಇರಲಿಲ್ಲ. ನೆಹರೂ ರಾಜೀನಾಮೆಗೆ ಒಪ್ಪದೇ ಅವರನ್ನು ಅವರ ಅವಧಿ ಮುಗಿಯುವ ತನಕ(೧೯೬೧) ಇಟ್ಟುಕೊಂಡಿದ್ದು ಮತ್ತು ಭಾರತ ಯುದ್ಧದಲ್ಲಿ(೧೯೬೨) ಹೀನಾಯವಾಗಿ ಸೋತದ್ದು ಈಗ ಕೇವಲ ಇತಿಹಾಸ! ನೆಹರೂ ಚಾಣಾಕ್ಷತನದಿಂದ ವರ್ತಿಸಿದ್ದರೆ ಯುದ್ಧವನ್ನು ತಪ್ಪಿಸಬಹುದಿತ್ತು ಎಂದು ಈಗಲೂ ಎಷ್ಟೋ ಜನ ಹೇಳುತ್ತಾರೆ. ತನ್ನ ತಂತ್ರವನ್ನು ಒಪ್ಪಲಿಲ್ಲವೆಂದು...
Source: ಅಲೆ - ಮರಳು
ಅನಂತಗಗನದಲ್ಲಿ
ಉರಿಯುವ ಸೂರ್ಯನ ಕೆಳಗೆ
ಜನಸಾಗರವಿದೆ
ಆದರೂ ನಾನು
ಒಬ್ಬಂಟಿಗ
ಅಪರಿಚಿತ
ಏಕೆಂದರೆ
ನನ್ನಲ್ಲಿ
ಸಿರಿವಂತಿಕೆಯಿಲ್ಲ
ಅಧಿಕಾರವಿಲ್ಲ
ಬುದ್ಧಿವಂತಿಕೆಯಿಲ್ಲ
ಮತ್ತು ನಾನು
ತಗ್ಗಿ ನಡೆಯಲಿಲ್ಲ
ಹೊಗಳಲಿಲ್ಲ
ಮಾರಿಕೊಳ್ಳಲಿಲ್ಲ
ನನ್ನ ಬಳಿ ಕನಸುಗಳು
ಕೇವಲ ಅವು ಮಾತ್ರ ನನ್ನವು.
[ಡಾ|| ಟಿ, ಜಿ. ಪ್ರಭಾಶಂಕರ್ ಇವರ 'ಅಕೇಲಾ' ಹಿಂದಿ ಮೂಲ ಕವನದ ಅನುವಾದ. ನನ್ನನ್ನು ಬಹುವಾಗಿ ಕಾಡಿದ ಕವನಗಳಲ್ಲೊಂದು. ಅದಕ್ಕಾಗಿ ಪ್ರಕಟಿಸುತ್ತಿದ್ದೇನೆ]
Source: ಅಲೆ - ಮರಳು
ಮೂಡಣದಲ್ಲಿ ಕೆಂಪು ಸೂರ್ಯನಿಂದಲೇ ಅರುಣೋದಯ
ಕೆಂಗಿರಣಗಳಿಂದ ಸೃಷ್ಟಿಯಲಿ ಹರಿವ ಚೇತನ ನಿರಾಕಾರಮಯ
ಭವ್ಯ ನಿರಾಡಂಬರ, ನೀಲಾಗಸದೊಳು ಕೆಂಬಣ್ಣದ ಪಸರಿಕೆ
ವಿಶ್ವಾಕಾರ ಗಗನಸದೃಶ ಪ್ರೀತಿಯ ಶೋಭಿಸುವಿಕೆ
ನೇಸರನ ಕಟಾಕ್ಷಕ್ಕೆ ಹೊಳೆಯುವ ಅಮೃತ ಬಿಂದುಗಳು
ಸೊಗಡಿಗೆ ದನಿಗೂಡಿಸುತ್ತಿವೆ ಗುಬ್ಬಿ ಪಿಕರಾಳಗಳು
ಹೊಸಬೆಳಕಿದು ನವನಾಡಿನ ಸೃಷ್ಟಿಗೆ
ಹೊಸ ಹೊಂಗಿರಣವಿದು ಸತ್ಯದ ಅರಿವಿಗೆ
ಹೊಸ ಚೇತನದ ಬಿತ್ತನೆಯಿದು ಅನುದಿನದ ಆರೋಹಣ
ಜಡವಲ್ಲ ಸೃಷ್ಟಿ; ಚಲನೆ ಸರ್ವಾಂಗೀಣ
ಬೆಳಗಲ್ಲ ಬರಿಯ ಸೂರ್ಯೋದಯ
ಕಾವ್ಯ ಸ್ಫುರಣೆಯ ಅಂತರ್ದೃಷ್ಟಿ; ಸಚ್ಚಿದಾನಂದಮಯ
[೨೦೦೪ ರಲ್ಲಿ ಬರೆದ ಕವನ]
Source: ಅಲೆ - ಮರಳು
ಅಂದು ಮನೆ ಬಾಗಿಲಿನ ತನಕ ಕಣ್ಣೀರಿಗೂ ಕರಗದೆ
ಹರಿದಿದ್ದ ಹೊಳೆಯ ಬಿರುಸು ನೀರಿನ,
ಕನ್ಯೆಯೆಂದು ಗೊತ್ತಿದ್ದೂ, ನನ್ನ ಬಟ್ಟೆಯೊಡನೆ ಸರಸವಾಡಲು ಯತ್ನಿಸಿ
ಬೇಸತ್ತು ತಮ್ಮ ಕುರುಹು ಬಿಟ್ಟ ಮುಳ್ಳುಗಳ,
ಕಾಲಿಗೆ ಚುಚ್ಚತೊಡಗಿದ ನಿನ್ನ ಕಲ್ಲುಗಳ ಋಣ ತೀರಿತು ಇಂದು
ಮನೆಯ ಹಂಚಿನೊಳಗೆ ತೂರಿಕೊಂಡು
ನನ್ನ ಮುಖವನ್ನು ಚುಂಬಿಸಲು ಯತ್ನಿಸಿದ ನಿನ್ನ ಹನಿಗಳ
ಪಾತ್ರೆಯನ್ನಿಟ್ಟರೂ ಚಿಮ್ಮುತ್ತಾ ಮುಖದೆಡೆಗೆ ಹಾರುತ್ತಾ ಬರುವ ಕಾಮಿಯ
ಮೊಗೆಮೊಗೆದು ಎಸೆದರೂ ಇಂಗದ ಕಾಡುವ ನಿನ್ನ ಪ್ರೀತಿಯ,
ಮಾಸದ ಬದುಕಿನ ಒರತೆಯ ಋಣ ತೀರಿತು ಇಂದು
ಕೇಳಬೇಕಿನಿಸಿದರೂ ದೂರ ದೂರಕ್ಕೂ ಕೇಳದ ಇಂಚರ
ಮುನಿದ ಕಾರಣ ಮರೆತು ಹೋದೆ ಎಂಬಂತೆ ಹಾಡಿಸಿದ್ದೆ ನೀನು
ಬೆಳಕಿನಲ್ಲೂ ಕಾಣದ ದೂರದಲ್ಲಿ ಉಲಿದಿದ್ದ ಪಕ್ಷಿಗಳ...
Source: ಅಲೆ - ಮರಳು
ನೂರ್ ಇನ್ನೂ ಮಲಗಿದ್ದಳು. ಸಮಯ ಎಂಟು ಆಗಿದ್ದರೂ ಯಾವತ್ತೂ ಬೇಗ ಏಳುವ ಅವಳ ದಿನಚರಿ ಇಂದು ಯಾಕೋ ಹಾಳಾಗಿತ್ತು. ಈಗೀಗ ಹೆಚ್ಚೇ ಹಟಮಾರಿಯಾಗಿದ್ದಾಳೆ ಎಂದು ಫಾತಿಮಾಳಿಗೆ ಅನಿಸತೊಡಗಿತು. ಅದರಲ್ಲೂ ನಿನ್ನೆ ’ನನ್ನನ್ನು ಕಳಿಸಿಕೊಡು, ನಾನು ಒಬ್ಬಳೇ ಮನೆಗೆ ಹೋಗ್ತೀನಿ. ಮನೆಯಲ್ಲಿದ್ದರೆ ಸರಿಯಾಗ್ತೀನಿ’ ಎಂದು ಬಡಬಡಿಸಿದ ಕ್ಷಣ ತನ್ನ ಎದೆಯೊಳಗೆ ಉಂಟಾದ ನೋವು ಅವಳಿಗೆ ಅರ್ಥವಾದೀತೇ? ’ಇನ್ನೂ ಮಗುವಲ್ಲವೇ’ ಎಂದು ಮುಮ್ತಾಜ಼್ ಸಮಾಧಾನ ಮಾಡಿದ್ದರೂ ಯಾಕೋ ರಾತ್ರಿಯಿಡೀ ಆ ಮಾತುಗಳು ಕಾಡಿದ್ದವು. ಅವಳಿಗೆ ಎಲ್ಲವೂ ಅರ್ಥವಾಗುತ್ತದೆ ಎಂದೆನಿಸಿತ್ತು. ಅತ್ತು ಅತ್ತು ನಿದ್ದೆ ಕೂಡ ಬಂದಿರಲಿಲ್ಲ.
ಅವಳ ಹೊದಿಕೆ ಸರಿಮಾಡಿ ಎದ್ದು ಹೊರಗೆ ಬಂದಾಗ ರಶೀದ್ ಕಂಡ. ಬೆಳಗ್ಗೆ ಬೆಳಗ್ಗೆನೇ ಅವನ ಮುಖ ಕಂಡು ಸೈತಾನನ ಮುಖ ನೋಡಿದಂತೆ ಆಯಿತು. ಹುಳುಕು ಹಲ್ಲುಗಳನ್ನು...
Source: ಅಲೆ - ಮರಳು
-೧-
ಕುಚೇಲನ ನಡಿಗೆಯಲ್ಲಿ ಈ ಹಿಂದೆಂದೂ ಕಾಣದಂತಹ ವೇಗವಿತ್ತು. ಶೆಣೈ ಮಾಸ್ತರ
ಅಂಗಡಿಯಲ್ಲಿ ಸಾಲದ ಎಕೌಂಟಿನಲ್ಲಿದ್ದ ಬ್ಯಾಲೆನ್ಸಿಗೆ ಭಡ್ತಿ ಕೊಡಿಸಿದ್ದರಿಂದ ಕೈಗೆ
ಬಂದಿದ್ದ ಬೀಡಿ ಅವನ ಬಾಯಿಯಲ್ಲಿ ಕುಳಿತು ನಿರಾತಂಕವಾಗಿ ಹೊಗೆ ಬಿಡುತ್ತಿತ್ತು. ಬೀಡಿಯ
ಹೊಗೆ ಕುಚೇಲನ ಮೆದುಳೊಳಗೆ ವ್ಯಾಪಕವಾಗಿ ಹಬ್ಬಿ ಅವನ ನರನಾಡಿಗಳಲ್ಲೆಲ್ಲಾ ಹೊಸ
ಚೈತನ್ಯವನ್ನು ತುಂಬಿದ್ದರಿಂದ ಮನಸ್ಸೆಲ್ಲಾ ಹಗುರಾಗಿ ವ್ಯಗ್ರಗೊಂಡಿದ್ದ ಮುಖದಲ್ಲಿ
ಕಂಬನಿ ಜಿನುಗುಟ್ಟಿತು. ಕ್ಷಣ ಮಾತ್ರ, ಕಿವಿ ನಿಮಿರಿತು. ಏನೋ ಸದ್ದು! ಮತ್ತದೇ
ಹೆಜ್ಜೆಗಳ ಶಬ್ದ. ಕೇಳಿಸಿತೋ ಅಥವಾ ಭ್ರಮಿಸಿದನೋ. ಯಾರಿರಬಹುದು ಮಟ ಮಟ ಮಧ್ಯಾಹ್ನದ ಈ
ಹೊತ್ತಿನಲ್ಲಿ? ತಿರುಗಿ ನೋಡಿದರೆ ಯಾರೂ ಇಲ್ಲ. ಹೆಜ್ಜೆ ಮುಂದಿಟ್ಟರೆ ಪುನಃ ಬರಬರ
ಸದ್ದು....
Source: ಅಲೆ - ಮರಳು
ಭಾರತೀಯ ಪುರಾಣಗಳಲ್ಲಿ, ದೇವಿ ದೇವತೆಗಳ ಕಲ್ಪನೆಗಳಲ್ಲಿ ತನ್ನದೇ ಆದ ವಿಶೇಷ ಅರ್ಥ
ಪಡೆದಿರುವ ದೈವಿಕ ವಿಷಯಗಳನ್ನು ಕಾಣಬಹುದಾಗಿದೆ. ವಿಕಾಸವಾದವನ್ನು ನಿರೂಪಿಸುವ ದಶಾವತಾರ
ಮತ್ತೂ ಸ್ಥಿತಪ್ರಜ್ಞ ಕೃಷ್ಣ ಇದಕ್ಕೆ ಮಹತ್ತರವಾದ ಉದಾಹರಣೆಯಾದರೆ ಇನ್ನೊಂದು ಸಂಕೀರ್ಣ
ಉದಾಹರಣೆ ಶಿವ ಮತ್ತು ಶೈವ ಕಲ್ಪನೆಗಳದ್ದು. ಇಂತಹ ಪರಿಕಲ್ಪನೆಗಳು ಇನ್ನೂ ಮುಂದಿನ
ಹಂತಕ್ಕೆ ಹೋಗಿ ಅರ್ಧನಾರೀಶ್ವರವೆಂಬ ಅದಮ್ಯ ಕಲ್ಪನೆ ಜನ್ಮ ತಾಳುತ್ತದೆ.
ಪರಿಕಲ್ಪನೆ - ಪುರಾಣ
ಬದುಕಿನ
ಹರಿವು ಎರಡು ಮೂಲಭೂತ ತತ್ವಗಳಿಂದ ಮುನ್ನಡೆಯುತ್ತಿದೆ. ಪುರುಷ ತತ್ವ ಮತ್ತು ಸ್ತ್ರೀ
ತತ್ವ(ಸ್ತ್ರೈಣತ್ವ). ಪುರುಷನನ್ನು ಶಿವನನ್ನಾಗಿಯೂ ಸ್ತ್ರೀಯನ್ನು ಪಾರ್ವತಿಯನ್ನಾಗಿಯೂ
ಕಾಣಲಾಗುತ್ತದೆ. ಪಾರ್ವತಿ ಎನ್ನುವುದಕ್ಕಿಂತ ಶಕ್ತಿ...
Source: ಅಲೆ - ಮರಳು
ಅವನಿನ್ನೂ ಸುಮ್ಮನೆ ಕೂತಿದ್ದ. ಹೊರಗೇನೋ ಗಿಜಿಗಿಜಿ ಸದ್ದು, ಪೆಪೆ ಹಾರ್ನು, ಯಾವುದೋ ಮೈಕಿನಲ್ಲಿ ಯಾರೋ ಹಾಕಿರುವ ಹಾಡು... ಪೂಲ್ ಗೇಟಿನ ನಸೀಬಿನಲ್ಲಿ ಇದಕ್ಕಿಂತ ಮಿಗಿಲಾದದ್ದೇನೂ ಕಾಣಲಾರದು ಎಂದು ಕಿಟಕಿಯಿಂದ ಇಣುಕಿ ಮತ್ತೊಮ್ಮೆ ಅಂದುಕೊಂಡ. ಪೆಪೆ ಹಾರ್ನುಗಳೂ ಸಾಮಾನ್ಯ ಕಾರುಗಳ ಹಾರ್ನುಗಳಲ್ಲ! ಮರ್ಸಿಡೀಸು, ಬಿಎಂಡಬ್ಲು... ಮೊನ್ನೆ ಮೊನ್ನೆ ಬೆಂಟ್ಲಿ ಕೂಡ ಇದೇ ಸಾಲಿಸ್ಬರಿ ಪಾರ್ಕಿನ ಬಳಿ ಅವತಾರವೆತ್ತಿದಾಗ ವಿಶ್ವದ ಪ್ರತಿರೂಪದಂತೆ ಪುಣೆ ಅದರಲ್ಲೂ ಪೂಲ್ ಗೇಟ್ ಆಸುಪಾಸಿನ ಸ್ಥಳಗಳೆಲ್ಲಾ ಅವನಿಗೆ ಕಾಣತೊಡಗಿತ್ತು. ಆದರೆ ಅದೆಲ್ಲಾ ಪೂಲ್ ಗೇಟಿನ ಅಸ್ತಿತ್ವಕ್ಕೆ ಅಗತ್ಯವೇ! ಇಲ್ಲವಾದಲ್ಲಿ ಎಂಜಿ ರೋಡು, ಈಸ್ಟ್ ಸ್ಟ್ರೀಟ್, ರೇಸ್ ಕೋರ್ಸ್, ಟರ್ಫ್ ಕ್ಲಬ್, ಸಾಲಿಸ್ಬರಿ ಪಾರ್ಕ್ ಇವುಗಳಿಗೆ ಬೆಲೆಯೇ ಇಲ್ಲದಂತಾಗುತ್ತದೆ. ಪುಣೆಯ ನಿಜವಾದ...
Source: ಅಲೆ - ಮರಳು
ಕೇವಲ ಮುಖ ನೋಡಲು ಫೇಸ್ ಬುಕ್ ಇರುವುದಾದರೆ
ಇರುವುದೇಕೆ ಸೆಂಡ್ ರಿಕ್ವೆಸ್ಟು? ಸುಮ್ಮನಿರುವ ಮನುಷ್ಯ ನಾನಾದರೆ
ನಿನ್ನ ಪ್ರೊಫೈಲ್ ಚಿತ್ರವೇ ನನಗೆ ಸಾಕಲ್ಲವೇ
ರಿಕ್ವೆಸ್ಟ್ ಕಳಿಸಿದ ನನ್ನ ಹುನ್ನಾರ ನಿನಗರಿಯದೇ?
ನಿನ್ನ ಎಲ್ಲಾ ಸ್ಟೇಟಸ್ಸುಗಳಿಗೆ,ಚಿತ್ರಗಳಿಗೆ ಮಾಡುವೆ ನಾ ಲೈಕು, ಕಮೆಂಟು
ಎಷ್ಟು ಜನರೊಂದಿಗೆ ಬೇಕಾದರೂ ಚಾಟ್ ಮಾಡುತ್ತಿರು ನೀನು
ನಾನು ಹಾಯ್ ಹೇಳಿದಾಗ ಹರಿಯಲಿ ನನ್ನ ಕಡೆ ಗಮನ
ಮರು ಹಾಯ್ ಹೇಳುವಷ್ಟು ಸೌಜನ್ಯ ತೋರಲಿ ನಿನ್ನ ಮನ
ಒಮ್ಮೊಮ್ಮೆಯಾದರೂ ಹಾಕಿ ಬಿಡು ದೃಷ್ಟಿ ನನ್ನ ಪ್ರೊಫೈಲಿನತ್ತ
ನಾ ಹಾಕುವ ನನ್ನ ಸುಂದರ ಚಿತ್ರಗಳ ಕಡೆಗೆ ಹರಿಯಲಿ ನಿನ್ನ ಚಿತ್ತ
ಅಪರಿಚಿತನೆಂದು ಹೆದರಿ ದೂರವಾದರೆ ನಷ್ಟ ನೋಡು ನಿನಗೆ
ಅಪರಿಚಿತರೇ ಪರಿಚಿತರಾಗುವುದು ಒಂದು ಸ್ನೇಹದ...
Source: ಅಲೆ - ಮರಳು
ಭರವಸೆಯಿಲ್ಲದ ಬೆಳಕುಗಳಲಿ
ಇಷ್ಟು ದೂರ ನಡೆದ ನಾವು
ಇನಿತು ನಡೆಯಲಾರೆವೇ?
ನಿನ್ನ ಕೈಹಿಡಿದು ನಾನು
ನನ್ನ ಕೈ ಹಿಡಿದು ನೀನು, ಒಂದರೆಗಳಿಗೆ.
ಒಬ್ಬರಿಗೊಬ್ಬರು ಹುಟ್ಟಿದವರೆಂದು
ಇರುವಾಗ ಭರವಸೆ
ಏಕೆ ಹೇಳು ಈ ಹೆದರಿಕೆ
ಅದೇಕೆ ಕಳೆದುಕೊಳ್ಳುವ ಭಯ?
ಮುಚ್ಚಿರುವ ದಾರಿಗಳೂ ನಡೆದರೆ ತೆರೆಯುತ್ತವೆ
ಬಿಟ್ಟು ಬಿಟ್ಟರೆ ಉಳಿಯುವವೂ ಅಳಿಯುತ್ತವೆ
ಒಂದಾಗಿರಿಸಿರುವ ಪ್ರೀತಿ ಕಾಯ್ವುದು ನೋಡು, ಕಾಂತೆ
ಹೆಜ್ಜೆಯೊಡನೆ ಹೆಜ್ಜೆ ಹಾಕು, ಬಿಡು ಎಲ್ಲಾ ಚಿಂತೆ
Source: ಅಲೆ - ಮರಳು
ನಡೆದು ಬಂದ ಕವಲುಗಳಲ್ಲಿ ಇಂದು ನನ್ನನ್ನು ಹುಡುಕುತ್ತಿದ್ದೇನೆ
ಮುಂದೊಡೆಯುವ ಕವಲುಗಳಲ್ಲಿ ಮತ್ತೆ ಕಳಚಿಕೊಳ್ಳಲಿದ್ದೇನೆ
ಒಡೆಯುವಾಗ ಅದೆಷ್ಟು ನೋವು
ಬಿರಿಯುವ ಕನವರಿಕೆಗಳು ಬೊಬ್ಬಿಟ್ಟಂತೆ
ಸುಕ್ಕು ಸುಕ್ಕು; ಒಣ - ಭಣ ಭಣ
ಒಮ್ಮೊಮ್ಮೆ ಬಿಕ್ಕಳಿಕೆ - ಕಂಬನಿ ಮತ್ತೆ ರೋದನ
ತಡೆಗಟ್ಟಲಾರದ ವೇದನೆಯ ರೂಪ ಆಕ್ರೋಶ
ಎಲ್ಲವನ್ನದುಮಿ ನನ್ನ ನಾನು ಕಟ್ಟಬೇಕೆನ್ನುವ ಆವೇಶ
ಬೆಂಕಿಯ ಮುಚ್ಚಿ ಮೇಲೆ ಬದುಕ ಕಲ್ಪಿಸುವ ಧರೆಯಂತೆ
ಸ್ಥಿತಿಗಿದುವೇ ಕಾರಣ, ಅದಕ್ಕಾಗಿ
ನಡೆದು ಬಂದ ಕವಲುಗಳಲ್ಲಿ ನನ್ನನ್ನು ಹುಡುಕುತ್ತಿದ್ದೇನೆ
ಮುಂದೊಡೆಯುವ ಕವಲುಗಳಲ್ಲಿ ಮತ್ತೆ ಕಳಚಿಕೊಳ್ಳಲಿದ್ದೇನೆ
ಇಂದು ಒಡೆಯುತ್ತಿರುವ ಕವಲುಗಳಿಗೆ ನನ್ನನ್ನು ಒಡ್ಡಿಕೊಳ್ಳುತ್ತಿದ್ದೇನೆ
Source: ಅಲೆ - ಮರಳು
'ಜಂತ್ರಗುಡ್ಡೆ' ಎಂದು ನಾನು ಹೇಳಿದರೆ ಯಾವುದೋ ಯಃಕಶ್ಚಿತ್ ಹುಲ್ಲಿನಿಂದಾವೃತವಾದ
ಗುಡ್ಡವೆಂದು ನೀವು ಭಾವಿಸಬಹುದು. ಬಹುತೇಕ ಅದು ಸತ್ಯ ಕೂಡ ಹೌದು. ಆದರೆ ನಮಗರಿವಿಲ್ಲದ
ಆಯಾಮವೊಂದು ಪ್ರತಿ ವಿಷಯದಲ್ಲಿ ಸ್ಥಾಪಿತವಾಗಿರುತ್ತದೆ. ಅದು ಜಂತ್ರಗುಡ್ಡೆಗೆ ಕೂಡ
ಅನ್ವಯಿಸುತ್ತದೆ.
...
Source: ಅಲೆ - ಮರಳು
ಇಂದೇಕೋ ಕಾಡುವ ಈ ಮೌನ
ನನ್ನ ನಿನ್ನ ನಡುವೆ
ಕಡಿದುಹೋದ ಮಾತುಗಳ
ಉಳಿದ ಅವಶೇಷ
ಎಲ್ಲೋ ಕೇಳುವ
ಕೀಬೋರ್ಡಿನ ಟಕಟಕ ಹೊಡೆತ
ಕುಟ್ಟುವ ಮೌಸಿನ ಕುಟುಕ
ಸ್ಪೀಕರುಗಳಲ್ಲಿ ಬೊಬ್ಬಿಡುವ ಯಾರೋ..
ಇಲ್ಲದ ಪ್ರಪಂಚದೊಳು
ನಮ್ಮಿಬ್ಬರ ಅಸ್ತಿತ್ವವನ್ನು
ಮರೆತ ನಿನಗಿಲ್ಲಿ
ಕೇಳದು ನನ್ನೆದೆಯ ಬಡಿತ
ನನಗೂ ಕೇಳುತ್ತಿಲ್ಲ ಈಗೀಗ
ನಿನ್ನೆದೆಯ ತುಡಿತ
ಸೋತೆ ಎಂದು ಕೈ ಚೆಲ್ಲಿದ ನೀನು
ಸೋಲಲಾರೆ,
ಈ ಕೂಪಕ್ಕೊಂದು
ಎಸ್ಕಲೇಟರ್ ತರಿಸುವ
ಎಂದು ಎದ್ದೇಳುವ
ಛಲದ ಕಪ್ಪೆ ನಾನು
ಬರಿಯ ಅವಶೇಷಗಳಲ್ಲಿ ಬದುಕಲಾರೆ
ಇನ್ನೂ ನನ್ನಲ್ಲಿ ಕೆಚ್ಚು ಇರುವಾಗ
ಬರಿಯ ನೆನಪುಗಳಲ್ಲಿ ನನ್ನನ್ನೇಕೆ ಕಾಣುವೆ...
Source: ಅಲೆ - ಮರಳು
ಇಂದು ಪುನಃ ಅನಿಸುತ್ತಿದೆ
ಮನಸ್ಸು ಖಾಲಿ ಖಾಲಿ
ಒಳಗಡಗಿದ ಗದ್ದಲಗಳಿಗೆ ಕಿವಿ ಕಿವುಡು!
ಬಾಗಿಲು ಮುಚ್ಚಿ
ಸೌಂಡ್ ಪ್ರೂಫ್ ಪೈಂಟು ಹೊಡೆದಂತೆ!
ಎದೆಯ ಬಿಗುಮಾನಗಳಿಗೆ
ಬಿತ್ತಿದ್ದ ಪ್ರೀತಿಯ ಬೀಜಗಳು
ಮೊಳಕೆಯೊಡೆಯದೇ ಅಳಿದಿವೆ
ಮನದ ಮೂಲೆಯಲ್ಲಿ ಮುಗಿಲನ್ನೇರಲಿದ್ದ
ಕನಸುಗಳು ಬೆದರಿ ಅದುಮಿ ಹೋಗಿವೆ
ತನ್ನೊಡಲನೇ ಬಗಿದು ತ್ರಿವಿಕ್ರಮನಾಗುತ್ತಾ
ತನ್ನದೇ ದನಿ ತನಗೇ ಕೇಳದಂತೆ...
ದೂರ ದೂರದವರೆಗೂ ಏನೂ ಕಾಣದಂತೆ!
ಬಂಜರು ಹೃದಯದಲ್ಲಿ
ಮತ್ತೆ ಸೃಷ್ಟಿಗಾಗಿ ಎಂಬಂತೆ
ಮೋಡ ಕವಿದಿದೆ
ಮನಸ್ಸು ಮತ್ತೆ ಮಳೆಗಾಗಿ ಕಾದಿದೆ
ಧಾರೆಯ ಸಿಂಚನದ ಕಾತರದಿಂದ ನಗ್ನವಾಗಿವೆ
ಆದರೆ ಯಾಕೋ ಇಂದು ಪುನಃ ಅನಿಸುತ್ತಿದೆ
...
Source: ಅಲೆ - ಮರಳು
ನೀನೊಮ್ಮೆ ನನ್ನ ಪ್ರೀತಿಸುತ್ತೇನೆ ಎಂದಾಗ
ಅರಳಿದ ನನ್ನ ಕಣ್ಣುಗಳು ಇನ್ನೂ ಮುಚ್ಚಿಲ್ಲ
ಗಾಳಿಗೆ ನನ್ನ ಮುಖದ ಮೇಲೆಲ್ಲಾ ಓಡಾಡುವ
ನಿನ್ನ ಮುಂಗುರುಳುಗಳ ಸೆಳೆತದಿಂದ ಮುಕ್ತಿ ಇನ್ನೂ ಸಿಕ್ಕಿಲ್ಲ
ನಿನ್ನ ಕಣ್ಣುಗಳ ಪ್ರತಿ ನೋಟವೂ
ಹೊಸತೊಂದು ಬೆಳವಣಿಗೆಯಂತೆ ಕಾಣುವ
ಈ ಬಡಜೀವಕ್ಕೆ ನಿನ್ನ ಬಂಧಿಯಾಗಿರುವುದೇ ಕನಸು
ಕಾರಣವಿಲ್ಲದೆ ನನ್ನ ಮೇಲೆ ಕೋಪಗೊಳ್ಳುವ
ನಿನ್ನ ವಿಚಿತ್ರ ಸ್ವಭಾವದಿಂದ ನಾನಿನ್ನೂ ಬೇಸತ್ತಿಲ್ಲ
ಮಾತುಗಳೇ ನಮ್ಮ ಪ್ರೀತಿಗೆ ತೋರಣ
ಮುಗಿಯದ ನಿನ್ನ ಮಾತುಗಳಿಂದ ನನಗಿನ್ನೂ ಮುಕ್ತಿ ಬೇಕಿಲ್ಲ
ಮಧುರ ಮಾತುಗಳ ಮಧ್ಯೆ ಕಾಡುವ ಮೌನದಿಂಗಿತ
ನಿನಗೂ ಅರ್ಥವಾಗಿ ನಿನ್ನ ಹೃದಯದ ಢವಢವ
ನನ್ನ ಬಳಿಯೂ ತಲುಪಿದಾಗ ರೋಮಾಂಚನಗೊಳ್ಳುವ ನನಗೆ...
Source: ಅಲೆ - ಮರಳು
ಮನದ ಕನವರಿಕೆಗಳೆಲ್ಲಾ
ಹೆಸರು ಪಡೆಯೋ ಆತುರದಲ್ಲಿ
ಹುಟ್ಟಿದ ಕಲ್ಪನೆಯೇ
ನನ್ನಿಂದ ಸೃಷ್ಟಿಯಾದ ನಿನಗೆ
ಅದೆಷ್ಟು ಬೇಗ ನನ್ನನ್ನಾವರಿಸುವ ತವಕ
ನನ್ನ ಬಲಹೀನ ಬೆರಳುಗಳ ತುದಿಯಿಂದ
ಹಗ್ಗದಲ್ಲಿ ನೇತಾಡುತ್ತಿರುವ ನೀನು
ಮತ್ತೆ ನನ್ನ ಬೆರಳುಗಳ ಕುಣಿಸುತ್ತಾ...
Source: ಅಲೆ - ಮರಳು
’ಏಕೆ ಈಗ ಕವಿತೆ ಬರೆಯುವುದಿಲ್ಲ’
ಅವಳು ಕೇಳಿದಳು ಕಿವಿಯ ಬಳಿ ಮೆಲ್ಲನೆ
ಕಿವಿಯೊಳಗೆ ಮಾತ್ರ ನುಸುಳುವ ಆ ದನಿಗೆ
ಇಷ್ಟು ವರ್ಷಗಳಿಂದ ಮನಸಾರೆ ಸೋಲುತ್ತಿದ್ದೇನೆ
ಅವಳ ಕಂಡೊಡನೆಯೇ ’ನೀನೇ ನನ್ನ ಕವಿತೆಯ ಸೆಲೆ’
ಎನ್ನುತ್ತಾ ಕವಿತೆಗಳ ಮೇಲೆ ಕವಿತೆಯ ಬರೆದು
ಸಿಂಗರಿಸಿದ್ದೆ ಅವಳ ಮೇಲೆ ನವಿಲಿಗೆ ಇಟ್ಟ ಗರಿಯಂತೆ
ನಾ ಕವಿಯಾಗುತ್ತಾ ಅವಳು ಕವಿತೆಯಾಗುವ ಬೆರಗನ್ನು
ನೋಡಿ ನಾ ನನ್ನ ಮರೆದಿದ್ದೆ
ಆದರೀಗ ಕವಿತೆ ಬರೆಯಬೇಕೆಂದುಕೊಂಡರೆ
ಇವಳ ಹೋಲಿಸಿದ ವಸ್ತುವೇ ಭೂತಾಕಾರವಾಗಿ ಹಾರರ್ ಸ್ಕೋಪಿನಂತೆ ಕಾಡುತ್ತಾ
ಇವಳ ಬಗ್ಗೆ ಉಳಿದಿರುವ ಮೋಹವೂ ಅಟ್ಟಹಾಸ ರೂಪದಲ್ಲಿ ಬೆದರಿಸುವುದು
ಇವಳೇ ಕವಿಶಕ್ತಿ ಕಳೆದುಕೊಳ್ಳಲು ಕಾರಣವೆಂಬ ಸತ್ಯವನ್ನು ನುಂಗಿಕೊಳ್ಳುತ್ತಾ
ಇವಳ...
Source: ಅಲೆ - ಮರಳು