20
April
2014

Planet Kannada | ಪ್ಲಾನೆಟ್ ಕನ್ನಡ

ಅಂತರ್ಜಾಲದ ಕನ್ನಡ ಪುಟಗಳು ಅಂತರ್ಜಾಲದ ಕನ್ನಡ ಜಗತ್ತು

ಪ್ಲಾನೆಟ್ ಕನ್ನಡ
ಅಂತರ್ಜಾಲದ ಕನ್ನಡ ಜಗತ್ತು

ಏನಿದು ಪ್ಲಾನೆಟ್ ಕನ್ನಡ?

ಸಂಪದ Sampada
ಇದು ಸಂಪದದ ಒಂದು ಯೋಜನೆ.

ನ್ನಡದ ಬ್ಲಾಗುಗಳು, ವೆಬ್ಸೈಟುಗಳು ಅಂತರ್ಜಾಲದಲ್ಲಿ ಈಗ ನೂರಾರು. ಅವುಗಳನ್ನು ನೆನಪಿಟ್ಟುಕೊಂಡು ಪ್ರತಿ ನಿತ್ಯ ಭೇಟಿ ಕೊಡುವುದು ಕಷ್ಟ. ಇದನ್ನು ಸುಲಭವಾಗಿಸುವ ಗುರಿ ಈ ಯೋಜನೆಯದು. ಜೊತೆಗೆ ಕನ್ನಡದ ಪುಟಗಳಿಗೆ ಹೆಚ್ಚಿನ ಓದುಗರು ಬರುವಂತೆ ಮಾಡುವ ಪ್ರಯತ್ನ ಕೂಡ.

 

ಗಮನಿಸಿ: ಪುಟಗಳು, ಬರಹಗಳನ್ನು ಸಂಪೂರ್ಣ ಓದಲು ಓದುಗರನ್ನು ಆಯಾ ವೆಬ್ಸೈಟಿಗೇ ಕರೆದೊಯ್ಯಲಾಗುವುದು.

ನಿಮ್ಮದೂ ಒಂದು ಕನ್ನಡ ಬ್ಲಾಗ್ ಅಥವ ವೆಬ್ಸೈಟು ಇದ್ದಲ್ಲಿ ನಿಮ್ಮ ಬರಹಗಳೂ ಈ ಪಟ್ಟಿಯಲ್ಲಿ ಬರುವಂತೆ ಮಾಡಲು ಇಲ್ಲಿ ಕ್ಲಿಕ್ ಮಾಡಿ.

ಸುದ್ದಿ

ಕೋಲ್ಕತ್ತಾ, ಏ.20: ಈ ಮೊದಲು ಅಸ್ಸಾಂನಲ್ಲಿ ಈಗ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಯುವರಾಜ ರಾಹುಲ್ ಗಾಂಧಿ ಕೆನ್ನೆಗೆ ಮತ್ತೆ ಚುಂಬನ ಭಾಗ್ಯ ಸಿಕ್ಕಿದೆ. ಮುರ್ಷಿದಾಬಾದಿನಲ್ಲಿ ಚುನಾವಣಾ ಪ್ರಚಾರ ಸಮಾವೇಶಕ್ಕೆ ಬಂದಿದ್ದ ರಾಹುಲ್ ಗಾಂಧಿಯನ್ನು ವ್ಯಕ್ತಿಯೊಬ್ಬ ಚುಂಬಿಸಿದ್ದಾನೆ. ಅಸ್ಸಾಂನಲ್ಲಿ ರಾಹುಲ್ ಗೆ ಮುತ್ತಿಟ್ಟ ಮಹಿಳೆ ದುರಂತ ಸಾವನ್ನಪ್ಪಿದ್ದಳು. ಶನಿವಾರ ಬೆಹ್ರಾಮ್ ಪುರದಲ್ಲಿ ಚುನಾವಣಾ ಪ್ರಚಾರಕ್ಕೆ ಬಂದಿಳಿದ ರಾಹುಲ್

Source: ಒನ್ ಇಂಡಿಯಾ - ಕನ್ನಡ

ಬೆಂಗಳೂರು, ಏ.20: ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನಲ್ಲಿ ಭಾನುವಾರ ಬೆಳಗ್ಗೆ ಲಘು ಭೂಕಂಪನ ಅನುಭವವಾಗಿದೆ. ತಾಲೂಕಿನ ಕೆಲವು ಗ್ರಾಮದ ಜನತೆಯಲ್ಲಿ ಕೆಲ ಕಾಲ ಆತಂಕದ ವಾತಾವರಣ ಉಂಟಾಗಿತ್ತು. ಭಾನುವಾರ ಬೆಳಿಗ್ಗೆ 6 ರಿಂದ 8 ಸೆಕೆಂಡುಗಳ ಕಾಲ ಲಘು ಭೂಕಂಪವಾಗಿದೆ ಎಂದು ತಿಳಿದು ಬಂದಿದೆ. ಆದರೆ, ಜಿಲ್ಲಾಡಳಿತ ಇದು ಬಂಡೆ ಒಡೆಯಲು ಇಟ್ಟ ಡೈನಾಮೆಟ್ ಸದ್ದಿನಿಂದ

Source: ಒನ್ ಇಂಡಿಯಾ - ಕನ್ನಡ

ಹೊಸೂರು, ಏ.20: ಕರ್ನಾಟಕ ಹಾಗೂ ತಮಿಳುನಾಡು ಗಡಿ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ಪರ ಪ್ರಚಾರಕ್ಕೆ ತೆರಳಿದ್ದ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಕಾವೇರಿ ನದಿ ಜಲ ವಿವಾದಕ್ಕೆ ತಮಿಳುನಾಡಿನ ಸಿಎಂ ಜಯಲಲಿತಾ ನೇರ ಕಾರಣ ಎಂದಿದ್ದಾರೆ. ಸುಪ್ರೀಂಕೋರ್ಟ್ ಸೂಚಿಸಿರುವ ಮಾಗದರ್ಶನದಂತೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಶನಿವಾರ ತಮಿಳುನಾಡಿನ ಕೃಷ್ಣಗಿರಿಯಲ್ಲಿ

Source: ಒನ್ ಇಂಡಿಯಾ - ಕನ್ನಡ

ಬೆಂಗಳೂರು, ಏ.20: ದೇಶದೆಲ್ಲೆಡೆಯ ಈ ದಿನದ ಚುನಾವಣಾ ರೌಂಡ್ ಆಪ್ ನಿಮಗಾಗಿ ಇಲ್ಲಿದೆ. ಇಲ್ಲಿ ಬರೀ ಹೆಡ್ ಲೈನ್ ಗಳು, ಟೂ ಲೈನ್ ಅಥವಾ ಒಂದು ಪ್ಯಾರಾ ಸುದ್ದಿಗಳು, ಚುಟುಕು ಮಾಹಿತಿ ಮಾತ್ರ ನಿಮಗೆ ಸಿಗುತ್ತದೆ.ದೇಶದ ಒಟ್ಟಾರೆ ರಾಜಕೀಯ ರಂಗು ನಿಮ್ಮ ಪರದೆ ಮೇಲೆ ಚೆಲ್ಲುವ ಪ್ರಯತ್ನ ಇದಾಗಿದೆ.12.45: ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ನರೇಂದ್ರ

Source: ಒನ್ ಇಂಡಿಯಾ - ಕನ್ನಡ

ತಿರುವನಂತಪುರದ ಅನಂತ ಪದ್ಮನಾಭ ಸ್ವಾಮಿ ಚಿನ್ನಕ್ಕೆ 'ಭಾರಿ' ಒಳಗಳ್ಳರ ಕಾಟ ಶುರುವಾಗಿದೆ. ಆಡಳಿತ ಮಂಡಳಿಯವರೇ ನೇರವಾಗಿ ಚಿನ್ನ ಕಳವಿನಲ್ಲಿ ಭಾಗಿಯಾಗಿದ್ದಾರೆ.

Source: ಕನ್ನಡಪ್ರಭ

ಸುಪ್ರೀಂ ಕೋರ್ಟ್ ನಿರ್ದೇನದಂತೆ ಆಂಧ್ರಪ್ರದೇಶ-ಕರ್ನಾಟಕ ಗಡಿ ಗುರುತಿಸುವ ಕಾರ್ಯಕ್ಕೆ ಸರ್ವೆ ಆಫ್ ಇಂಡಿಯಾ ಶನಿವಾರ ಚಾಲನೆ ನೀಡಿದೆ.

Source: ಕನ್ನಡಪ್ರಭ

ಕೇಂದ್ರದಲ್ಲಿ ತೆರೆಮರೆಯಿಂದ ಸರ್ಕಾರ ನಡೆಸಿದ್ದಕ್ಕಾಗಿ ಅಮ್ಮ- ಮಗ ತಕ್ಕ ಬೆಲೆ ತೆರಬೇಕಾದೀತು ಎಂದು ನರೇಂದ್ರ ಮೋದಿ ಎಚ್ಚರಿಸಿದ್ದಾರೆ.

Source: ಕನ್ನಡಪ್ರಭ

ತಾಲೂಕಿನ ನಿಡಗುಂದಿಯ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆಯಲ್ಲಿ ಗ್ರಾಹಕರಿಗೆ ನಕಲಿ ನೋಟುಗಳನ್ನು ನೀಡಿರುವ ಬಗ್ಗೆ ವರದಿಯಾಗಿದೆ.

Source: ಕನ್ನಡಪ್ರಭ

ತನಿಕೋಡು ಅರಣ್ಯ ತನಿಖಾ ತಪಾಸಣಾ ಕೇಂದ್ರದ ಬಳಿ ನಡೆದ ಗುಂಡಿನ ದಾಳಿಯಲ್ಲಿ ಒಬ್ಬ ಮೃತಪಟ್ಟ ಘಟನೆ ಶನಿವಾರ ಬೆಳಗಿನ ಜಾವ ಸಂಭವಿಸಿದೆ.

Source: ಕನ್ನಡಪ್ರಭ

ಉತ್ತರ ಕರ್ನಾಟಕದಲ್ಲಿ ಶನಿವಾರವೂ ಅಕಾಲಿಕ ಮಳೆಯಾಗಿದ್ದು ಭಾರಿ ಪ್ರಮಾಣದ ಬೆಳೆಹಾನಿ ಹಾಗೂ..

Source: ಕನ್ನಡಪ್ರಭ

ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿ ದಂತೆ ಮೇ 24ರಂದು ಕೋರ್ಟ್‌ಗೆ ಹಾಜರಾಗದಿದ್ದರೆ ಕ್ರಮ ಕೈಗೊಳ್ಳಬೇಕಾಗುತ್ತದೆ  ಎಂದು ‘ಆಮ್‌ ಆದ್ಮಿ ಪಕ್ಷ’ದ (ಎಎಪಿ) ಮುಖಂಡ ಅರವಿಂದ ಕೇಜ್ರಿವಾಲ್‌ ಹಾಗೂ ಪಕ್ಷದ ಇನ್ನಿತರ ಮೂವರು ಸದಸ್ಯರಿಗೆ ದೆಹಲಿ ಮೆಟ್ರೊಪಾಲಿಟನ್‌ ನ್ಯಾಯಾಲಯ ಶುಕ್ರವಾರ ಎಚ್ಚರಿಕೆ ನೀಡಿದೆ.

Source: ಪ್ರಜಾವಾಣಿ - ರಾಷ್ಟ್ರೀಯ

ಕಾಶ್ಮೀರದ ದೊಡಾ ಜಿಲ್ಲೆಯ ಪುಲ್‌ ದೊಡಾ ಪ್ರದೇಶದಲ್ಲಿ ಶನಿವಾರ ಸಂಭವಿಸಿದ ಭೂಕುಸಿತದಲ್ಲಿ ತಂದೆ– ಮಗಳು ಮೃತಪಟ್ಟಿದ್ದಾರೆ.

Source: ಪ್ರಜಾವಾಣಿ - ರಾಷ್ಟ್ರೀಯ

ಅಕ್ರಮವಾಗಿ ಗಡಿ ಪ್ರವೇಶಿಸಿದ ಪಾಕಿಸ್ತಾನದ 17 ಮಂದಿಯನ್ನು ಸಶಸ್ತ್ರ ಸೀಮಾ ಬಲ (ಎಸ್‌ಎಸ್‌ಬಿ) ಸಿಬ್ಬಂದಿ ಭಾರತದ ಗಡಿಭಾಗ ವಾದ ಸೊನೌಲಿ ಎಂಬಲ್ಲಿ ಶುಕ್ರವಾರ ಬಂಧಿಸಿದ್ದಾರೆ. ಬಂಧಿತರಲ್ಲಿ ಮೂವರು ಮಹಿಳೆಯರು ಮತ್ತು ಹತ್ತು ಮಕ್ಕಳು  ಸೇರಿದ್ದಾರೆ.

Source: ಪ್ರಜಾವಾಣಿ - ರಾಷ್ಟ್ರೀಯ

ಶಕ್ತಿ ಮಿಲ್ಸ್‌ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಮೂವರು ಅಪರಾಧಿಗಳಿಗೆ ವಿಧಿಸಲಾಗಿ­ರುವ ಮರಣ­ದಂಡನೆಯನ್ನು ದೃಢೀಕರಿ­ಸು­­ವಂತೆ ಕೋರಿ ಬಾಂಬೆ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

Source: ಪ್ರಜಾವಾಣಿ - ರಾಷ್ಟ್ರೀಯ

ಒಡಿಶಾದ ಕೇಂದ್ರಪಾದ ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಚುನಾವಣೋತ್ತರ ಹಿಂಸಾಚಾರ ಭುಗಿಲೆದ್ದಿದ್ದು, ಬಿಜು ಜನತಾದಳದ (ಬಿಜೆಡಿ) ಬೆಂಬಲಿಗ­ರೊಬ್ಬರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.

Source: ಪ್ರಜಾವಾಣಿ - ರಾಷ್ಟ್ರೀಯ

ಜೈ ಸಮೈಕ್ಯಾಂಧ್ರ ಪಕ್ಷದ (ಜೆಎಸ್‌ಪಿ) ಮುಖ್ಯಸ್ಥರಾದ ಎನ್‌.ಕಿರಣ್‌ ಕುಮಾರ್‌ ರೆಡ್ಡಿ ಅವರು ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸದೇ ಇರಲು ನಿರ್ಧರಿಸಿದ್ದಾರೆ.

Source: ಪ್ರಜಾವಾಣಿ - ರಾಷ್ಟ್ರೀಯ

ಕೇಂದ್ರದ ಮಾಜಿ ಸಚಿವೆ ಡಿ. ಪುರಂದೇಶ್ವರಿ, ಆಂಧ್ರಪ್ರದೇಶದ ಮಾಜಿ ಕಾಂಗ್ರೆಸ್‌ ಅಧ್ಯಕ್ಷ ಬೋತ್ಸ ಸತ್ಯನಾರಾಯಣ ಸೇರಿದಂತೆ ಹಲವು ಪ್ರಮುಖರು ಆಂಧ್ರ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಾಗಿ ಶನಿವಾರ ನಾಮಪತ್ರ ಸಲ್ಲಿಸಿದರು.

Source: ಪ್ರಜಾವಾಣಿ - ರಾಷ್ಟ್ರೀಯ

ಆಮ್‌ ಆದ್ಮಿ ಪಕ್ಷದ ನಾಯಕಿ ಮತ್ತು ನಟಿ ಗುಲ್‌ ಪನಾಗ್‌ ಅವರು ಶನಿವಾರ ಅಮೃತಸರದ ಸ್ವರ್ಣ ಮಂದಿರಕ್ಕೆ ಪೂಜೆ ಸಲ್ಲಿಸಲು ಬಂದಿದ್ದ  ಭಕ್ತರ ಪಾದರಕ್ಷೆಗಳನ್ನು ಎತ್ತಿ ಇಡುವ ಮೂಲಕ ಸೇವೆ ಸಲ್ಲಿಸಿದರು

Source: ಪ್ರಜಾವಾಣಿ - ರಾಷ್ಟ್ರೀಯ

ತಿರುವನಂತಪುರ ‘ಶ್ರೀ ಪದ್ಮನಾ­ಭಸ್ವಾಮಿ ದೇಗುಲದ ಆಡಳಿತ ನಿರ್ವಹಣೆಯಲ್ಲಿ ಹಾಗೂ ನೆಲಮಾಳಿಗೆಯಲ್ಲಿನ ಅಮೂಲ್ಯ ಸಂಪತ್ತಿನ ರಕ್ಷಣೆಯಲ್ಲಿ ಗಂಭೀರ ಲೋಪಗಳಾಗಿವೆ’ ಎಂದು ನ್ಯಾಯಾಲಯದ ಸಹಾಯಕ  ವಕೀಲ ಗೋಪಾಲ್‌ ಸುಬ್ರಮಣಿಯಮ್‌ ಅವರು ಸುಪ್ರೀಂಕೋರ್ಟ್‌ಗೆ ಶುಕ್ರವಾರ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ.

Source: ಪ್ರಜಾವಾಣಿ - ರಾಷ್ಟ್ರೀಯ
Source: Prajavani

ಮುಂದೆ ಏನು? ಜನತಾದಳ (ಎಸ್‌) ವರಿಷ್ಠ ದೇವೇಗೌಡರ ಮುಂದೆ ಈ ಪ್ರಶ್ನೆ ಇದೆಯೋ ಇಲ್ಲವೋ ಗೊತ್ತಿಲ್ಲ. ಕುಮಾರಸ್ವಾಮಿ, ರೇವಣ್ಣ ಅವರಿಗೆ ಈ ಪ್ರಶ್ನೆ ಕಾಡುತ್ತಿದೆಯೋ ಇಲ್ಲವೋ ಅದೂ ಗೊತ್ತಿಲ್ಲ. ಆದರೆ, ದೇವೇಗೌಡರ ಕುಟುಂಬಕ್ಕೆ ಸೇರದ ಎರಡನೇ ಹಂತದ ನಾಯಕರು ಮತ್ತು ಕಾರ್ಯಕರ್ತರನ್ನು ಈ ಪ್ರಶ್ನೆ ತೀವ್ರವಾಗಿ ಕಾಡುತ್ತಿದೆ.

Source: Prajavani

ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರ ವಿರುದ್ಧ ಶನಿವಾರ ತೀವ್ರ ವಾಗ್ದಾಳಿ ನಡೆಸಿರುವ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು ‘ರಿಮೋಟ್‌ ಕಂಟ್ರೋಲ್‌’ನಿಂದ ದೇಶದ ಆಡಳಿತ ನಡೆಸಲಸಾಧ್ಯ ಎಂದು ಕುಟುಕಿದರು.

Source: ಪ್ರಜಾವಾಣಿ - ರಾಷ್ಟ್ರೀಯ

ಭೋಪಾಲ್, ಏ 19: ಅತಿಕಮ್ಮಿ ಅವಧಿಯಲ್ಲಿ ರಾಜಕೀಯ ಏಣಿಯ ಪರಾಕಾಷ್ಠೆ ತಲುಪಿದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಹೆಸರಿನಲ್ಲಿ ಒಂದು ಸಾವಿರ 'ನಕಲಿ ಕೇಜ್ರಿವಾಲ್ 'ಮಧ್ಯಪ್ರದೇಶದ ಕಾಂಡ್ವಾ ಜಿಲ್ಲೆಯ ಗ್ರಾಮವೊಂದರಲ್ಲಿದ್ದಾರಂತೆ! ಇದು ಅಭಿಮಾನವೋ ಅಥವಾ ಅಭಿಮಾನದ ಅತಿರೇಕವೋ, ಒಟ್ಟಿನಲ್ಲಿ ಕಾಂಡ್ವಾ ಜಿಲ್ಲೆಯ ಗೋಲಂಗಾನ್ ಎನ್ನುವ ಗ್ರಾಮದಲ್ಲಿ ಮಕ್ಕಳಿಂದ ಹಿಡಿದು ದೊಡ್ಡವರ ತನಕ ತಮ್ಮನ್ನು

Source: ಒನ್ ಇಂಡಿಯಾ - ಕನ್ನಡ

ಉತ್ತರ ಕನ್ನಡ, ಏ. 19 : ಕುಮುಟಾದಲ್ಲಿ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ಎಂಬ ಆರೋಪ ಎದುರಿಸುತ್ತಿದ್ದ ಕೆಎಸ್ಆರ್ ಟಿಸಿ ಬಸ್ ಕಂಡಕ್ಟರ್ ಕಮಲಾಕರ್ ಶನಿವಾರ ಯಲ್ಲಾಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಎರಡು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದ ಬಾಲಕಿ, ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಕುಮುಟಾ ಡಿಪೋದಲ್ಲಿ ಕಂಡಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಕಮಲಾಕರ್ ಬಾಡಾ

Source: ಒನ್ ಇಂಡಿಯಾ - ಕನ್ನಡ

ಬೊಂಗೈಗಾಂವ್ (ಆಸ್ಸಾಂ), ಏ. 19 : "ರಾಹುಲ್ ಗಾಂಧಿ ನೀವು ಇಂದು (ಶನಿವಾರ) ಆಸ್ಸಾಂನಲ್ಲಿದ್ದೀರಿ, ನಾನೂ ಆಸ್ಸಾಂನಲ್ಲಿದ್ದೇನೆ. ಬನ್ನಿ ಮುಖಾಮುಖಿಯಾಗೋಣ" ಎಂದು ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಉಪಾಧ್ಯಕ್ಷರಿಗೆ ಸವಾಲು ಹಾಕಿದ್ದಾರೆ. ಆಸ್ಸಾಂನ ಬೊಂಗೈಗಾಂವ್ ಜಿಲ್ಲೆಯ ಕಕೊಯ್ಜಾನ್ ನಲ್ಲಿ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ನರೇಂದ್ರ ಮೋದಿ ಅವರು, 'ಶೆಹಜಾದೆ' ರಾಹುಲ್

Source: ಒನ್ ಇಂಡಿಯಾ - ಕನ್ನಡ

ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ  ನ್ಯಾಯಾಲಯದ ಮುಂದೆ ಮೇ 24ರೊಳಗೆ ಖುದ್ದು ಹಾಜರಾಗದಿದ್ದರೆ ನಿಮ್ಮ ವಿರುದ್ಧ `ಬಲಪ್ರಯೋಗದ ಪ್ರಕ್ರಿಯೆ'ಗೆ ಮುಂದಾಗಬೇಕಾಗುತ್ತದೆ ಎಂದು ಸ್ಥಳೀಯ ನ್ಯಾಯಾಲಯವೊಂದು ಆಮ್‌ಆದ್ಮಿ ಪಕ್ಷದ (ಎಎಪಿ) ಮುಖಂಡ ಅರವಿಂದ್ ಕೇಜ್ರಿವಾಲ್ ಮತ್ತು ಪಕ್ಷದ ಇತರ ಮೂವರು ನಾಯಕರಿಗೆ ಶನಿವಾರ ಎಚ್ಚರಿಕೆ ನೀಡಿದೆ.

Source: ಪ್ರಜಾವಾಣಿ - ರಾಷ್ಟ್ರೀಯ

ಚಿಕ್ಕಮಗಳೂರು, ಏ. 19 : ಶೃಂಗೇರಿಯಲ್ಲಿ ಶನಿವಾರ ಮುಂಜಾನೆ ಎಎನ್ಎಫ್ ಯೋಧರು ಹಾರಿಸಿದ ಗುಂಡಿಗೆ ಆಟೋ ಡ್ರೈವರ್ ಬಲಿಯಾಗಿದ್ದಾನೆ. ಮೃತಪಟ್ಟ ವ್ಯಕ್ತಿಯನ್ನು ಮಂಗಳೂರು ಮೂಲದ ಕಬೀರ್ ಎಂದು ಗುರುತಿಸಲಾಗಿದೆ. ಚೆಕ್ ಪೋಸ್ಟ್ ನಲ್ಲಿ ವಾಹನ ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದ್ದು ಘಟನೆಗೆ ಕಾರಣ ಎಂದು ತಿಳಿದುಬಂದಿದೆ. ಶನಿವಾರ ಮುಂಜಾನೆ 4.30ರ ಸುಮಾರಿನಲ್ಲಿ ಶೃಂಗೇರಿಯ ತನಿಕೋಡು ಚೆಕ್ ಪೋಸ್ಟ್

Source: ಒನ್ ಇಂಡಿಯಾ - ಕನ್ನಡ

ಮುಂಬೈ, ಏ 19: ಹಿಂದೂ - ಮುಸ್ಲಿಂ ಭಾವೈಕ್ಯತೆಯ ಸಂಕೇತ ಎನ್ನುವಂತೆ ಬಾಲಿವುಡ್ ನಟ ಸಲ್ಮಾನ್ ಖಾನ್ ತಂದೆ ಸಲೀಂ ಖಾನ್ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಉರ್ದು ವೆಬ್ ಸೈಟಿಗೆ ಚಾಲನೆ ನೀಡಿದ್ದಾರೆ. ಖ್ಯಾತ ಸಾಹಿತಿಯೂ ಆಗಿರುವ ಸಲೀಂ ಖಾನ್, ಬಾಂದ್ರಾ ಗ್ರಾಮಾಂತರ ಪ್ರದೇಶದಲ್ಲಿರುವ ತನ್ನ ನಿವಾಸದಲ್ಲಿ http://www.narendramodi.in/lng/urdu ಅಂತರ್ಜಾಲಕ್ಕೆ ಚಾಲನೆ ನೀಡಿದರು.

Source: ಒನ್ ಇಂಡಿಯಾ - ಕನ್ನಡ

ಬೆಂಗಳೂರು, ಏ 19: ಶ್ರೀರಾಮಚಂದ್ರಾಪುರ ಮಠದ ಶ್ರೀಮುದ್ರಾಘವೇಶ್ವರ ಭಾರತೀ ಸ್ವಾಮೀಜಿಗಳ ವಿರುದ್ದದ ಬ್ಲ್ಯಾಕ್ ಮೇಲ್ ಕೇಸಿನ ವಿಚಾರಣೆ ಹೊಸ ತಿರುವು ಪಡೆದುಕೊಂಡಿದೆ. ಆರೋಪಿಗೆ ಜಾಮೀನು ನೀಡಿದ ಕ್ರಮವನ್ನು ಪ್ರಶ್ನಿಸಿ ರಾಜ್ಯ ಉಚ್ಚನ್ಯಾಯಾಲಯ ಆರೋಪಿಗೆ ಮತ್ತು ಸರಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ಈ ಕೇಸಿಗೆ ಸಂಬಂಧಿಸಿದಂತೆ ಬಂಧಿತನಾಗಿದ್ದ ಮೊದಲ ಆರೋಪಿ ಮಲ್ಲಿಕಾರ್ಜುನ ಪಾಟೀಲ್ ಗೆ ಸಿಟಿ ಮೆಟ್ರೋಪಾಲಿಟನ್

Source: ಒನ್ ಇಂಡಿಯಾ - ಕನ್ನಡ

ತಿರುವನಂತಪುರ,ಏ.19: ಮೂರು ವರ್ಷಗಳ ಹಿಂದೆ ಇಲ್ಲಿನ ಶ್ರೀ ಪದ್ಮನಾಭ ಸ್ವಾಮಿ ದೇಗುಲದಲ್ಲಿ ಲಕ್ಷ ಕೋಟಿ ರೂ ಮೌಲ್ಯದ ಚಿನ್ನದ ಗಣಿ ಪತ್ತೆಯಾಗಿದ್ದು ಇನ್ನೂ ಜನರ ನೆನಪಿನಗಣಿಯಲ್ಲಿ ಭದ್ರವಾಗಿ ಉಳಿದಿದೆ. ಆದರೆ ಅದು ನೆನಪಿನ ಗಣಿಯಲ್ಲಷ್ಟೇ ಉಳಿಯುವ ಅಪಾಯ ತಲೆದೋರಿದೆ. ಏಕೆಂದರೆ ಈ ಪದ್ಮನಾಭ ದೇಗುಲದ ಚಿನ್ನದ ಗಣಿಯಿಂದ ಸ್ವಲ್ಪ ಸ್ವಲ್ಪವೇ ಚಿನ್ನಾಭರಣವನ್ನು ಕದ್ದು ಸಾಗಿಸಲಾಗುತ್ತಿದೆ ಎಂಬ ಆತಂಕಕಾರಿ

Source: ಒನ್ ಇಂಡಿಯಾ - ಕನ್ನಡ

Pages

ಬ್ಲಾಗ್

ನನ್ನ ಮೊದಲನೆ ಕನ್ನಡದ ಪೊಡ್ ಕಾಸ್ಟ್. ನಿಮ್ಮ ಅಭಿಪ್ರಾಯ ತಿಳಿಸಿ.

ರವಿ ಬೆಳೆಗೆರೆ Marquez touched Kannada sensibility ಮಾಂಡೋವಿ
Source: Thejesh GN

ಇವತ್ತು ಯಾವುದೋ ಹಳೆಯ ಚಿತ್ರವೊಂದನ್ನು ಹುಡುಕುತ್ತಿರುವಾಗ ಯೂಟ್ಯೂಬಿನಲ್ಲಿ ॑ಗಂಧದಗುಡಿ॑ ಚಿತ್ರ ಕಂಡಿತು. ಗಂಧದಗುಡಿ ಚಿತ್ರದ "ನಾವಾಡುವ ನುಡಿಯೇ..." ಹಾಡು ಎಲ್ಲರಿಗೂ ಎಷ್ಟು ಚಿರಪರಿಚಿತ! ನನಗೆ ಇದು ನನ್ನ ಚಿಕ್ಕಂದಿನಲ್ಲಿ ನೋಡಿದ ಸಿನಿಮಾಗಳ ನೆನಪು ತಂದಿತು. ಗಂಧದಗುಡಿ, ನಾಗರಹಾವು, ಮಾನಸಸರೋವರ, ಸಂಪತ್ತಿಗೆ ಸವಾಲ್ - ಇವೆಲ್ಲ ದೂರದರ್ಶನದಲ್ಲಿ ಮತ್ತೆ ಮತ್ತೆ ಪ್ರಸಾರವಾಗುತ್ತಿದ್ದ ಚಿತ್ರಗಳು. ಸರಳವಾದ ಚಿತ್ರಕಥೆ, ಸರಳ ನಿರೂಪಣೆ ‍ ಎಷ್ಟು ಸಾರಿ ನೋಡಿದರೂ ಬೇಸರವಾಗದಂತಹ ಚಿತ್ರಗಳು ಇವು!

 

...
Source: Sampada

ಹೌದು ಸುಮಾರು 16 ವರ್ಷ ಮೊದಲು ಏಪ್ರಿಲ್ ತಿಂಗಳಿನ ಮೂರನೇ ಶುಕ್ರವಾರದಂದು ಮಂಗಳ ವಾರಪತ್ರಿಕೆಯ ಎರಡನೇ ಮುಖ ಪುಟದಲ್ಲಿ ಬಂದ ಕಲಿಸಿದೆ ಕಲಿತೆ ಅಂಕಣದ ನನ್ನ ಲೇಖನ ,ನಾನು ಇಲ್ಲಿ ಮೊದಲ ಬಾರಿಗೆ ನನ್ನ ಹೆಸರನ್ನು ಲಕ್ಷ್ಮೀ ಜಿ ಪ್ರಸಾದ ಸರವು ಎಂದು ಬದಲಾಯಿಸಿ ಹಾಕಿದ್ದೆ ಏನೋ ಕನಸಿನಿಂದ !

ಅದಕ್ಕೂ...
Source: ಭೂತಗಳ ಅದ್ಭುತ ಜಗತ್ತು

     ಎರಡನೆಯ ಸಲ ಮತ್ತೆ ಫೋನು ರಿಂಗಣಿಸಿದಾಗ ಮನಸ್ಸಿಲ್ಲದ ಮನಸ್ಸಿನಿಂದ ಕಿರಣ ಕರೆ ಸ್ವೀಕರಿಸಿ, "ಸಲೀಮ್, ನಾನು ಅರ್ಜೆಂಟ್ ಕೆಲಸದಲ್ಲಿದೀನಿ. ಆಮೇಲೆ ಮಾತಾಡ್ತೀನಿ" ಎಂದು ಫೋನ್ ಕಟ್ ಮಾಡಿದ. ಆದರೆ ಮತ್ತೆ ಫೋನು ರಿಂಗಣಿಸಿತು. ಸಲೀಮನೇ ಕರೆ ಮಾಡಿದ್ದ. ಕರೆ ಸ್ವೀಕರಿಸಿ ರೇಗಬೇಕೆಂದುಕೊಂಡವನಿಗೆ ಸಲೀಮನೇ, "ಹೋಲ್ಡಾನ್, ಗೆಳೆಯಾ ಹೋಲ್ಡಾನ್. ನೀನು ಯಾವ ಅರ್ಜೆಂಟ್ ಕೆಲಸದಲ್ಲೂ ಇಲ್ಲ ಅಂತ ನನಗೆ ಚೆನ್ನಾಗಿ ಗೊತ್ತು. ನಾನು ನಿನ್ನ...

Source: Sampada

ನನ್ನೆದೆಯ ಸುಡುಗಾಡಿನಲ್ಲಿ 
ಇನ್ನೊಂದು ನಿನ್ನೆಯ ಹೆಣ,

ಸತ್ತ ನಿನ್ನೆಗಳನ್ನು ಹೂಳಿ 
ಕಲ್ಲಿಟ್ಟು, ಗಿಡ ನೆಟ್ಟಿದ್ದೇನೆ,
ಸಾಯುವ ಇವತ್ತಿಗೆ ಕಾದು 
ಕಣ್ಣರಳಿಸಿ ಕುಳಿತಿದ್ದೇನೆ,,

ನಿನ್ನೆ ಸತ್ತಂತೆ 
ನಿನ್ನೆಯ ನೆನಪೂ ಸತ್ತಿದ್ದರೆ!
ಇಂದು ನನದಾಗಿ ನಗುತಿದ್ದೆ,
ನಾಳೆಯ ಬೆಳಕಿಗೆ ಕಾಯುತ್ತಿದ್ದೆ,

ಸತ್ತ ನಿನ್ನೆಗಳು ನಕ್ಷತ್ರಗಳಾಗಿ 
ಬಾಳಿಗೆ ಬೆಳಕು ನೀಡಿದ್ದರೆ!
ನಾಳೆಗಳ ಉಜ್ವಲತೆಗೆ 
ಇವತ್ತನ್ನ್ಯಾಕೆ ಬಲಿ ಕೊಡುತ್ತಿದ್ದೆ ?

ಇಂದು ನಿನ್ನದು ಮಂಕುತಿಮ್ಮ 
ಎಂದರು ತಿಮ್ಮನ ಕರ್ತು,,,,
ನಿನ್ನೆ ಯಾರದ್ದು ನನ್ನ ಪ್ರಶ್ನೆ?

ಎದೆ ಬಗೆದು ನೋಡಿ 
ಅಲ್ಲಿ 
ಬರಿಯ ಬರಿಯ ಬರಿಯ 
ನಿನ್ನೆಗಳೇ...

Source: Sampada

ಟಿ. ಜಿ. ಶ್ರೀನಿಧಿ

ಪ್ರೋಗ್ರಾಮಿಂಗ್ ಮುಗಿದ ತಕ್ಷಣ ತಂತ್ರಾಂಶ ಅಭಿವೃದ್ಧಿಯ ಕೆಲಸವೇನೂ ಮುಗಿಯುವುದಿಲ್ಲ. ತಂತ್ರಾಂಶ ಪರೀಕ್ಷೆಯ (ಟೆಸ್ಟಿಂಗ್) ಕಾರಣದಿಂದಲೋ, ನಂತರದ ದಿನಗಳಲ್ಲಿ ನಿರ್ವಹಣೆಗಾಗಿಯೋ (ಮೇಂಟೆನೆನ್ಸ್) ಪ್ರೋಗ್ರಾಮುಗಳನ್ನು ಬದಲಾಯಿಸುವ ಕೆಲಸ ನಡೆದೇ ಇರುತ್ತದೆ. ಈ ಪ್ರಕ್ರಿಯೆ ಸಾಕಷ್ಟು ದೀರ್ಘಕಾಲ ನಡೆಯುವಂಥದ್ದು: ಏಕೆಂದರೆ ತಂತ್ರಾಂಶಗಳು ದಶಕಗಳ ಕಾಲ ಬಳಕೆಯಲ್ಲಿ ಉಳಿದುಕೊಳ್ಳುವುದು ಕಂಪ್ಯೂಟರ್ ಪ್ರಪಂಚದಲ್ಲಿ ಅಪರೂಪದ ಸಂಗತಿಯೇನಲ್ಲ.

ಇಷ್ಟೆಲ್ಲ ದೀರ್ಘಕಾಲ ತಂತ್ರಾಂಶಗಳು

Source: ಇಜ್ಞಾನ ಡಾಟ್ ಕಾಮ್

ಮಾತಿಲ್ಲ, ಕತೆಯಿಲ್ಲ

ಏಕಿನಿತು ಮೌನ - ನಲ್ಲೆ?

 

ಮಾತಿಗಿಲ್ಲದ ಬೆಲೆ

ಮೌನಕ್ಕಿರುವಾಗ

ಮಾತಿಗಿಂತ,

ಮೌನ ಲೇಸಲ್ಲವೇ -ನಲ್ಲ?

 

--ಮಂಜು ಹಿಚ್ಕಡ್

 

...
Source: Sampada

00198. ಇನ್ನು ಕಾಯುವ ಗಳಿಗೆ..
_______________________

ಕರ್ನಾಟಕದ ಮತದಾರರ ಮನದಿಂಗಿತ ಈಗ ಮತದಾನದ ಪೆಟ್ಟಿಗೆಯೊಳಗೆ ಭದ್ರವಾಗಿ ಸೇರಿಕೊಂಡಿದೆ. ಇಷ್ಟು ದಿನದ ಆತಂಕ ಪೂರ್ಣ ಒತ್ತಡಗಳಿಗೆಲ್ಲ ವಿರಾಮ ಹಾಕಿ ಕರ್ನಾಟಕ ಮತದಾರ ನಿರಾಳವಾಗಿ ಉಸಿರಾಡಬಹುದು – ಯಾವುದೆ ಪ್ರಚಾರ ಗದ್ದಲಗಳ ಪರಿವೆಯಿಲ್ಲದೆ. ಇನ್ನೇನಿದ್ದರೂ ಅಂತಿಮ ಫಲಿತಕ್ಕೆ ಕಾಯುವುದಷ್ಟೆ – ಜಯಲಕ್ಷ್ಮಿಯ ವರಮಾಲೆ ಯಾರ ಕೊರಳಿಗೆ ಬೀಳುವಳೆಂಬ ಕುತೂಹಲದಲ್ಲಿ….

https://nageshamysore.wordpress...

Source: nageshamysore

ಕರ್ನಾಟಕದ ಮತದಾರರ ಮನದಿಂಗಿತ ಈಗ ಮತದಾನದ ಪೆಟ್ಟಿಗೆಯೊಳಗೆ ಭದ್ರವಾಗಿ ಸೇರಿಕೊಂಡಿದೆ. ಇಷ್ಟು ದಿನದ ಆತಂಕ ಪೂರ್ಣ ಒತ್ತಡಗಳಿಗೆಲ್ಲ ವಿರಾಮ ಹಾಕಿ ಕರ್ನಾಟಕ ಮತದಾರ ನಿರಾಳವಾಗಿ ಉಸಿರಾಡಬಹುದು - ಯಾವುದೆ ಪ್ರಚಾರ ಗದ್ದಲಗಳ ಪರಿವೆಯಿಲ್ಲದೆ. ಇನ್ನೇನಿದ್ದರೂ ಅಂತಿಮ ಫಲಿತಕ್ಕೆ ಕಾಯುವುದಷ್ಟೆ - ಜಯಲಕ್ಷ್ಮಿಯ ವರಮಾಲೆ ಯಾರ ಕೊರಳಿಗೆ ಬೀಳುವಳೆಂಬ ಕುತೂಹಲದಲ್ಲಿ. ಹಿಂದೆ ಕೆಲವು ಬಾರಿಯಾದಂತೆ ರಾಜ್ಯದಲ್ಲಿ ಮತ್ತು ಕೇಂದ್ರದಲ್ಲಿ ಬೇರೆ ಬೇರೆ ಪಕ್ಷಗಳು ಅಧಿಕಾರ ಚುಕ್ಕಾಣಿ ಹಿಡಿದ ಪರಿಸ್ಥಿತಿಯಾಗುವುದೆ? ಎಂಬ ಒಂದು ಕುತೂಹಲವಾದರೆ, ರಾಜ್ಯದಿಂದಾದ ಆಯ್ಕೆಯಲ್ಲಿ ಯಾರಿಗೆ ಹೆಚ್ಚು ಸ್ಥಾನ - ರಾಜ್ಯದಲ್ಲಿ ಅಧಿಕಾರ ಹಿಡಿದ ಪಕ್ಷಕ್ಕೊ, ಅಥವ ವಿರೋಧ ಪಕ್ಷಕ್ಕೊ ? ಇಬ್ಬರಿಗೂ ಸಮ ಸಮ ಹಂಚಿ ಹೋಗಬಹುದಾ? ಎನ್ನುವ ಮತ್ತೊಂದು ತರದ ಕುತೂಹಲ. 

...

Source: Sampada
ಜನಪದ ಕಲಾವಿದರ ರಾಜ್ಯ ಸಂಘಟನೆ ಮಾಡಿಕೊಂಡು, ಒಂದೆರಡು ಕಲಾವಿದರ ರಾಜ್ಯ ಸಮಾವೇಶ ಮಾಡಿ, ಸ್ವತಃ ಜನಪದ ಗೀತೆಗಳ ಹಾಡಿಕೊಂಡಿದ್ದ ವೀರೇಶ್ ಬಳ್ಳಾರಿ ಇನ್ನಿಲ್ಲ  ಎನ್ನುವ ಸುದ್ದಿ ಬೇಸರವೆನಿಸಿತು. ತನ್ನ ಹೆಸರಿನಲ್ಲಿಯೇ ಬಳ್ಳಾರಿ ಎಂದಿಟ್ಟುಕೊಂಡಿದ್ದ ವೀರೇಶ ಅವರ  ಜತೆ ಹೆಚ್ಚು ಒಡನಾಟ  ಇಲ್ಲವಾದರೂ, ಜಾನಪದ ಕುರಿತಂತೆ ಒಂದೆರಡಯ ಕಡೆ ಮಾತು ಚರ್ಚೆ ಮಾಡಿದ್ದೆವು. ಆತನ ತಂಡದ ಜಾನಪದ ಹಾಡುಗಾರಿಕೆಯನ್ನೂ ಕೇಳಿದ್ದೆ. ಒಮ್ಮೆ ಸಂಸಾರ ಸಮೇತ ಕನ್ನಡ ವಿಶ್ವವಿದ್ಯಾಲಯಕ್ಕೆ ಬಂದಾಗ ಕ್ಯಾಂಟೀನಿನಲ್ಲಿ ಜತೆಯಾಗಿ ಊಟ ಮಾಡಿದ್ದೆವು. ಅಂದಹಾಗೆ ವೀರೇಶ್ ಪಿಹೆಚ್ ಡಿ ಪಡೆದದ್ದು ಕೂಡ ಕನ್ನಡ ವಿಶ್ವವಿದ್ಯಾಲಯದಲ್ಲಿ.
...
Source: ಕನ್ನಡ ಜಾನಪದ karnataka folklore
ನಮ್ಮ ಭಾಷೆಲಿ ಮಾತಿನ ನಡುಗೆ ಬಳಕೆ ಅಪ್ಪ ಒಂದು ಚಂದದ ನುಡಿಗಟ್ಟು "ಮೂಗಿಲಿ ಎಷ್ಟು ಉಂಬಲೆಡಿಗು?"ಹೇಳುದು
ನಾವು ಉಂಬದು ಬಾಯಿಲಿ .ಅದಕ್ಕೂ ಒಂದು ಮಿತಿ ಇದ್ದು ,ಮಿತಿ ಮೀರಿ ತಿಂಬಲೆ ಎಡಿತ್ತಿಲ್ಲೆ.

ಮೂಗಿಲಿ ಅಂತೂ ಉಂಬಲೆ ಎಡಿತ್ತಿಲ್ಲೆ ಅದು ಅಸಾಧ್ಯವಾದ ವಿಚಾರ.ಹಾಂಗೂ ಒಂದು ವೇಳೆ ಪ್ರಯತ್ನ ಮಾಡಿರೆ ಒಂದೆರಡು ಅಶನ ತಿಂಬಲೆ ಎದುಗು ಅಷ್ಟೇ !
ಸರಿಯಾದ ರೀತಿಲಿಯೇ ಬಾಯಿಲಿ ಉಂಬದಕ್ಕೆ ಒಂದು ಮಿತಿ ಇದ್ದು ಅದರ ದಾಂಟಿ ಹೋಪಲೆ ಎಡಿತ್ತಿಲ್ಲೆ .ಮಿತಿಯ ಒಳವೇ ತಿಂಬಲೆ ಎಡಿವದು !ಹಾಂಗಿಪ್ಪಗ ಸ್ವಾಭಾವಿಕ ನೇರ ದಾರಿಯ ಬಿಟ್ಟು  ಮೂಗಿಲಿ ತಿಂಬಲೆ ಹೆರಟರೆ ಎಷ್ಟು ತಿಂಬಲೆ ಎಡಿಗು ?ಹೇಳುವ ಅರ್ಥ ಇಲ್ಲಿ ಕಾಣುತ್ತು.

ನ್ಯಾಯವಾದ ಮಾರ್ಗಲ್ಲಿ ಸಂಪಾದನೆ ಮಾಡಿ ಬದುಕುವೋನ ಗಳಿಕೆಗೂ ಒಂದು ಮಿತಿ ಇದ್ದು. ನಮ್ಮ ಅಯುಸ್ಸಿಂಗು ಒಂದು ಮಿತಿ ಇದ್ದು...

Source: ಗಿಳಿ ಬಾಗಿಲು

ಇಂಗ್ಲಿಷ್ ಮೂಲ: ನಿವೇದಿತಾ ಮೆನನ್ 

ಈ ಬಾರಿಯ ಸಾರ್ವತ್ರಿಕ ಚುನಾವಣೆ ಆರಂಭ ವಾಗಿರುವಂತೆಯೇ ಅಗತ್ಯವಾದುದನ್ನು ಹೇಳಲೇಬೇಕಾದ ಸಮಯ ಇನ್ನೊಮ್ಮೆ ಬಂದಿದೆ. ಭಾರೀ ಪ್ರಮಾಣದ ಪ್ರಚಾರಾಭಿನಯ, ಏಕತಾನತೆಗಳಿಂದ ಕೂಡಿದ ಸುಳ್ಳು ಮಾತು ಗಳಿಗೆ ಮತ್ತೆ ಜೀವ ಬಂದಿದೆ. ಈ ರಾಜಕೀಯ ಸಂದರ್ಭದಲ್ಲಿ ವಿಶ್ವದ ಅತಿ ಎರಡನೆ ದೊಡ್ಡ...

Source: ಗುಜರಿ ಅಂಗಡಿ


 ನನ್ನ 20 ಕೃತಿಗಳಲ್ಲಿ ಮೊದಲಿನದ್ದು ಅರಿವಿನಂಗಳದ ಸುತ್ತ ಎಂಬ ಶೈಕ್ಷಣಿಕ ಬರಹಗಳ ಸಂಕಲನ .ಇದು 2006 ರಲ್ಲಿ ಪ್ರಕಟವಾಗಿದೆ.ವಿಜಯ ಕರ್ನಾಟಕ ,ಹೊಸ ದಿಗಂತ ಸೇರಿದಂತೆ ಬೇರೆ ಬೇರೆ ಪತ್ರಿಕೆಗಳಲ್ಲಿ ಪ್ರಕಟವಾದ ನನ್ನ ಶಿಕ್ಷಣ ಸಂಬಂಧಿ ಲೇಖನಗಳಲ್ಲಿ ಹದಿನೈದನ್ನು ಆಯ್ದು ಒಟ್ಟು ಮಾಡಿ “ಅರಿವಿನಂಗಳದ ಸುತ್ತ”...
Source: ಭೂತಗಳ ಅದ್ಭುತ ಜಗತ್ತು

ಕೇರಳ ಸರಕಾರವು ಮಾರ್ಚ್ 2014ರಲ್ಲಿ ನಡೆಸಿದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನಮ್ಮ ಶಾಲೆ 90% ಫಲಿತಾಂಶ ಪಡೆದಿದೆ. ಒಟ್ಟು ಪರೀಕ್ಷೆ ಬರೆದ 171 ಮಂದಿ ವಿದ್ಯಾರ್ಥಿಗಳಲ್ಲಿ 154 ಮಂದಿ ತೇರ್ಗಡೆಯಾಗಿದ್ದಾರೆ. ಈ ಪೈಕಿ ಏಳು ಮಂದಿ ವಿದ್ಯಾರ್ಥಿಗಳು ಆದರ್ಶ ಎಚ್.ಎ, ಅರವಿಂದ ಎಸ್.ವಿ, ಅಶ್ವಿನಿ.ಕೆ, ರಕ್ಷಿತ್.ಟಿ,...

Source: MSCHS Nirchal: MAHAJANA

1.ಗೋಧಿ 2.ಮುಸುಕಿನ ಜೋಳ 3.ಬಿಳಿಜೋಳ 4.ಕಡಲೆ ಬೀಜ 5.ಕಡಲೆ ಕಾಳು 6.ಹುರಿಗಡಲೆ 7.ಅಕ್ಕಿ ತರಿ 8.ತುಗರಿ ಬೇಳೆ ಇವೆಲ್ಲವುಗಳನ್ನು 1ಕಿಲೋನಂತೆ ಕಲೆಸಿಕೊಂಡು ನಿತ್ಯ ಮುಂಜಾನೆ 7 ಹಿಡಿ ಗಳನ್ನು ತಗೆದುಕೊಂಡು ತಲೆಗೆ ಪ್ರದಕ್ಷಿಣೆ ಹಾಕಿ(ತಿರುಗಿಸಿ) ಗುಬ್ಬಿ/ ಪಾರಿವಾಳ ಗಳಿಗೆ ಹಾಕಿರಿ ನಿಮ್ಮ ಯಾವುದೇ ರೀತಿಯ ಸಮಸ್ಯೆಗಳಿಂದ ಪರಿಹಾರ ಪಡೆಯಿರಿ.

Source: ವಿ ಕೃಷ್ಣಮೂರ್ತಿ

*ಓಂ ವಿಶ್ವಕರ್ಮಣೇನಮಃ ವಾಸ್ತುದೇವತಾಭ್ಯೋನಮಃ* ಪಾಯಪೂಜೆಗೆ ಬೇಕಾದ ಅಗತ್ಯ ಪೂಜಾ ಸಾಮಗ್ರಿಗಳು 1.ಅರಿಸಿನ 2.ಕುಂಕುಮ 3.ಹೂವು 4.ಬಾಳೆಹಣ್ಣು 5.ಎಲೆ 6.ಅಡಿಕೆ 6.ತೆಂಗಿನಕಾಯಿ 7.ನವದಾನ್ಯದಗಂಟು ೯ (ಅಕ್ಕಿ,ಗೋಧಿ.ತುಗರಿ,ಹೆಸರು,ಕಡಲೆ,ಅವರೆ,ಎಳ್ಳು,ಉದ್ದು,ಉರುಳಿ) 8.ಪಂಚರತ್ನ(ಚಿನ್ನ,ಬೆಳ್ಳಿ,ತಾಮ್ರ,ಮುತ್ತು,ಹವಳ) 9.ಪಂಚಾಮೃತ(ಹಾಲು,ಮೊಸರು,ಜೇನು,ಕಲ್ಲುಸಕ್ಕರೆ,ಆಕಳತುಪ್ಪ) 10.ಬಾಳೆ ಎಲೆ 11.ಒಂದು ಕಳಸ(ತಾಮ್ರ ಅಥವ ಬೆಳ್ಳಿ ಚಂಬಿನ ಎಲೆ ಮತ್ತು ತೆಂಗಿನಕಾಯಿ,ಕಳಸದಸಾಮಾನುಗಳು) 12.ನೈವೇದ್ಯ(ಅವಲಕ್ಕಿ,ಹೆಸರುಬೇಳೆ,ಬಾಳೆಹಣ್ಣಿನ ರಸಾಯನ ಮಾಡಬಹುದು) ಪೂಜೆ ಮಾಡುವವಿದಾನ:- ವಿನಾಯಕನನ್ನು ಪ್ರತಿಸ್ಠಾಪಿಸಿ ಕಳಸವನ್ನಿಟ್ಟು ಒಂದು ನಾಲ್ಕು ಬಾಗ ಸಮನಾಗಿರುವ ಕಲ್ಲನ್ನು ತೊಳೆದುಕೊಂಡು ಸೈಟಿನ ಈಶಾನ್ಯಭಾಗವನ್ನು ಶುಚಿಗೊಳಿಸಿ ಕಲ್ಲನ್ನು ನಿಲ್ಲಿಸಿ...

Source: ವಿ ಕೃಷ್ಣಮೂರ್ತಿ

ಶ್ರೀ ಮಹದೇವನ ಸ್ಮರಣೆ (ಸ್ತೋತ್ರ) ಶರಣೆನ್ನಿರೋ ಎಲ್ಲ ಶರಣೆನ್ನಿರೋ ಕಲಿಯುಗ ದೈವನಿಗೆ ನಲಿಯುವ ಮಹದೇವನಿಗೆ ಶರಣೆನ್ನಿರೋ ಎಲ್ಲ ಶರಣೆನ್ನಿರೋ ಕರುಣೆಯಿಂದಲಿ ನಮ್ಮ ಕಾಯೆನ್ನಿರೋ ಕಷ್ಟ,ಅನಿಷ್ಟಗಳ ಕಳೆಯೆನ್ನಿರೋ ||ಪ|| ಮಲೆ ಮಾದಪ್ಪನಿಗೆ ಶರಣೆನ್ನಿರೋ ಮನೆ ಮನವ ಶುದ್ದಿಯಗೊಳಿಸೆನ್ನಿರೋ ಶ್ರೀ ಮಂಜುನಾಥನಿಗೆ ಶರಣೆನ್ನಿರೋ ಶ್ರೀರಕ್ಷೆ ಯಿತ್ತೆಮ್ಮ ಕಾಯೆನ್ನಿರೋ ಭೂತನಾತನಿಗೆ ಶರಣೆನ್ನಿರೋ ನಮ್ಮ ಭಯಭೀತಿಗಳ ಕಳೆಯೆನ್ನಿರೋ ||ಶರಣೆನ್ನಿರೋ|| ಚುಂಚನಗಿರಿಯೋಡೆಯನಿಗೆ ಶರಣೆನ್ನಿರೋ ಚಂದದಿ ಬಂದನವ ಕಳೆಯೆನ್ನಿರೋ ಮುಕ್ಕಣ್ಣ ದೇವನಿಗೆ ಶರಣೆನ್ನಿರೋ ನಮ್ಮ ಸೊಕ್ಕುಗಳನೆಲ್ಲ ಅಳಿಸೆನ್ನಿರೋ ನಂಜುಂಡಸ್ವಾಮಿಗೆ ಶರಣೆನ್ನಿರೋ ನಾನು ನನ್ನದೆಂಬುದ ಮರೆಸೆನ್ನಿರೋ ||ಶರಣೆನ್ನಿರೋ|| ವಿಶ್ವನಾಥನಿಗೆ ಶರಣೆನ್ನಿರೋ ನಮ್ಮ ವಿಪ್ಪತ್ತುಗಳನೆಲ್ಲ ಕಳೆಯೆನ್ನಿರೋ...

Source: ವಿ ಕೃಷ್ಣಮೂರ್ತಿ

||ಶ್ರೀ ಸಿಭೀಶ ಇಚ್ಚಾ ಜಯತುಃ|| ಶ್ರೀ ಗುರುಭ್ಯೋ ನಮಃ ( ಸರ್ವ ಕಾರ್ಯ ಸಿದ್ದಿಗಾಗಿ,ಆಪತ್ತು ಪರಿಹಾರಕ್ಕಾಗಿ ಶ್ರೀ ಸಿಭೀಶ ಲಕ್ಷ್ಮಿನರಸಿಂಹಸ್ವಾಮಿ ಸ್ತೋತ್ರ) "ಓಂ ಕ್ಷಂ" ಶ್ರೀ ಲಕ್ಷ್ಮಿ ನರಸಿಂಹದೇವಾ ಕಟ್ಟು ಕಟ್ಟು ಹೇ ಸಿಭೀ ವಾಸ ಕಟ್ಟು ಕಟ್ಟು ದೃಷ್ಟಗ್ರಹಛಾಯಾಗಳನ್ನು ಕಟ್ಟು ಒಟ್ಟು ದಶದಿಕ್ಕನು ಕಟ್ಟು ಕಟ್ಟು ಸರ್ವ ಕೆಟ್ಟ ಯಂತ್ರ-ಮಂತ್ರ-ತಂತ್ರ ಮೆಟ್ಟು ಮೆಟ್ಟು ಹಿಮ್ಮೆಟ್ಟು ದುಷ್ಟರಾ ಹೆಡೆ ಮುರಿಯ ಕಟ್ಟು,ಬಂಧನವ ಮಾಡು ಖೂಳ ದೈತ್ಯರ,ನರ,ವಾಕ್.ನೇತ್ರ,ದೇಹ,ಬುದ್ದಿಸ್ತಂಬನ ಮಾಡು ದುರುಳರಿಗೆ ಕಾಣು ನೀ ಕರಾಳ ರೂಪವ ತೋರು ತೋರೋ ನಿನ್ನ ಶರಣೆಂದವರಿಗೆ ಮಾಡು ಮಾಡು ಸಕಲತ್ರ ಭದ್ರಮಯ ನೀಡು ನೀಡು ನಿನ್ನ ದಾಸರ ಸಂಘ ಹೌದಭಯಕರ ವರ ಕರುಣಾಕರ ರಕ್ಷಿಸು ಮನ್ನಿಸು ಕಾಯೋ ಕೃಪಾಕರ (ಶ್ರೀ) ಸಿರಿ ಜಯ ಸಿಭೀಶ ಲಕ್ಷ್ಮಿನರಸಿಂಹ... ನಿನ್ನ ಸ್ಮರಣೆಯ...

Source: ವಿ ಕೃಷ್ಣಮೂರ್ತಿ

ಮೇಳ:   
ಇತ್ತ ಸುಗ್ರೀವಂಗೆ ಕಿಷ್ಕಿಂಧೆಯಂ ಕೊಟ್ಟು;ವನವಾಸ ನೋಂಪಿಯಂ ಬಿಡದೆ,ಬಳಿಯ ಪರ್ವತ ಮಾನ್ಯವಂತನ ಗುಹಾಗೃಹದಿರಘೂದ್ವಹಂ ಲಕ್ಷ್ಮಣನೊಡನೆ ಮಳೆಯ ಮುಗಿವಂ ಪಾರುತಿರ್ದನ್;ವಾಲಿಯ ಕೊಲೆಯ ಮೈಲಿಗೆಗೆ ತಪಂಬಡುವಂತೆವೋಲ್ಧಗಿಸುತಿರಲಾತ್ಮಮಂ ಸೀತಾ ವಿರಹ ಚಿಂತೆ!ರಘೂದ್ವಹಂ ಮಳೆಯ ಮುಗಿವಂ ಪಾರುತಿರ್ದನ್;ಅತ್ತಲ್ ಆ ಪತ್ತುತಲೆ ಬಿರುದವೊತ್ತನ್, ಮುಚ್ಚೆವೋದ ಇಳೆಗುವರಿಯಂ ಪೊತ್ತು,ಕಾಡು ಹೊಳೆ ಕಡಲ್ ಬಿತ್ತರವನುತ್ತರಿಸಿ,ತ್ರಿಕೂಟಗಿರಿ ಶೃಂಗ ಶೃಂಗಾರದಾ ಕನಕ ಲಂಕಾ ಲಕ್ಷ್ಮಿಯ ಅಂಕಂಎನಲ್ ಎಸೆದಿರ್ದ ತನ್ನಾ

Source: ನಂದೊಂದ್ಮಾತು
ಭೇಷ್! ಮುಲಾಯಂ ಸಿಂಗ್ ಯಾದವರೇ, ಭೇಷ್! ಎಂಥ ಸತ್ಯದ ಅರಿವು ಮೂಡಿಸಿದಿರಿ. ಅತ್ಯಾಚಾರ, ಅದರಲ್ಲೂ ಸಾಮೂಹಿಕ ಅತ್ಯಾಚಾರವೆಂಬುದು ಒಂದು ಅಚಾತುರ್ಯ ಮಾತ್ರ, ಹುಡುಗರು ಎಷ್ಟೆಂದರೂ ಹುಡುಗರೇ, ಪಾಪ ಇಂಥ ಅಚಾತುರ್ಯಕ್ಕೆ ಅವರಿಗೆ ಮರಣದಂಡನೆ ಸಲ್ಲದು ಎಂಬ ನುಡಿಮುತ್ತುಗಳನ್ನುದುರಿಸಿ ನಮ್ಮ ಕಣ್ಣು ತೆರೆಸಿದಿರಿ. ನೀವು ಹೇಳುವವರೆಗೂ ನಾವು ಹೆಣ್ಣುಮಕ್ಕಳು  ಇದನ್ನೊಂದು ಅಕ್ಷಮ್ಯ ಅಪರಾಧ ಎಂದುಕೊಂಡುಬಿಟ್ಟಿದ್ದೆವು ನೋಡಿ. ಹೆಣ್ಣನ್ನು ದೈಹಿಕವಾಗಿ, ಮಾನಸಿಕವಾಗಿ ಜರ್ಝರಿತಳನ್ನಾಗಿಸಿ, ಅವಳು ಮತ್ತೆ ಜೀವನ್ಮುಖಿಯಾಗುವ, ಸಮಾಜಮುಖಿಯಾಗುವ ಎಲ್ಲ ಅವಕಾಶಗಳನ್ನೂ ಕಿತ್ತುಕೊಂಡುಬಿಡುವ ಇಂಥ ಹೀನಕೃತ್ಯಕ್ಕೆ ಎಂಥ ಶಿಕ್ಷೆ ನೀಡಿದರೂ ಕಡಿಮೆಯೇ ಎಂಬುದು ನಮ್ಮ ಇಷ್ಟುದಿನದ ಅಂಬೋಣವಾಗಿತ್ತು. ಆದರೆ ಆ ನೋವು, ಹಿಂಸೆಗಳೆಲ್ಲ ನಗಣ್ಯ, ಹೆಣ್ಣುಮಕ್ಕಳಾದ ನಾವು ಇದನ್ನು...
Source: ಮಾತು-ಮಂಥನ-ಮತಾಪು

Pages