Wednesday 27 September 2023
ದುಃಖ ಇದ್ದೀದ್ದೇ ಅದು ಹೇಗಿದ್ದರೂ ಬರುವುದೇ..ಅದಕೆ ಹೆದರಿ ಮುಂಬಾಗಿಲ
ಮುಚ್ಚಿಕೊಂಡರೆ ಹಿತ್ತಲಬಾಗಿಲಿಂದ ಒಳಬಂದೀತು..ಅದು ಸರ್ವರೂಪಿ ಕಿಟಕಿಯ ಸಂದಿಯಿಂದಲೋ
ಬಾಗಿಲ ಮರೆಯಿಂದಲೋ ಬೆಳಕಿಂಡಿಯ ಮೂಲಕವೋ ಅದು ಒಳಗೆ ಬಂದೇ ಬರುವುದು..
ಹೀಗೆ ಮಾಡಿದ್ರೆ ಹೇಗೆ ಅದು ಬಾಗಿಲ ಹೊರಗೆ ನಿಂದಾಗ ಬಾಗಿಲ ತೆರೆದು ಒಳಗೆ ಕರೆಯುವುದು..
ಆರಾಮ ಕುರ್ಚಿಯಲ್ಲಿ ಅದನು ಕೂಡಿಸಿ ಚಹಾ ,ಕಾಫಿ ಕೂಲ್ ಡ್ರಿಂಕ್ ಕೇಳುವುದು ಉಪಚರಿಸುವುದು..
ನಮ್ಮ ಸೋಪಸ್ಕಾರಕ್ಕೆ ಅದು ಅಷ್ಟು ಸುಲಭವಾಗಿ ಬಗ್ಗದು ಅದು ಬಹು ಚಾಲಾಕಿ..ಅದರದು ಹದ್ದಿನಕಣ್ಣು..
ಮನೆಯ ಟಿವಿ, ಫ್ರಿಜ್ಜು, ವಾಶಿಂಗಮಶೀನಿನ ಮೇಲೆ ಕಣ್ಣು ಹಾಕಬಹುದು..ತುಂಬಬೇಕಾದ ಕಂತುಗಳ ರಾಶಿ ರಾಚಬಹುದು ಖಕೆ
ಮನೆ ಜಂತಿ ನೋಡುತ್ತ ತುಂಬಬೇಕಾಗಿರುವ ಇಎಮ್ಐ...
ಆಫೀಸು ಮುಗಿಸಿ ಸುಧೀರ ಮನೆ ಸೇರಿದಾಗ ಎದಿರಾದದ್ದು ಮಡದಿಯ ದುಗುಡದ ಮುಖ. ಮಗಳು ನೀತಾ ತನ್ನ ಹೋಮ್ವರ್ಕ್ನಲ್ಲಿ ಮುಳುಗಿದ್ದಳು. ಕಾಫಿ ಕೊಡುವಾಗಲೂ ಹೆಂಡತಿ ಅನ್ಯಮನಸ್ಕಳಾಗಿದ್ದನ್ನು ಗಮನಿಸಿದ ಸುಧೀರ. ಅವನ ಹೆಂಡತಿ ನೀರಜ ಸನ್ನೆ ಮಾಡಿ ಇವನನ್ನು ಹೊರಕರೆದಾಗ ಮೌನವಾಗಿ ಹಿಂಬಾಲಿಸಿದ. ನೀರಜಳ ಆತಂಕಕ್ಕೆ ಕಾರಣವಾಗಿದ್ದು ಅಂದು ಅವಳು ಕೆಲಸ ಮಾಡುತ್ತಿದ್ದ ಬ್ಯಾಂಕಿಗೆ ಬಂದ ವಾರಿಜ ಮೇಡಂ ಹಾಗೂ ಅವರ ಜೊತೆ ಬಂದಿದ ಇಬ್ಬರು ಗಂಡಸರು ಹಾಗೂ ಆ ಗಂಡಸರು ಆಡಿದ ಧಮಕಿಪೂರಿತ ಮಾತುಗಳಾಗಿದ್ದವು. ಪ್ರಕರಣ ಇಲ್ಲಿಯೇ ಮೊಟಕುಗೊಳಿಸಿರಿ ಇದು ಅವರ ತಾಕೀತಾಗಿತ್ತು. ನೀರಜ ಅದನ್ನು ಕೇಳಿದಾಗಿನಿಂದ ಉದ್ವಿಗ್ನಗೊಂಡಿದ್ದಳು. ಮಾತು ಕೇಳಿಸಿಕೊಂಡ ಸುಧೀರ ಸಹ ಗಲಿಬಲಿಗೊಂಡಿದ್ದ ಇದು ಎಲ್ಲಿಯೋ ಶುರುವಾಗಿ ಕೊನೆಗೆ ತನ್ನ ಒಬ್ಬಳೇ ಮಗಳ ಸುತ್ತ...
1)
ಅವ ಮಗಳಿಗೆ ತಿಳಿಹೇಳಿದ..ಒಳ್ಳೆಯ ಸ್ನೇಹಿತರನ್ನು ಸಂಪಾದಿಸಬೇಕುಗೆಳೆತನ ದೈವದತ್ತ ಆದರೆ ಆಯ್ಕೆಯ ಸ್ವಾತಂತ್ರ್ಯ ನಮ್ಮ ಕೈಯ್ಯಲ್ಲಿದೆ..ಹೀಗಾಗಿ ಒಳ್ಳೆಯವರನ್ನೇ ಗೆಳೆತನ ಮಾಡಬೇಕು. ಸ್ವಲ್ಪದಿನಗಳ ನಂತರಅವ ಹುಟ್ಟೂರಿಗೆ ಹೋದ..ಹಳೆಯ ಗೆಳೆಯರು ಸಿಕ್ಕರು. ಯಾವುದೋ ಬಾರಿನಲ್ಲಿಸಮಾರಾಧನೆಯ ನಡುವೆ ನಗೆ ಹಗೆ ಮಾತು ಹೀಗೆ ಅವ್ಯಾಹತ..ಹೊತ್ತು ಹನ್ನೊಂದಾಗಿತ್ತು.ಅವನ ಹೆಂಡತಿ ಫೋನ ಮಾಡಿದ್ಲು..ಇವನ ಫೋನ್ ನಿಂದ ತೇಲಿಬಂದ ಕೇಕೆ, ನಗೆಯ ದನಿಮಗಳ ಕಿವಿಗೂ ತಲುಪಿತು. ಅಪ್ಪನ ಉನ್ಮತ್ತತೆ ಅವನ ಗೆಳೆಯರ ತೊದಲುವಿಕೆ ಮಗಳಿಗೆಹೊಸದನ್ನು ತೋರಿಸಿತು. ಅವಳು ಅಂದ್ಲು "ಅಪ್ಪ ನನಗೆ ಮಾತ್ರ ಒಳ್ಳೆಯ ಗೆಳೆತನದ ಬಗ್ಗೆ ಹೇಳ್ದ..ಆದ್ರೆ ತಾನು...
ಈ ಕವಿತೆಯ ಮೂಲ ಮರಾಠಿದು..ಮಂಗೇಶ್ ಪಾಡಗಾಂವಕರ್ ಬರೆದಿದ್ದು..
ನನ್ನ ಮೆಚ್ಚಿನ ಕವಿಗೆ ಮೊನ್ನೆ ತಾನೆ ೮೫ ಮುಗೀತು..
ತೀರಸರಳ ಶಬ್ದಗಳಲ್ಲಿ ಕವಿತೆಯನ್ನು ಬರೆಯುವುದು ಇವರ ವಿಶೇಷತೆ..
original words in this link...
http://www.aathavanitli-gani.com/Song/Dolyat_Sanjaveli_Anu
ಹೋದವಾರ ನಮ್ಮ ನಡುವಿನ ಹಿರಿಯರಿಬ್ಬರ ನಡುವಿನ ವಾದ ಈ ಸಾಮಾಜಿಕತಾಣಗಳ
ಚರ್ಚೆಯ ವಿಷಯವಾಗಿತ್ತು. ನಮ್ಮ ಕನ್ನಡದ "ನೇರ,ದಿಟ್ಟ,ನಿರಂತರ" ಚಾನೆಲ್ ಈ
ವಿವಾದದಲ್ಲಿ ಮೂಗುತೋರಿಸಲು ಪ್ರಯತ್ನಿಸಿತು. ವಿವಾದ ನಾಗಮಂಡಲ ನಾಟಕದಲ್ಲಿ
ಅಳವಡಿಸಿಕೊಳ್ಳಲಾದ "ಮಾಯಾದ ಮನದ ಭಾರ..."ಹಾಡಿನ ಕುರಿತಾದದ್ದು. ಈ ಹಾಡು
ಹಿಂದೆ ಶಂಕರ್ ನಾಗ್ ಇದೇ ನಾಗಮಂಡಲ ನಾಟಕ ಮಾಡುವಾಗ ಶ್ರೀ ಗೋಪಾಲ ವಾಜಪೇಯಿ
ಅವರ ಕಡೆ ಬರೆಸಿದ್ದು ..ಆ ಹಾಡಿಗೆ ಸಂಗೀತ ಅಶ್ವಥ ನೀಡಿದ್ರು..ಅದು ರಂಗಗೀತೆ..ಆ ನಾಟಕ
ಬರೆದವರು ಗಿರೀಶ್ ಕಾರ್ನಾಡ್ . ಮನೋಹರ ಗ್ರಂಥಮಾಲೆಯವರು ಆ ನಾಟಕ ಪುಸ್ತಕ ರೂಪದಲ್ಲಿ
ಪ್ರಕಟಿಸಿದ್ರು..ಈ ಗೀತೆ ಆ ನಾಟಕದ (ಪುಸ್ತಕ) ದಲ್ಲಿ ಇತ್ತು. ಆದರೆ ಗೀತರಚನೆಕಾರರಾಗಿ ವಾಜಪೇಯಿಯವರ
ಹೆಸರಿರಲಿಲ್ಲ..ಈ...
ಸೀಟ್ ನಂ೭ರಲ್ಲಿ ಕುಳಿತ ನಮ್ಮ ನಾಯಕನಿಗೆ ಎಚ್ಚರವಾಗಿದ್ದು ಅಲ್ಲಿ ಹತ್ತಿದ ಪ್ರಯಾಣಿಕ ಕಂಡಕ್ಟರ್
ಜೋಡಿ ವಾದಕ್ಕಿಳಿದಾಗ..ಪ್ರಯಾಣಿಕ ಮುಂಗಡಟಿಕೆಟ್ ಮಾಡಿಸಿದ್ದ..ಯಶವಂತಪೂರದಾಗ ಮುಂದ ಹೋಗಲಿಕ್ಕೆ
ಗಾಡಿ ಹಿಡಿಯುವನಿದ್ದ.ಬಸ್ಸು ಹರಿಹರಕ್ಕ ಮುಟ್ಟಿದ್ದು ಒಂದುತಾಸು ತಡಾ ..ಇದು ಅವನ ಕ್ಷೋಭೆಗೆ ಕಾರಣ..
ಆ ಪಯಣಿಗನ ಜೋಡಿ ಹೆಂಡತಿ,ಎರಡು ಮಕ್ಕಳು ಇದ್ರು..ಅಕಿನೂ ಚಾಲಕ/ನಿರ್ವಾಹಕರಿಗೆ ಮಂಗಳಾರತಿ ಎತ್ತಿದ್ಲು.
ನಮ್ಮ ನಾಯಕ ಬಸ್ಸು ಹುಬ್ಬಳ್ಳಿ ಹತ್ತಿರದ ವರೂರ ಹತ್ರ ಊಟಕ್ಕ ನಿಲ್ಸಿದ್ದು ಅದೂ ಅರ್ಧಾತಾಸುಗಟ್ಟಲೇ..ಈ ಪರಿ
ಲೇಟಾಗಲಿಕ್ಕೆ ಕಾರಣ ಅಂತ ನಿರ್ವಾಹಕನಿಗೆ ಹೇಳಿದ..ಈ ನಶ್ವರ ಬಸ್ಸಿನಲ್ಲಿ ಸಿಕ್ಕ ಈ ಅಭೂತಪೂರ್ವ...
ಇದು ೨೦೦೨ ರಲ್ಲಿ ಕರ್ಮವೀರದಲ್ಲಿ ಪ್ರಕಟವಾಗಿತ್ತು..
------------------------------------------------------------------------------------------ಗಂಡ ಸುರೇಶ್ ಸಂಜೆ ಬರುವೆ ಎಂದು ಫೋನ್ ಮಾಡಿದ್ದ. ಸುರೇಖಳಿಗೆ ಫೋನ್ನಲ್ಲಿಯೇ ಎಲ್ಲ ವಿಷಯ ತಿಳಿಸುವ ತುಡಿತವಿತ್ತು. ಆದರೆ ಗಾಬರಿಯಿಂದ ಮಾತು ಸರಿಯಾಗಿ ಹೊರಡಲಿಲ್ಲ. ಸುರೇಶನೇ ಸಂಜೆ ಚಹಾದ ಜೊತೆಗೆ ವಿವರವಾಗಿ ಮಾತಾಡುವ ಎಂದು ಧೈರ್ಯ ಹೇಳಿದ್ದ. ಗಂಡನ ಮಾತು ಅವಳಿಗೆ ಪೂರ್ಣ ಸಮಾಧಾನ ತಂದಿರಲಿಲ್ಲ. ಹಾಗೆ ನೋಡಿದರೆ ಗಂಡ ಟೂರಿಗೆ ಹೋದ ದಿನ ಸೋಮವಾರದಿಂದ ಅವಳ ಮನ ಅಶಾಂತಿಯಿಂದ ಕೂಡಿತ್ತು. ಅವರ ಮುದ್ದುಮಗಳು ಅಂದಿನಿಂದಲೇ ಮಂಕಾಗಿದ್ದಾಳೆ. ಸುರೇಖ ಯಾವುದನ್ನು ನಿರೀಕ್ಷಿರಲಿಲ್ಲವೋ ಅದೇ...
ಮುಖ್ಯವಾಗಿ ಅಲ್ಲಿ ನಡೆಯೋ ಒಣ ಚರ್ಚೆಗಳು, ಗೋಷ್ಠಿಗಳು ಎಂದೂ ಜಾರಿಯಾಗದ ನಿರ್ಣಯಗಳು
ಊಟ, ವಸತಿಯ ಅಧ್ವಾನಗಳು ಹೀಗೆ ಎಲ್ಲತರಹದ ಕೆಟ್ಟ ಸಂಗತಿಗಳನ್ನೇ ಕೇಳಿದ್ದೆ ಇವೆಲ್ಲ ಒಂಥರಾ
ಹಿಂಜರಿಕೆ ಉಂಟುಮಾಡಿದ್ವು. ಅಳುಕುತ್ತಲೆ ಆಳ್ವಾಸ್ ನುಡಿಸಿರಿಗೆ ಬಂದಿಳಿದಿದ್ದೆ. ಮೂಡಬಿದ್ರೆ ಊರಿನ
ಹೊರಗೆ ಗುಡ್ಡದ ಮೇಲೆ ಒಂದು ಶಿಕ್ಷಣರಾಜ್ಯವನ್ನು ಅವರು ಸ್ಥಾಪಿಸಿದ್ದಾರೆ ಅಲ್ಲಿ ಏನೇನೆಲ್ಲ ಕಲಿಸುತ್ತಾರೆ
pg ಯಿಂದ ಹಿಡಿದು highschool ವರೆಗೆ. ಅದೆಷ್ಟು ವಿದ್ಯಾರ್ಥಿಗಳು ಶೈಕ್ಷಣಿಕ ಕ್ರಾಂತಿ ಮಾಡುತ್ತಿದ್ದಾರೆ.
ಇದೆಲ್ಲದರ ನಡುವೆ ಡಾ.ಮೋಹನ್ ಆಳ್ವ ೯ ವರ್ಷದಿಂದ ನಡೆಸಿಕೊಂಡು ಬರುತ್ತಿರುವ ನುಡಿಸಿರಿಯ
...
ಮೊನ್ನೆ ಝಿ ಮರಾಠಿಯ "ಫು ಬಾಯಿ ಫು" ನೋಡುತ್ತಿದ್ದೆ..ನಗಿಸುವುದೇ ಈ ಕಾರ್ಯಕ್ರಮದ ಉದ್ದೇಶ
ಸಣ್ಣ ಸಣ್ಣ ಸ್ಕಿಟ್ ಗಳಿರುತ್ತವೆ ಇದರಲ್ಲಿ ಹೋದವಾರ ಇದರಲ್ಲಿ ಒಂದು ಸ್ಕಿಟ್ ಪ್ರಸಾರವಾಗಿತ್ತು ಅದನ್ನು
ನೋಡುತ್ತಿದ್ದಂತೆ ನನ್ನ ಕಣ್ಣು ಜಿನುಗಿದ್ದವು...ಸ್ಕಿಟ್ ಇದೀಗ ಬಹು ವೇಗದಿಂದ ಮರೆಯಾಗುತ್ತಿರುವ
ಅಂಚೆ ಅಣ್ಣ ಮತ್ತು ಓರ್ವ ಸಣ್ಣ ಹುಡುಗಿಯ ನಡುವೆ ನಡೆಯುವ ಸಂಭಾಷಣೆ ಆ ಸ್ಕಿಟ್ ನ ವಸ್ತು..
ಹುಡುಗಿ ಚಿಕ್ಕವಳಾದರೂ ಈಗಿನ ಕಾಲದ ಹುಡುಗಿ. ಖಾಕಿ ಅಂಗಿ ಧರಿಸಿದ ಅಂಚೆಅಣ್ಣ ಅವಳಿಗೆ ಪೋಲಿಸ
ಎಂದು ಭಾಸವಾಗುತ್ತದೆ..ಅವರಿಬ್ಬರ ನಡುವೆ ನಡೆದ ಸಂಭಾಷಣೆಯ ಕೆಲ ತುಣುಕು ಇಂತಿವೆ..
ಹುಡುಗಿ: ನೀವು ಈ ಚೀಲದಲ್ಲಿ ಏನು ಇಟ್ಟು ಕೊಂಡಿರುವಿರಿ..?
ಅಂಚೆಅಣ್ಣ : ಪತ್ರ.....
ಬಾಳನದಿಯಲ್ಲಿ ಅದೆಷ್ಟು ನೀರು ಹರಿದುಹೋಗಿದೆ..ಅದೆಷ್ಟು ನೆಲ ಜಲ ಬೆಳಗಿದೆ..ಎಲ್ಲೋ ಒಂಟಿ ಮರ
ಬಂಜರು ಭೂಮಿ ನದಿನೀರನುಂಡು ನಳನಳಸಿವೆ..ನನ್ನ ಬದುಕಲ್ಲೂ ಅನೇಕ ಬದಲಾವಣೆ..
ಅವಳ ಬಾಳಲ್ಲೂ ಅನೇಕ ಮಾರ್ಪಾಡುಗಳು..ನಾ ಪತಿಯಾಗಿ ನಂತರ ಅಪ್ಪನಾಗಿ ಬದಲಾಗಿಹೆ..
ಅವಳೂ ಪತ್ನಿಯಾಗಿ ನಂತರ ತಾಯಿಯಾಗಿ ಪ್ರಮೋಶನ್ ತಗೊಂಡಿದ್ದಾಳೆ..ಆದರೆ ಮತ್ತು ಇಂದು ಅವಳನ್ನು
ನೋಡಿದಾಗ ಈ ಸ್ಥಾನಪಲ್ಲಟ ಗಮನಕ್ಕೇ ಬರಲೇ ಇಲ್ಲ ಎಂದು ಹೇಳಿದರೆ ತಪ್ಪಾಗುತ್ತದೆ...
ಮೊದಲಿಂದಲೂ ಅಷ್ಟೇ..ದೂರದಿಂದ ಮಾತ್ರ ಅವಳನ್ನು ನೋಡಲು ಸಾಧ್ಯ ಆಗಿದ್ದು ..ಕನಸ ಕಾಣುವುದರಲ್ಲಿಯೇ
ಆನಂದ ಹೊಂದಿದ್ದು ನಮ್ಮಿಬ್ಬರ ನಡುವೆ ಅಗಾಧ ನದಿಯಿತ್ತು ಅದರ ವಿಸ್ತಾರ ಹರಿವು...
ಪರಿಧಿ
1
ಈ ಜೀವನದಲ್ಲಿ ಬರುವ ಸುಖದುಃಖಗಳನ್ನು ನಿರ್ಲಿಪ್ತವಾಗಿ ಸ್ವೀಕರಿಸಬೇಕು ಇದು ನನ್ನ ಧ್ಯೇಯವಾಗಿತ್ತು. ಬಂದದ್ದೆಲ್ಲ ಬರಲಿ ಎನ್ನುವ ಸ್ಥಿತಪ್ರಜ್ಞತೆ ನನಗೆ ಬಹಳೇ ಇಷ್ಟವಾದ ವಿಷಯ ಕೆಲವೊಮ್ಮೆ ಇದರಲ್ಲಿ ಯಶ ಕಂಡಿದ್ದೆ. ಆದರೆ ಬಹಳಷ್ಟು ಸಲ ಭಾವುಕವಾಗಿದ್ದೆ, ಸ್ಥಿತಪ್ರಜ್ಞತೆ ಎಲ್ಲೊ ಓಡಿಹೋಗಿ ಆವೇಶ ನನ್ನ ಮನಸ್ಸನ್ನು ವ್ಯಾಪಿಸುತ್ತಿತ್ತು. ರಮೇಶನ ಸಾವಿನ ಸುದ್ದಿ ಕೇಳಿದಾಗಲೂ ಆಗಿದ್ದು ಹೀಗೆಯೇ. ಟೂರ್ ಮುಗಿಸಿಕೊಂಡು ಮನೆಗೆ ಬಂದವನಿಗೆ ಅವ್ವ ಹೇಳಿದ ಸುದ್ದಿ ಶಾಕ್ ನೀಡಿತ್ತು... ಅದರಲ್ಲೂ ಅವ ವಿಷಕುಡಿದು ಸತ್ತಿದ್ದ... ವಿಷಯ ಗಂಭೀರವಾಗಿತ್ತು. ತಡಮಾಡದೆ ರಮೇಶನ ಮನೆಕಡೆ ಓಡಿದೆ.
ಗೋದು...
ಕನ್ನಡದ ಬ್ಲಾಗುಗಳು, ವೆಬ್ಸೈಟುಗಳು ಅಂತರ್ಜಾಲದಲ್ಲಿ ಈಗ ನೂರಾರು. ಅವುಗಳನ್ನು ನೆನಪಿಟ್ಟುಕೊಂಡು ಪ್ರತಿ ನಿತ್ಯ ಭೇಟಿ ಕೊಡುವುದು ಕಷ್ಟ. ಇದನ್ನು ಸುಲಭವಾಗಿಸುವ ಗುರಿ ಈ ಯೋಜನೆಯದು. ಜೊತೆಗೆ ಕನ್ನಡದ ಪುಟಗಳಿಗೆ ಹೆಚ್ಚಿನ ಓದುಗರು ಬರುವಂತೆ ಮಾಡುವ ಪ್ರಯತ್ನ ಕೂಡ.
ಗಮನಿಸಿ: ಪುಟಗಳು, ಬರಹಗಳನ್ನು ಸಂಪೂರ್ಣ ಓದಲು ಓದುಗರನ್ನು ಆಯಾ ವೆಬ್ಸೈಟಿಗೇ ಕರೆದೊಯ್ಯಲಾಗುವುದು.
ನಿಮ್ಮದೂ ಒಂದು ಕನ್ನಡ ಬ್ಲಾಗ್ ಅಥವ ವೆಬ್ಸೈಟು ಇದ್ದಲ್ಲಿ ನಿಮ್ಮ ಬರಹಗಳೂ ಈ ಪಟ್ಟಿಯಲ್ಲಿ ಬರುವಂತೆ ಮಾಡಲು ಇಲ್ಲಿ ಕ್ಲಿಕ್ ಮಾಡಿ.