Thursday 19 May 2022
ಮಳೆಗಾಲವು ಬೇಂದ್ರೆಯವರಿಗೆ ಪ್ರೀತಿಯ ಕಾಲ. ಶ್ರಾವಣ ಮಾಸದ ಬಗೆಗೆ ಬೇಂದ್ರೆಯವರು ಹಾಡಿದ ಹಾಡುಗಳೆಷ್ಟೋ! ಮಳೆಗಾಲದಲ್ಲಿ ಅವರ ಹೃದಯವು ನವಿಲಿನಿಂತೆ ಗರಿಗೆದರುವುದು! ಮಳೆಗಾಲದ ಮೊದಲಲ್ಲಿ ಭರ್ರನೆ ಬೀಸಿ ಬರುವ ಮಳೆಯು ಅವರಿಗೆ ʻಭೈರವನ ರೂಪ ತಾಳಿ ಕುಣಿಯುತ್ತಿರುವಂತೆʼ ಕಾಣುತ್ತದೆ. ಮಳೆಯಲ್ಲಿ ತೊಯ್ಯುತ್ತಿರುವ ಕಲ್ಲುಬಂಡೆಗಳು ಅವರಿಗೆ ʻಅಭ್ಯಂಜನಗಯ್ಯುತ್ತಿರುವ ಸ್ಥಾವರಲಿಂಗಗಳಂತೆʼ ಕಾಣುವುವು. ಇಂತಹ ಕಾಣ್ಕೆ ವರಕವಿಗೆ ಮಾತ್ರ ಸಾಧ್ಯ. ಅದಕ್ಕೇ ಹೇಳುತ್ತಾರಲ್ಲವೆ, ʻ ನಾನೃಷಿಃ ಕುರುತೇ ಕಾವ್ಯಂ ʼ ಎಂದು.
ʻಮಳೆಗಾಲʼ ಎನ್ನುವ ಬೇಂದ್ರೆಯವರ ಕವನವು ನೋಡಲು ಅತ್ಯಂತ ಸರಳವಾದ ಕವನ. ಆದರೆ ಈ ಮುಖವಾಡದ ಒಳಗೆ ಅಡಗಿದೆ, ವಿಶ್ವದ ʻಋತʼ ಅರ್ಥಾತ್ ʻಶಾಶ್ವತ ಸತ್ಯʼ, ನಿಸರ್ಗವನ್ನು ನಡೆಯಿಸುತ್ತಿರುವ ಚೈತನ್ಯದ ಸಾಮರಸ್ಯ ಪ್ರಕ್ರಿಯೆ.
...ಉಮೇಶ ದೇಸಾಯಿಯವರು ಕನ್ನಡ ಸಾಹಿತ್ಯದಲ್ಲಿ ಆಧುನಿಕ ಪರಿಸರದ ಸುಳಿಗಾಳಿಯನ್ನು ಸಂಚಲಿಸಿದವರು. ಈ ನನ್ನ ಮಾತಿಗೆ ಕೆಲವೊಂದು ಆಕ್ಷೇಪಣೆಗಳು ಬರಬಹುದು. ದೇಸಾಯಿಯವರಿಗಿಂತ ಮೊದಲು ಆಧುನಿಕತೆ ಕನ್ನಡ ಸಾಹಿತ್ಯದಲ್ಲಿ ಇರಲಿಲ್ಲವೆ; ಕನ್ನಡ ಸಾಹಿತಿಗಳು ಆಧುನಿಕರಿರಲಿಲ್ಲವೆ?; ಇತ್ಯಾದಿ. ಯಾರು ಇಲ್ಲವೆನ್ನುತ್ತಾರೆ? ನನ್ನ ಹೇಳಿಕೆಯನ್ನು ದಯವಿಟ್ಟು ಸೂಕ್ಷ್ಮವಾಗಿ ಗಮನಿಸಿರಿ.
ಆಧುನಿಕತೆ ಪದವೇ‘ಅಧುನಾ’ ಎನ್ನುವ ಸಂಸ್ಕೃತ ಪದದಿಂದ ಬಂದಿದೆ. ‘ಅಧುನಾ’ ಪದದ ಅರ್ಥ ‘ಈ ಕ್ಷಣದ’, ಅಂದರೆ `up to date’ ಎನ್ನುವ ಅರ್ಥ. ಕನ್ನಡ ಸಾಹಿತ್ಯದಲ್ಲಿ up-to-date ಆಗಿರುವ ಸಾಹಿತ್ಯವನ್ನು ಯಾವ ಸಾಹಿತಿಗಳು ರಚಿಸಿದ್ದಾರೆ, ಹೇಳಿ. ನವೋದಯ ಕಾಲದ ಸಾಹಿತ್ಯವು ಹೊಸ ಭಾಷೆಯನ್ನು ಕಟ್ಟಿತು; ಹೊಸ ಶೈಲಿಯನ್ನು...
ಬೇಂದ್ರೆಯವರು ಒಂದು ಸಲ ತಮ್ಮ ಭಾಷಣದಾಗ ಹೇಳಿದ್ದರು:
“ನನಗ ಏನೋ ಹೊಳೀಲಿಕ್ಕೆ ಹತ್ತೇದ; ಅದು ಏನಂತ ತಿಳೀವಲ್ತು. ನನಗ ಏನೋ ತಿಳೀಲಿಕ್ಕೆ ಹತ್ತೇದ; ಅದು ಏನಂತ ಹೊಳೀವಲ್ತು.”
ಬೇಂದ್ರೆಯವರ ಕವನಗಳೂ ಹೀಗೆಯೇ ಇವೆ. ಅವುಗಳ ಅರ್ಥ ಓದುಗರಿಗೆ ಸರಳವಾಗಿ ಆಗುತ್ತದೆ. ಆದರೆ ಅವುಗಳ ಅಂತರಾರ್ಥ ಸರಳವಾಗಿ ಆಗುವುದಿಲ್ಲ.
ತಮ್ಮ ಕವನಗಳು ಹುಟ್ಟುವ ಪರಿಯನ್ನು ಬೇಂದ್ರೆಯವರು ತಮ್ಮ ಕವನಗಳ ಮೂಲಕವೇ ಸೂಚಿಸಿದ್ದಾರೆ. ಉದಾಹರಣೆಗೆ, ‘ಭಾವಗೀತೆ’ ಹಾಗೂ ‘ಗರಿ’ ಎನ್ನುವ ಕವನಗಳು. ‘ಕನಸಿನ ಕೆನಿ’ ಎನ್ನುವ ಕವನದಲ್ಲಿ ತಮ್ಮ ಕವನಗಳನ್ನು ಹೇಗೆ ಅರ್ಥೈಸಿಕೊಳ್ಳಬೇಕು ಎನ್ನುವುದನ್ನು ಬೇಂದ್ರೆಯವರು ಸೂಚಿಸುತ್ತಿದ್ದಾರೆ. ಕನಸು...
ಆರತಿ ಘಟಿಕಾರರು ಕನ್ನಡದ ಜಾನೇಮಾನೇ ವಿನೋದ ಸಾಹಿತಿಗಳು. ಅವರ ವಿನೋದ ಲೇಖನಗಳು ಈಗಾಗಲೇ ಕನ್ನಡದ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡು ಓದುಗರನ್ನು ನಗಿಸಿವೆ, ಸಂತೋಷಗೊಳಿಸುವೆ. ‘ಭಾವತೋರಣ’ ಎನ್ನುವ ಅವರ ಬ್ಲಾ˘ಗ್ ದಲ್ಲಿ (bhaavatorana.bloggspot.com), ಅವರ ಹಾಸ್ಯಲೇಖನಗಳನ್ನು ಓದಬಹುದು. ‘ಮಾತ್ರೆ ದೇವೋ ಭವ’ ಎನ್ನುವುದು ಅವರ ಹಾಸ್ಯಲೇಖನಗಳ ಸಂಕಲನ. ಇದು ಅವರ ಪ್ರಥಮ ಪ್ರಕಟಿತ ಕೃತಿಯೂ ಹೌದು.
ಹಾಸ್ಯ ಹೇಗಿರಬೇಕು? ಹಾಸ್ಯಬ್ರಹ್ಮ ಬಿರುದಾಂಕಿತ ರಾ.ಶಿ.ಯವರು ಒಮ್ಮೆ ಹೇಳಿದಂತೆ ಹಾಸ್ಯವುsubtle ಪದದಲ್ಲಿಯ b ಇದ್ದಂತೆ ಇರಬೇಕು. ಹಾಸ್ಯವು ಮುಗುಳುನಗೆಯನ್ನು ಉಕ್ಕಿಸಬೇಕೇ ಹೊರತು, ಅಟ್ಟಹಾಸವನ್ನಲ್ಲ. ಆರತಿಯವರ ಲೇಖನಗಳನ್ನು ಓದುತ್ತ ಹೋದಂತ, ಓದುಗನ ಮುಖದ ಮೇಲಿನ...
ನವೋದಯ ಕಾಲದ ಕನ್ನಡ ಲೇಖಕರು ಹೊಸಗನ್ನಡ ಭಾಷೆಯನ್ನು ಕಟ್ಟುವುದರ ಜೊತೆಗೇ, ತಿಳಿಹಾಸ್ಯದ ಹೊಳೆಯನ್ನೂ ಹರಿಸಿದರು. ಹಾಸ್ಯಬ್ರಹ್ಮ ‘ರಾ.ಶಿ.’ಯವರು ‘ಕೊರವಂಜಿ’ ಮಾಸಪತ್ರಿಕೆಯನ್ನು ಪ್ರಾರಂಭಿಸುವದರ ಮೂಲಕ ಅನೇಕ ವೈನೋದಿಕರಿಗೆ ಒಂದು ವೇದಿಕೆಯನ್ನು ಒದಗಿಸಿಕೊಟ್ಟರು. ಕೊರವಂಜಿಯ ಮಹಾನಿರ್ಯಾಣದ ನಂತರ, ‘ಅಪರಂಜಿ’ ಪ್ರಾರಂಭವಾಯಿತು. ಜೊತೆಗೇ ಕನ್ನಡದಲ್ಲಿ ಇನ್ನೂ ಅನೇಕ ನಿಯತಕಾಲಿಕಗಳು ಉದಯಿಸಿದವು.ಇದರಿಂದಾಗಿ, ನವೋದಯದ ನಂತರದ ಹಾಸ್ಯಲೇಖಕರಿಗೆ ಇನ್ನಷ್ಟು ಅವಕಾಶಗಳು ದೊರೆತವು. ಶ್ರೀಮತಿ ಸುಧಾ ಸರನೋಬತ್ ಅವರು ಈ ಎಲ್ಲ ಪತ್ರಿಕೆಗಳಲ್ಲಿ ತಮ್ಮ ಲೇಖನಗಳನ್ನು ಪ್ರಕಟಿಸುವುದರ ಮೂಲಕ ಕನ್ನಡಿಗರಿಗೆ ಹಾಸ್ಯದೌತಣವನ್ನು ನೀಡುತ್ತ ಪರಿಚಿತರೇ ಆಗಿದ್ದಾರೆ.
ಸುಧಾಜೀಯವರು ರಚಿಸಿದ ‘ಹೆಸರಿನಲ್ಲೇನಿದೆ ಮಹಾ….’ ಕೃತಿಯಲ್ಲಿ...
ಆಧುನಿಕ ಕನ್ನಡದಲ್ಲಿ ಸೈನಿಕಸಾಹಿತ್ಯವು ಬಂದದ್ದು ತೀರ ಕಡಿಮೆ. ಸೈನಿಕಸಾಹಿತ್ಯ ಎನ್ನುವ ಪ್ರಕಾರದಲ್ಲಿ ರಚನಾಕ್ರಮವನ್ನು ಅನುಸರಿಸಿ ನಾವು ಮೂರು ವಿಭಾಗಗಳನ್ನು ಮಾಡಬಹುದು:
(೧) ಯುದ್ಧರಂಗದ ಸಾಹಿತ್ಯ.
(೨) ಸೈನಿಕರ ಬದುಕಿನ ಬಗೆಗೆ ಬರೆದ ಸಾಹಿತ್ಯ,
(೩) ಸೈನಿಕರು ಬರೆದ ಸಾಹಿತ್ಯ
ಯುದ್ಧರಂಗದ ಸಾಹಿತ್ಯದ ಬಗೆಗೆ ಹೇಳುವುದಾದರೆ, ಕನ್ನಡದಲ್ಲಿ ಈ ಪ್ರಕಾರದ ಸ್ವತಂತ್ರ ಕೃತಿಗಳು ಅತಿ ಕಡಿಮೆ ಎನ್ನುವುದು ನಮ್ಮ ಅರಿವಿಗೆ ಬರುತ್ತದೆ. ಇಂಗ್ಲಿಶ್...
ಶ್ರೀ ಉಮೇಶ ದೇಸಾಯಿಯವರ `ಅನುಪಮಾ ಆಖ್ಯಾನ’ವು ಶ್ರಾವ್ಯಕೃತಿಯಾಗಿ ಡಿಜಿಟಲ್ ರೂಪದಲ್ಲಿ ಹೊರಬಂದಿದೆ. ಈ ಪ್ರಯೋಗಶೀಲ ಸಾಹಿತ್ಯಕರ್ಮಿಯ ಹೊಚ್ಚ ಹೊಸ ಪ್ರಯೋಗವಿದು. ಇದಕ್ಕೂ ಮೊದಲು ಅವರು ಗಝಲ್‘ಗಳನ್ನು, ಕಥೆಗಳನ್ನು ಬರೆದಿದ್ದರು. ಅಷ್ಟಕ್ಕೇ ತೃಪ್ತರಾಗದ ದೇಸಾಯರು ‘ಮೈತ್ರಿ ಪ್ರಕಾಶನ’ ಎನ್ನುವ ತಮ್ಮದೇ ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ, ತನ್ಮೂಲಕ ಹೊಸ ಲೇಖಕರ ರಚನೆಗಳನ್ನು ಸಂಕಲಿಸಿ ಹೊರತರುವ ಹೊಸದೊಂದು ಪ್ರಯೋಗಕ್ಕೆ ನಾಂದಿ ಹಾಡಿದರು. ಬ್ಯಾಂಕ್ ಉದ್ಯೋಗಿಯಾಗಿ ನೌಕರಿ ಮಾಡುತ್ತಲೇ, ಸಾಹಿತ್ಯಕೃತಿಗಳನ್ನು ಬರೆಯುವುದು, ಬರೆಯಿಸುವುದು, ಪ್ರಕಾಶಿಸುವುದು ಇವುಗಳಲ್ಲಿ ನಿರತರಾದ, ಎಡವಯಸ್ಸಿನ ಈ ಸಾಹಸಜೀವಿಯನ್ನು ನಾನು ಬೆರಗಿನಿಂದ ನೋಡುತ್ತೇನೆ. ಪ್ರತಿಯೋರ್ವ ಸಾಹಿತಿಯ ಒಳಗೆ ಒಂದು ಪ್ರೇರಕ ಶಕ್ತಿ ಕೆಲಸ ಮಾಡುತ್ತಿರುತ್ತದೆ. ಉಮೇಶ...
ಸುದರ್ಶನ ಗುರುರಾಜರಾವ ಇವರು ಕರಣಂ ರಚಿಸಿದ ಕಾದಂಬರಿ ‘ಗ್ರಸ್ತ’ ಬಗೆಗೆ ವಿಮರ್ಶಾತ್ಮಕ ಲೇಖನ ಬರೆದಿದ್ದಾರೆ. ಇದನ್ನು ‘ಸಲ್ಲಾಪ’ದಲ್ಲಿ ಪ್ರಕಟಿಸಲು ಸಂತೋಷವಾಗುತ್ತಿದೆ. ಈ ಲೇಖನದಲ್ಲಿ ಸುದರ್ಶನರು ವ್ಯಕ್ತಪಡಿಸಿದ ಅಭಿಪ್ರಾಯಗಳು ಸಂಪೂರ್ಣವಾಗಿ ಅವರವೇ ಆಗಿವೆ. ‘ಸಲ್ಲಾಪ’ blogದ ಒಡೆಯರಿಗೆ ಇದರೊಡನೆ ಯಾವುದೇ ಸಂಬಂಧವಿಲ್ಲ. ------ಸುನಾಥ ..................... ಕೊಂಡು ತಂದು ೨ ವರ್ಷಗಳಷ್ಟೇ ಆಗಿದ್ದರೂ ಗ್ರಸ್ತವನ್ನು ಓದಲು ಕಾಲ ಕೂಡಿ ಬಂದಿರಲೇ ಇಲ್ಲ. ಅಂತರ್ಜಾಲದಲ್ಲೂ ,ಫೇಸ್ಬುಕ್ ಪುಟಗಳಲ್ಲೂ ಸಾಕಷ್ಟು ಓದುಗರು ಈ ಕಾದಂಬರಿಯನ್ನು ಕುರಿತು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಮೊದಲು ಕರಣಂ ಅವರ ಕರ್ಮ ಮತ್ತು ನನ್ನಿ ಎರಡನ್ನೂ ಓದಿ ಮೆಚ್ಚಿದ್ದೆ.ಈ ಭಾನುವಾರ ಯಾವ ಕೆಲಸ ಇಲ್ಲದ ಕಾರಣ ನಿಧಾನವಾಗಿ ಕುಳಿತು...
‘ಅಸ್ಪಷ್ಟ ತಲ್ಲಣಗಳು’ ಎನ್ನುವ ಕಥಾಸಂಕಲನಕ್ಕಾಗಿ ಶ್ರೀಮತಿ ಟಿ.ಎಸ್. ಶ್ರವಣಕುಮಾರಿಯವರನ್ನು ಕನ್ನಡ ಓದುಗರು ಅಭಿನಂದಿಸಲೇಬೇಕು. ಈ ಕಥಾಸಂಕಲನದಲ್ಲಿಯ ಹನ್ನೆರಡು ಕಥೆಗಳು ಕನ್ನಡ ಸಾಹಿತ್ಯಕ್ಕೆ ಹೊಸ ಬಗೆಯ ಕಥೆಗಳಾಗಿವೆ. ಶ್ರವಣಕುಮಾರಿಯವರ ಈ ಕಥಾಸಂಕಲನವನ್ನು ಪ್ರಕಟಿಸುವ ಮೂಲಕ ‘ಮೈತ್ರಿ ಪ್ರಕಾಶನ’ವು ಕನ್ನಡ ಓದುಗರಿಗೆ ಒಂದು ಉಪಕಾರವನ್ನು ಮಾಡಿದೆ. ಆದುದರಿಂದ ಈ ಕಥಾಸಂಕಲನದ ಪ್ರಕಾಶಕರಾದ ‘ಮೈತ್ರಿ ಪ್ರಕಾಶನ’ದ ಒಡತಿ ಶ್ರೀಮತಿ ಅಂಜಲಿ ದೇಸಾಯಿಯವರಿಗೆ ನನ್ನ ಧನ್ಯವಾದಗಳು. ಶ್ರವಣಕುಮಾರಿಯವರ ಕಥೆಗಳನ್ನು ಬಿಡಿಬಿಡಿಯಾಗಿ ಓದಿದಾಗ ಈ ಕಥೆಗಳನ್ನು ಪೋಣಿಸುವ ಸೂತ್ರ ಒಂದಿದೆ ಎಂದು ಹೊಳೆಯಲಿಕ್ಕಿಲ್ಲ. ಇಲ್ಲಿಯ ಕಥಾಶೈಲಿಯ ಅನನ್ಯತೆ, ಕಥಾರಚನೆಯ ಹೊಸತನ ಹಾಗು ಕಥಾನಕಗಳ motif ಇವು, ಈ ಕಥೆಗಳನ್ನು ಒಟ್ಟಾಗಿ ಓದಿದಾಗ ಮಾತ್ರ ವೇದ್ಯವಾಗುತ್ತವೆ...
ಹಾsಡುತ್ತ ಬಂದಿತು.
ಗಿಡಗಳ ತಲೆದೂಗಿಸಿತ್ತು...
ಬಂದಿಯೊಳಗಿದ್ದವರ ಬಂಧನವ ಬಿಡಿಸುವಾ ಬಂದಿಕಾರಾ ಶ್ರಾವಣಾ ಬಂಧನದೊಳಿಹರೊ ಜಗವಂದಿತರನಿಂದಿತರು ಬಂದೆ ಬಿಡಿಸೈ ಶ್ರಾವಣಾ ಅಂಧಕಾರವಿದಲ್ಲ ಮಂದೇಹ ಸಂಘವಿದೆ ಸಂದೇಹವೇ ಶ್ರಾವಣಾ? ಅಂದು ಗಾಯತ್ರಿ ಮನದಂದು ಕಿವಿದುಂಬಿಸಿದೆ ಇಂದಾವದೊ ಶ್ರಾವಣಾ? ಬಂದು ಗೀತೆಯ ಹಾಡಿನೊಂದು ಯೋಗವ ಹೇಳಿ ಒಂದುಗೂಡೋ ಶ್ರಾವಣಾ. ಒಂದು ಶ್ರುತಿಯವ ನೀನಮಂದ ನಂದನವಾಸಿ ಮಂದಹಾಸಾ ಶ್ರಾವಣಾ. ನಂದಗೋಪನ ಕಾಂತೆಗಂದೊಪ್ಪಿಸಿದೆ ತಾನೆ ಬಂಧಮುಕ್ತನ ಶ್ರಾವಣಾ. ಇಂದು ಬಂದಿಹುದು ಮತ್ತೊಂದು ಸಮಯವು ಅಂತೆ ತಂದೆ ಬಿಡಿಸೈ ಶ್ರಾವಣಾ. ಮುಂದಿರುವ ಹೊಲಗಳಲಿ ಇಂದಿರೆಯೆ ನಲಿವಂತೆ ಚೆಂದವೇನೋ ಶ್ರಾವಣಾ ಬಂಧು ನೀ ಬೆಳೆಗೆ ಉಕ್ಕಂದ ನೀ ಹೊಳೆಗೆ ಆ- ನಂದಸಿಂಧೋ ಶ್ರಾವಣಾ. ಚಂಡರಾಹುಗ್ರಾಸದಿಂದ ಬಿಡಿಸೈ ಜಗದ ಚಂದಿರನನೇ ಶ್ರಾವಣಾ. ನಿಂದಿಸುತ ಬಾಯ್ಮುಚ್ಚಿ ಸ್ಫುಂದಿಸುತ ಬಡವರಾ-...
ಕನ್ನಡದ ಬ್ಲಾಗುಗಳು, ವೆಬ್ಸೈಟುಗಳು ಅಂತರ್ಜಾಲದಲ್ಲಿ ಈಗ ನೂರಾರು. ಅವುಗಳನ್ನು ನೆನಪಿಟ್ಟುಕೊಂಡು ಪ್ರತಿ ನಿತ್ಯ ಭೇಟಿ ಕೊಡುವುದು ಕಷ್ಟ. ಇದನ್ನು ಸುಲಭವಾಗಿಸುವ ಗುರಿ ಈ ಯೋಜನೆಯದು. ಜೊತೆಗೆ ಕನ್ನಡದ ಪುಟಗಳಿಗೆ ಹೆಚ್ಚಿನ ಓದುಗರು ಬರುವಂತೆ ಮಾಡುವ ಪ್ರಯತ್ನ ಕೂಡ.
ಗಮನಿಸಿ: ಪುಟಗಳು, ಬರಹಗಳನ್ನು ಸಂಪೂರ್ಣ ಓದಲು ಓದುಗರನ್ನು ಆಯಾ ವೆಬ್ಸೈಟಿಗೇ ಕರೆದೊಯ್ಯಲಾಗುವುದು.
ನಿಮ್ಮದೂ ಒಂದು ಕನ್ನಡ ಬ್ಲಾಗ್ ಅಥವ ವೆಬ್ಸೈಟು ಇದ್ದಲ್ಲಿ ನಿಮ್ಮ ಬರಹಗಳೂ ಈ ಪಟ್ಟಿಯಲ್ಲಿ ಬರುವಂತೆ ಮಾಡಲು ಇಲ್ಲಿ ಕ್ಲಿಕ್ ಮಾಡಿ.