ರಾಯಚೂರು– ಸೊಲ್ಲಾಪುರ ವಿದ್ಯುತ್‌ ಜಾಲ

Description: 

ಸೊಲ್ಲಾಪುರ (ಮಹಾರಾಷ್ಟ್ರ) (ಪಿಟಿಐ): ದೇಶದಾದ್ಯಂತ ವರ್ಷ­ಪೂರ್ತಿ, ವಾರವಿಡೀ, ದಿನದ 24 ತಾಸುಗಳ ಕಾಲ ವಿದ್ಯುತ್‌ ಪೂರೈಕೆ ಮಾಡುವ ಗುರಿ ಸರ್ಕಾರ ಹೊಂದಿದೆ ಎಂದ ಪ್ರಧಾನಿ ನರೇಂದ್ರ ಮೋದಿ, ಮೂಲಸೌಕರ್ಯ ಅಭಿವೃದ್ಧಿ ಮೂಲಕ ರಾಷ್ಟ್ರದಾದ್ಯಂತ ರಸ್ತೆ ಸಂಪರ್ಕ, ವಿದ್ಯುತ್‌, ನೀರು ಸರಬರಾಜು ಜಾಲಗಳನ್ನು ನಿರ್ಮಿಸಲಾಗುವುದು ಎಂದರು.

ಕರ್ನಾಟಕದ ರಾಯಚೂರು ಮತ್ತು ಮಹಾರಾಷ್ಟ್ರದ ಸೊಲ್ಲಾಪುರ ಮಧ್ಯೆ 765 ಕಿಲೊವೋಲ್ಟ್‌ ಸಾಮರ್ಥ್ಯದ ವಿದ್ಯುತ್‌ ಸರಬರಾಜು ಜಾಲ ಮತ್ತು ಪುಣೆ ಹಾಗೂ ಸೊಲ್ಲಾಪುರ ನಡುವಣ ರಾಷ್ಟ್ರೀಯ ಹೆದ್ದಾರಿ (ಎನ್‌ಎಚ್‌) 9ರ ಚತುಷ್ಪಥ ಮಾರ್ಗವನ್ನು ಶನಿವಾರ ದೇಶಕ್ಕೆ ಸಮರ್ಪಿಸಿದ ಅವರು, ‘ವಿದ್ಯುತ್‌ ಉಳಿತಾಯ ದೇಶದ ಅಭ್ಯುದಯಕ್ಕೆ ಸಮ’ ಎಂದರು.