Wednesday 22 March 2023
ಅಮೆರಿಕಾದಲ್ಲಿ ಜೆಟ್-ಸ್ಕಿ ಪೇಚು ಪ್ರಕರಣ
೨೦೦೯ರಲ್ಲಿ ಭಾರತದಲ್ಲಿ ಜೆಟ್-ಸ್ಕಿ ಅಷ್ಟೇನೂ ಪ್ರಸಿದ್ಧವಿರಲಿಲ್ಲ. ಈಗೇನೋ ಸಾಕಷ್ಟು ಜನರು ಗೋವಾದಲ್ಲಿ, ಕಾರವಾರದಲ್ಲಿ
ಜೆಟ್-ಸ್ಕಿ ಮಾಡಿದ್ದೇವೆಂದು ಹೇಳಿಕೊಳ್ಳುತ್ತಾ ಫೋಟೋ ಹಾಕಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಲೈಕ್
ಗಿಟ್ಟಿಸಿಕೊಳ್ಳುತ್ತಾರೆ. ಭಾರತದಲ್ಲಿ ಜೆಟ್-ಸ್ಕಿ ಅನ್ನು ನಾವೇ ಓಡಿಸಿಕೊಂಡು ಹೋಗುವುದನ್ನು ನಾನಂತು ಕೇಳಿಲ್ಲ. ಹೆಚ್ಚಾಗಿ
ಸಮುದ್ರದಲ್ಲಿಯೇ ಇರುವ ಇಂತಹ ಚಟುವಟಿಕೆಗಳಲ್ಲಿ ಜನರು ಜೆಟ್-ಸ್ಕಿ ನಲ್ಲಿ ಹೋಗುತ್ತಾ, ಕಳೆದುಹೋಗಬಹುದು ಎಂಬುದೇ
ಕಾರಣವಿರಬಹುದು. ೨೦೦೯ರಲ್ಲಿ ಅಮೆರಿಕಾದಲ್ಲಿದ್ದಾಗ ಅಲ್ಲಿನ ಒಕ್ಲಾಹೊಮಾ ರಾಜ್ಯದ ಒಂದು ಬೃಹತ್ ಕೆರೆಯಲ್ಲಿ ಜೆಟ್-ಸ್ಕಿ
ಇದೆಯೆಂದು ತಿಳಿದು ಅಲ್ಲಿಗೆ ನಾವು...
'ಬೇಕಾದರೆ ಹಣವನ್ನು ತಿಪ್ಪೆಗೆ ಎಸೆಯಿರಿ, ಆಹಾರವನ್ನಲ್ಲ' ಎಂಬ ಲೇಖನವನ್ನು ಶ್ರೀ ವಿಶ್ವೇಶ್ವರ ಭಟ್ಟರು ವಿಶ್ವವಾಣಿಯ ಗುರುವಾರದ ಅಂಕಣದಲ್ಲಿ ಬರೆದಿದ್ದಾರೆ. ಲೇಖನ ಅತ್ಯುತ್ತಮವಾಗಿದೆ. ಮಾರ್ಗದರ್ಶಕವಾಗಿದೆ. ಖಂಡಿತ ಓದಲೇಬೇಕು. ಪ್ರಧಾನಿ ಮೋದಿಯವರು ಸ್ವಚ್ಛ ಭಾರತ ಅಭಿಯಾನ ಆರಂಭಿಸಿದಾಗ, ಸ್ವಚ್ಛತೆಯ ಬಗ್ಗೆ ಮಾತನಾಡುವ ಕೆಲಸ ಪ್ರಧಾನಿ ಮಾಡುವ ಕೆಲಸವೇ ಎಂದು ಕೇಳಿದವರು ಬಹಳಷ್ಟು ಜನ. ಪ್ರಧಾನ ಸಂಪಾದಕರು ಬರೆಯುವ ಲೇಖನ ವಸ್ತುವೇ ಇದು ಎಂದು ಯಾರಾದರೂ ಈಗಲೂ ಕೇಳಬಹುದು. ಆದರೆ ಭಟ್ಟರು ಬರೆದಿರುವ ಲೇಖನ ಸಾಮಯಿಕ, ಹಾಗೂ ಒಂದು ಉತ್ತಮ ಸಂದೇಶ ನೀಡುವಂಥದ್ದು. ಆ ಬಗ್ಗೆ ನನ್ನ ಟಿಪ್ಪಣಿ ಇಂತಿದೆ:
...
ನನಗೆ ಮುಂಚಿನಿಂದಲೂ ಹಣ್ಣು, ಹೂವು, ಗಿಡ, ಮರಗಳ ಬಗ್ಗೆ ವಿಶೇಷ ಆಸಕ್ತಿ. ಎಷ್ಟೋ ಹೂವುಗಳನ್ನು ಗಿಡಗಳನ್ನು ಸರಿಯಾಗಿಯೇ ಗುರುತಿಸಬಲ್ಲೆ ಎಂದು ಗರ್ವದಿಂದ ಹೇಳಿಕೊಳ್ಳುತ್ತೇನೆ. ಇತ್ತೀಚಿಗೆ ನನ್ನಲ್ಲಿ ಹೊಸದಾಗಿ ಹುಟ್ಟಿರುವ ಹವ್ಯಾಸ- ಹೂವು, ಮರ, ಗಿಡ, ಹಣ್ಣುಗಳ ಚಿತ್ರಗಳನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯುವ, ಅವುಗಳ ಬಗ್ಗೆ ಟಿಪ್ಪಣಿ ಬರೆದಿಡುವ ಪ್ರಯತ್ನವನ್ನು ಮಾಡಿಸುತ್ತಿದೆ. ಬೆಂಗಳೂರಿನಲ್ಲಿ ವಸಂತ ಗ್ರೀಷ್ಮ ಋತುಗಳಲ್ಲಿ ಅರಳುವ ಸಹಸ್ರಾರು ಜಾತಿಯ ಹೂವುಗಳು ಇದಕ್ಕೆ ನೇರ ಕಾರಣವಿರಬಹುದು. ಹೊಸ ಚಿಗುರಿನ, ಅರಳಿನಿಂತ ಹೂಗಳ ಸುಂದರ ದೃಶ್ಯಗಳು ನಮ್ಮೆಲ್ಲರ ಮನಸ್ಸಿನಲ್ಲಿ ಆನಂದವನ್ನು ಉಂಟು ಮಾಡದೇ ಇರದು. ಬೆಂಗಳೂರಿನ ಇತರ ಸಮಸ್ಯೆಗಳ ಮಧ್ಯೆ, ರಸ್ತೆಯಲ್ಲಿ ಎತ್ತರಕ್ಕೆ ಬೆಳೆದು ನಿಂತು...
ಭಾರತದ ಯಾವೊಬ್ಬ (ರಾಜಕೀಯವಾಗಿ ನೋಡದೇ ಸಾಮಾಜಿಕವಾಗಿ ನೋಡುವ) ಪ್ರಜೆಯನ್ನು ಕೇಳಿದರೂ ಆರೆಸ್ಸೆಸ್ ಒಂದು ಸಾಮಾಜಿಕ ಸೇವಾ ಸಂಘಟನೆ ಎಂದೇ ಗುರುತಿಸುತ್ತದೆ. ದೇಶಕ್ಕೆ ಅಭಿವೃದ್ಧಿ ಕೇವಲ ಸರ್ಕಾರಗಳು...
ಬ್ಲಾಕ್ ಭಾಗ್ಯ ಕರುಣಿಸಿದ ಟ್ವಿಟರ್ ಚಿಂತಕ
ಟ್ವಿಟರ್ ಎಂಬ ಆಪ್ ನಲ್ಲೇ,
ಜಗತ್ತಿನ ಡೊಂಕನು ತಿದ್ದುವಂಥ |
ಅಭಿವ್ಯಕ್ತಿ ಸ್ವಾತಂತ್ರ್ಯದ ಹರಿಕಾರನೊಬ್ಬ
ಬ್ಲಾಕ್ ಮಡಿದ ಕಥೆ ಇದು ||
(ಧರಣಿಮಂಡಲ ಮಧ್ಯದೊಳಗೆ ಹಾಡಿನ ಶೈಲಿಯಲ್ಲಿ ಹಾಡಿಕೊಳ್ಳಿ)
ಕೆಳಗೆ ಕೊಟ್ಟಿರುವ ಚಿತ್ರ ಗಮನಿಸಿದರೆ, ನಿಮಗೇ ಎಲ್ಲವೂ ಅರ್ಥ ವಾಗುತ್ತದೆ. How to get blocked easily in 2 steps ಅನ್ನುವುದಕ್ಕೆ ಇದು ಒಳ್ಳೆಯ ನಿದರ್ಶನ. ಗಣೇಶ ಚೇತನ್ ರನ್ನು ಹಿಂದೆಯೂ ಆಗಾಗ್ಗೆ ಪ್ರಶ್ನೆ ಕೇಳಿದ್ದಿದೆ. ಈ ಬಾರಿ ರೀಟ್ವೀಟ್ ಮಾಡಿ, ನನ್ನ ಅಭಿಪ್ರಾಯವನ್ನು ಹೇಳಿದ್ದಕ್ಕೆ ಮೋಸ ಹೋಗಿಬಿಟ್ಟೆ. ಫಟ್ಟನೆ ಬ್ಲಾಕ್ ಮಾಡಿ ಬಿಟ್ಟರು. ಗಣೇಶ ಚೇತನ್ ಹಂಸಲೇಖ ಪರ ನಿಂತು, "ಸಂಘಿಗಳು ಹೇಗೆ" ಎಂಬ ಬಗ್ಗೆ ಬರೆಯಬಹುದಾದರೆ ನಾನು ಆ ಕೆಲ "...
ಬೆಂಗಳೂರಿನಲ್ಲಿ ಎಂಥ ಜೋರು ಮಳೆ. ಆಗಾಗ್ಗೆ ಮನೆಯ ಹೊರ ಬಂದು ನೋಡಿದರೆ ಅಲ್ಲಿ ಓಡಾಡುತ್ತಿರುವುದು ಕಾರುಗಳು ಅಥವಾ ಝೋಮಾಟೋ, ಸ್ವಿಗ್ಗಿ ಡೆಲಿವರಿ ಹುಡುಗರು. ಇಂಥ ಜೋರು ಮಳೆಯಲ್ಲಿ ಅವರಂತೂ ಪಾಪ ತಮ್ಮ ಕೆಲಸ ಮಾಡಬೇಕು. ಅಲ್ಲದೆ, ಸ್ವಲ್ಪ ಹೆಚ್ಚಾಗಿಯೇ ಮಾಡಬೇಕು. ಮಳೆ ಬರ್ತಿದೆ, ಬೋಂಡ, ಬಜ್ಜಿ, ಪಿಜ್ಜಾ, ಬಿಸಿ ಬಿಸಿ ಮತ್ತೇನೋ ತಿನ್ನಬೇಕೆಂಬ ಖಯಾಲಿ ಉಂಟಾದರೆ ಹೋಟೆಲ್ ಆರ್ಡರ್ ಮಾಡೋದು ಅನಿವಾರ್ಯ, ಇವರುಗಳೇ ಮನೆಗೆ ತರಬೇಕು. ಬಿಸಿ ಬಿಸಿ ತರಲಿಲ್ಲ ಅಂದ್ರೆ ಡೆಲಿವರಿ ಹುಡುಗರಿಗೆ ಝಾಡಿಸ್ತಾರೆ ಜನ. ತಿನ್ನೋ ಖಯಾಲಿ ಕಡಿಮೆ ಮಾಡಿಕೊಳ್ಳಿ ಎಂದು ಬೋಧನೆ ಮಾಡಿದರೆ, ನಮ್ಮ ಹೊಟ್ಟೆ ಮೇಲೆ ಯಾಕೆ ಹೊಡೀತೀರಾ ಸಾರ್ ಎಂದು ಡೆಲಿವರಿ ಹುಡುಗರೂ ಕೇಳಬಹುದು. ಮರದಡಿಯಲ್ಲಿ ಮಳೆ ನಿಲ್ಲುವುದನ್ನೇ ಕಾಯುತ್ತಿದ್ದ ಡೆಲಿವರಿ ಹುಡುಗನನ್ನು...
ಫೀಚರ್ ಫೋನ್ ಬಳಕೆದಾರರನ್ನು ಸ್ಮಾರ್ಟ್ಫೋನಿನತ್ತ ಕರೆದೊಯ್ಯುವ ಮೂಲಕ ಭಾರತವನ್ನು '2ಜಿ-ಮುಕ್ತ'ವಾಗಿಸುವ ತನ್ನ ಯೋಜನೆಯ ಅಂಗವಾಗಿ ರಿಲಯನ್ಸ್ ಜಿಯೋ ಹೊಸದೊಂದು ಸ್ಮಾರ್ಟ್ಫೋನನ್ನು ಮಾರುಕಟ್ಟೆಗೆ ಪರಿಚಯಿಸುತ್ತಿದೆ. ಕಡಿಮೆ ಪ್ರವೇಶ ಬೆಲೆಯಲ್ಲಿ ಎಲ್ಲರೂ ಸ್ಮಾರ್ಟ್ಫೋನ್ ಖರೀದಿಸಲು ಸಾಧ್ಯವಾಗಬೇಕು ಎಂಬ ಗುರಿ, 'ಜಿಯೋಫೋನ್ ನೆಕ್ಸ್ಟ್' ಎಂಬ ಹೆಸರಿನ ಈ ಹೊಸ ಫೋನಿನ ವೈಶಿಷ್ಟ್ಯ.
ರೂ. 6499/- ಮುಖಬೆಲೆಯ ಈ ಫೋನನ್ನು ಮೊದಲಿಗೆ ರೂ. 2499 (ರೂ. 1999 + ರೂ. 500...
'ನಿನ್ನಿಂದಲೇ...' ಹಾಡಿನೊಂದಿಗೆ ಬೆಸೆದಿರುವ ಒಂದು ನೆನಪು.
‘ಟಿಮ್ (Tim)ಇಂದಲೇ ಟಿಮ್ ಇಂದಲೇ ನನ್ ಲೈಫು ಹಾಳಾಗಿದೆ….’ ಹೀಗೊಂದು ನಿನ್ನಿಂದಲೇ ಹಾಡಿನ ಅಣಕುವಾಡು ನಾವು ಕೆಲಸ ಮಾಡುತ್ತಿದ್ದ ಟೀಮ್ ನಲ್ಲಿ ಪ್ರಚಲಿತವಾಗಿತ್ತು. ಆಗೆಲ್ಲ ಪ್ರಶಾಂತ ಹಾಗೂ ನಾನು ಕನ್ನಡದ ಯಾವುದೇ ಹೊಸ ಸಿನಿಮಾದ ಹಾಡುಗಳು ಬಿಡುಗಡೆಯಾಯ್ತೆಂದು ತಿಳಿದ ಕೂಡಲೇ Cooltoad.com, Kannadaaudio.com, raaga.com...
I was at a public place reading this editorial by Deccan Herald on my mobile. May be the person next to me was peeping into my mobile also observing that I was getting agitated on reading each and every sentence. He was in his mid 40s. The moment I locked my screen post reading this, he asked me what do they have to say?
On further probing he answered, that he saw Mohan Bhagwat's picture in what I was reading and was curious to know what Deccan Herald had written.
...
ಕಾರ್ ನ ಟಯರ್ ಪಂಕ್ಚರ್ ಕಲಿಸಿದ ಹೊಸ ಪಾಠ
ಶುಕ್ರವಾರ ಆಫಿಸ್ ನಲ್ಲಿ ಒಂದು ಪ್ರಶಿಕ್ಷಣ ನಡೆಯುತ್ತಿತ್ತು. "It is always good to be vulnerable at work" ಎಂಬ ಪಾಠ ಸಾಂಗವಾಗಿ ನಡೆದಿತ್ತು. ಕೆಲಸದ ವೇಳೆ ಯಾವುದೋ ವಿಷಯ ಗೊತ್ತಿಲ್ಲದಿದ್ದರೆ ಸಹೋದ್ಯೋಗಿಗಳನ್ನು ಕೇಳಿಕೊಳ್ಳಿ; ಮುಜುಗರಪಡಬೇಡಿ, ನಿಮಗೆ ಯಾವುದೋ ವಿಷಯ ಗೊತ್ತಿರದೇ ನಿಮ್ಮ ಮನಸ್ಸಿಗೆ ತೋಚಿದಂತೆ ಮಾಡುವಾಗ ಆ ಕೆಲಸದ ಫಲವೂ ಅಂತೆಯೇ ಇರುತ್ತದೆ. ಪುನಃ ಬುಡದಿಂದ ಕೆಲಸಮಾಡುವ ಪ್ರಮೇಯ ಬಂದೊದಗಬಹುದು ಎಂದು ವಿವರಿಸುತ್ತಿದ್ದರು. ನಾವು ಹಲವು ಬಾರಿ ಈ ತಪ್ಪು ಮಾಡುತ್ತೇವೆನಿಸುತ್ತದೆ. ನಮಗೆ ಗೊತ್ತಿರದ ಕೆಲಸದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಗೋಜಿಗೆ ಹೋಗದೆ, ತೋಚಿದಂತೆ ಮಾಡಿಬಿಡುತ್ತೇವೆ...
ನಾವೇಕೆ ಅವರಂತಿರಬಾರದೆಂದು ನಮ್ಮನ್ನು ಪ್ರಶ್ನಿಸುವ ಪುಸ್ತಕ – ‘ಇದ್ದರಿಂಥವರೆಮ್ಮ ನಡುವಲಿ’
“ಇದ್ದರಿಂಥವರೆಮ್ಮ ನಡುವಲಿ” ಎಂಬುದು ಹಿರಿಯ ಸಂಸ್ಕೃತ ವಿದ್ವಾಂಸರು ಹಾಗೂ ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ನಾನಾ ಪುಸ್ತಕಗಳ ಕರ್ತೃ ಡಾ. ಎಚ್ ಆರ್ ವಿಶ್ವಾಸ ಅವರ ನೂತನ ಕೃತಿ. ತಮ್ಮನ್ನು ಹಲವು ರೀತಿಯಲ್ಲಿ ಪ್ರೇರೇಪಿಸಿರುವ ಮಹನೀಯರ ಬಗೆಗಿನ ಬರಹಗಳುಳ್ಳ ಕೃತಿ “ಇದ್ದರಿಂಥವರೆಮ್ಮ ನಡುವಲಿ” ಆಗಿದೆ. ಪ್ರಸ್ತುತ, ಡಾ. ವಿಶ್ವಾಸರು ಸಂಸ್ಕೃತ ಭಾರತೀಯ ಅಖಿಲ ಭಾರತೀಯ ಶಿಕ್ಷಣ ಪ್ರಮುಖ್ ಜವಾಬ್ದಾರಿಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ.
ಸಂಸ್ಕೃತ ಭಾರತಿ, ಹಿಂದೂ ಸೇವಾ ಪ್ರತಿಷ್ಠಾನದ ಅಡಿಯಲ್ಲಿ ಕಾರ್ಯ ನಿರ್ವಹಿಸಲು ಆರಂಭಿಸಿದ್ದು ಸಂಸ್ಕೃತ ಸರಳ ಭಾಷೆ, ಅದನ್ನು ಎಲ್ಲರೂ ನಿತ್ಯ ವ್ಯವಹಾರದಲ್ಲಿ ಬಳಸಬಹುದು ಹಾಗೂ ಎಲ್ಲರೂ...
ಇಂದು ಜೂಲೈ ೮ 2020. ಇಂದಿಗೆ ೧೧೦ ವರ್ಷಗಳ ಕೆಳಗೆ ಬ್ರಿಟಿಷರಿಂದ ಬಂಧಿತರಾದ ಸ್ವಾತಂತ್ರ್ಯ ವೀರ ಸಾವರ್ಕರ್, ಫ್ರಾನ್ಸ್ ನ ಮಾರ್ಸೆ (Marseille) ನಲ್ಲಿ ಮೊರಿಯಾ (Morea) ಹಡಗಿನಿಂದ ಸಾಗರಕ್ಕೆ ಹಾರಿ ದಡ ಸೇರಿದವರು. ಆ ನೆನಪಿನಲ್ಲಿ ಈ ಬರಹ, ವಿಡಿಯೋ
ವೀರ್ ಸಾವರ್ಕರ್ ಅಭಿಮಾನಿಯಾಗಿದ್ದರೆ ಈ ಹಾಡನ್ನು ಕೇಳಿರದಿದ್ದರೂ ಶೀರ್ಷಿಕೆಯನ್ನಾದರೂ ಕೇಳಿರುತ್ತೀರಿ.
ವೀರ್ ಸಾವರ್ಕರ್ ಅಭಿಮಾನಿಯಾಗಿದ್ದಾಗ್ಯೂ ಅವರ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ ಎಂಬುದು ಪ್ರತಿ ಬಾರಿ ಹೊಸತೊಂದು ವಿಷಯ ಅರಿತುಕೊಂಡಾಗ ನನಗೆ ಮಾನವರಿಗೆಯಾಗುತ್ತದೆ. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಭಾಷಣವೊಂದರಲ್ಲಿ 'ಸಾವರ್ಕರ್ ಮಾನೆ...' ಎಂದು ಆರಂಭಿಸಿ ಅವರ ಗುಣಗಾನ ಮಾಡುವಾಗ "ಸಾಗರ...
ಕನ್ನಡದ ಬ್ಲಾಗುಗಳು, ವೆಬ್ಸೈಟುಗಳು ಅಂತರ್ಜಾಲದಲ್ಲಿ ಈಗ ನೂರಾರು. ಅವುಗಳನ್ನು ನೆನಪಿಟ್ಟುಕೊಂಡು ಪ್ರತಿ ನಿತ್ಯ ಭೇಟಿ ಕೊಡುವುದು ಕಷ್ಟ. ಇದನ್ನು ಸುಲಭವಾಗಿಸುವ ಗುರಿ ಈ ಯೋಜನೆಯದು. ಜೊತೆಗೆ ಕನ್ನಡದ ಪುಟಗಳಿಗೆ ಹೆಚ್ಚಿನ ಓದುಗರು ಬರುವಂತೆ ಮಾಡುವ ಪ್ರಯತ್ನ ಕೂಡ.
ಗಮನಿಸಿ: ಪುಟಗಳು, ಬರಹಗಳನ್ನು ಸಂಪೂರ್ಣ ಓದಲು ಓದುಗರನ್ನು ಆಯಾ ವೆಬ್ಸೈಟಿಗೇ ಕರೆದೊಯ್ಯಲಾಗುವುದು.
ನಿಮ್ಮದೂ ಒಂದು ಕನ್ನಡ ಬ್ಲಾಗ್ ಅಥವ ವೆಬ್ಸೈಟು ಇದ್ದಲ್ಲಿ ನಿಮ್ಮ ಬರಹಗಳೂ ಈ ಪಟ್ಟಿಯಲ್ಲಿ ಬರುವಂತೆ ಮಾಡಲು ಇಲ್ಲಿ ಕ್ಲಿಕ್ ಮಾಡಿ.