ವಿಶೇಷ
ನಮ್ಮ ಬಗ್ಗೆ
ನಾವು ಯು ಎ ಇ ಯಲ್ಲಿ ವಾಸವಾಗಿರುವ ಕನ್ನಡದಲ್ಲಿ ಆಸಕ್ತಿಯಿರುವ ಕನ್ನಡಿಗರು.
ಸಾಹಿತ್ಯಾಸಕ್ತರಿಗೆ ತಮ್ಮ ಹವ್ಯಾಸವನ್ನು ಬೆಳೆಸಿಕೊಳ್ಳುವುದಕ್ಕೆ ಪೂರಕವಾಗಿರುವ ಅಂತರ್ಜಾಲ ತಾಣ ನಮಗೂ ಬೇಕೆಂಬ ಹಂಬಲದಿಂದ ಆರಂಭಿಸಿದ ತಾಣವಿದು. ನಮ್ಮ ಸಂಸ್ಕೃತಿ, ಭಾಷೆ, ಕಲೆ ಇತ್ಯಾದಿಗಳಲ್ಲಿ ಆಸಕ್ತರೆಲ್ಲ ನಮ್ಮನ್ನು ಸೇರಿಕೊಳ್ಳಬಹುದು.
ಅಂತರ್ಜಾಲದಲ್ಲಿರುವುದರಿಂದ ವಿಶ್ವದೆಲ್ಲೆಡೆಯ ಸಾಹಿತ್ಯಾಸಕ್ತರೂ ನಮ್ಮನ್ನು ಸೇರಿಕೊಳ್ಳಬಹುದೆಂದು ನಾವು ಅದಾಗಲೇ ನಿರ್ಣಯಿಸಿಬಿಟ್ಟಿದ್ದೇವೆ. ಹಾಗಾಗಿ ನಮ್ಮನ್ನು ಸೇರಿಕೊಳ್ಳುವುದಕ್ಕೆ ವಿಶ್ವದೆಲ್ಲೆಡೆಯ ಸಹೃದಯೀ ಕನ್ನಡಿಗರಿಗೆ ಮುಕ್ತ ಆಹ್ವಾನ.
ತಮ್ಮ ಸುಪ್ತ ಪ್ರತಿಭೆಯನ್ನು ಇಲ್ಲಿ ಪ್ರದರ್ಶಿಸಿ, ತಾವೂ ಬೆಳೆದು ತಮ್ಮಂತೆಯೆ ಇಲ್ಲಿ ಬಂದಿರುವ ಇತರರನ್ನೂ ಬೆಳೆಸಿ ನಮ್ಮ ಜೀವಮಾನದಲ್ಲಿ ಕನ್ನಡಿಗರಾಗಿ ಬದುಕೋಣ. ಇಂದಿನ ಪ್ರಾಪಂಚಿಕ ಜೀವನದಲ್ಲಿ ಮೌಲ್ಯ ಕಳೆದುಕೊಳ್ಳುತ್ತಿರುವ ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಗಳಲ್ಲಿ ಅಲ್ಪ ಸ್ವಲ್ಪ ಆಸಕ್ತಿಯಿದ್ದವರನ್ನು ಗುರ್ತಿಸಿ ಅವರ ಬೆನ್ನು ತಟ್ಟಿ ಪ್ರೋತ್ಸಾಹಿಸೋಣ.
ಈಯೆಲ್ಲ ಕೆಲಸ ನಾವು ನಮ್ಮ ಆತ್ಮತೃಪ್ತಿಗಾಗಿ ಮಾಡುತ್ತಿದ್ದೇವೆಯೇ ಹೊರತು ಇನ್ನೊಬ್ಬರ ಸಹಾಯಕ್ಕಾಗಿ ಮಾಡುತ್ತಿಲ್ಲ ಎಂಬುದನ್ನು ಮೊದಲೆ ಮನಸ್ಸಿನಲ್ಲಿ ಸ್ಥಾಪಿಸಿಕೊಂಡು ಪ್ರತಿಫಲಾಪೇಕ್ಷೆಯನ್ನು ಹೊರಗಿಟ್ಟರೆ ನಮಗೆ ಇಲ್ಲಿ ಸಿಗುವ ಅನುಭವವೆಲ್ಲ ಆನಂದವೇ ಆನಂದ!
ಈ ಆತ್ಮಾನಂದಕ್ಕಾಗಿ ನಮ್ಮನ್ನು ಸೇರುವವರಿಗೆಲ್ಲ ಸುಸ್ವಾಗತ.
ನಮೂನೆಗಳು
- ಶ್ರೀನಾಥ್ ಭಲ್ಲೆ, ರಿಚ್ಮಂಡ್, ವಿ.ಎ
ಎಲ್ಲರ ಜೀವನದಲ್ಲೂ ಇಂತಹ ನಮೂನೆಗಳು ಇದ್ದೇ ಇರುತ್ತಾರೆ .... ಇವರುಗಳು ರೀತಿ ರಿವಾಜು ಬೇರೆ ... ಇವರ ನಡುವಳಿಕೆಯನ್ನು 'abnormal' ಅನ್ನುವ ಬದಲು 'different' ಅನ್ನಬಹುದು ... ಬಹಳ ಹಿಂದೆ ಟೀ.ವಿ ಯಲ್ಲಿ ಮೂಡಿ ಬರುತ್ತಿದ್ದ 'Ketchup' ಜಾಹೀರಾತಿನಲ್ಲಿ ಪಂಕಜ್ ಕಪೂರ್ ಹೇಳುವಂತೆ 'Its different' .... ಇರಲಿ, ನಾನು ಏನ ಹೇಳಹೊರಟಿರುವುದೆಂದರೆ ಕೆಲವು ನಮೂನೆಗಳ ನಗುವಿನ ಬಗ್ಗೆ.
ಕಲ್ಲು ಗಣಪತಿ
ಪ್ರವಾಸ ಲೇಖನ-3
-ನಳಿನಿ ಸೋಮಯಾಜಿ
ಹೆಸರೇ ಹೇಳುವಂತೆ ಗಣಪನು ಕಲ್ಲುಗಳ ಮಧ್ಯೆ ಈ ಪ್ರದೇಶ ದಲ್ಲಿದ್ದಾನೆ. ಬ್ರಹ್ಮಾವರದಿಂದ ಬಾರಕೂರ ರಸ್ತೆ ಯಲ್ಲಿ ಮುಂದುವರೆದಾಗ ಬಾರಕೂರಿನಿಂದ ಸ್ವಲ್ಪ ಮುಂದೆ ಸಿರಿಯಾರ ಮತ್ತು ಸಾಯಿಬರಕಟ್ಟೆ ನಡುವೆ ಕುದುರೆಬೆಟ್ಟು ಎಂಬಲ್ಲಿ ಎಡ ಭಾಗದಲ್ಲಿ ತಿರುಗಿದರೆ ಕಲ್ಲುಗಣಪತಿಗೆ ಹೊಗುವ ಮಣ್ಣಿನರಸ್ತೆ ಸಿಗುತ್ತದೆ. ಈ ರಸ್ತೆಯಲ್ಲಿ ಮುಂದುವರೆದರೆ ಒಮ್ಮೆಗೆ ಕಲ್ಲುಗಳ ಗುಡ್ಡ ನಮಗೆ ಕಾಣುತ್ತದೆ.
ಬಯಲುಗಳ ಮಧ್ಯೆ ಈ ರೀತಿಯ ಕಲ್ಲುಗಳು ಒಂದಕ್ಕೊಂದು ತಾಗಿ ಸುಂದರ ತಾಣ ಒಂದನ್ನು ಪ್ರಕೃತಿವುಂಟು ಮಾಡಿರುವುದು ನಿಜಕ್ಕೂ ಮೆಚ್ಚಬೇಕಾದ ವಿಷಯ. ಇಲ್ಲಿ ದೊಡ್ಡ ಕಲ್ಲುಗಳು ಒಂದಕ್ಕೊಂದು ಆಸರೆಯಾಗಿ ಗುಹೆಯ ನಿರ್ಮಾಣ ಮಾಡಿದೆ. ಹತ್ತಲು ಸುಲಭವಾಗಿದ್ದು ಗುಡ್ಡದ ತುದಿಯವರೆಗೆ ಹೋಗಬಹುದಾಗಿದೆ.   ಪೂರ್ತಿ ಓದಿ... »
ನಿಸರ್ಗ ದೈವ
-ತ.ವಿ. ಶ್ರೀನಿವಾಸ, ಮುಂಬೈ
ಪರ್ಯಾವರಣ = ಪರಿ (ಸುತ್ತಲೂ) ಆವರಣ (ಪಸರಿಸಿರುವುದು) - ಎಂದರೆ ನಮ್ಮ ಅಥವಾ ಈ ಜಗತ್ತಿನ ಸುತ್ತಲೂ ಆವರಿಸಿರುವುದು. ಅದೇನು? ಆಗಸ, ಗಾಳಿ, ಬೆಳಕು, ನೀರು, ಭೂಮಿ. ಅಂದರೆ ಇವುಗಳನ್ನೇ ಪಂಚಭೂತಗಳು ಎನ್ನುವರಲ್ಲವೇ? (5 elements) ಕಣ್ಣಿಗೆ ಕಾಣದಿದ್ದರೂ, ಜೀವ ಇರುವುದನ್ನು ತೋರದಿದ್ದರೂ, ತಮ್ಮ ತಮ್ಮ ಪರಾಕ್ರಮವನ್ನು ಸೂಕ್ತ ಸಮಯದಲ್ಲಿ ತೋರಿಸುವ, ಇತರರಿಗೆ ತಮ್ಮ ಇರುವನ್ನು ತೋರ್ಪಡಿಸಬಲ್ಲ ಅಂಶಗಳು.   ಪೂರ್ತಿ ಓದಿ... »
PaGo: The man who took Yakshagana to Dasara
Although essentially a token representation, I think, Yakshagana has been part of Dasara festivities beginning 1955. That year for the first time after Independence select artistes of Dharmasthala troupe staged a two-hour show, followed the next day by a Talamaddale programme of which the inaugural was presided over by famous Kannada poet Gopalakrishna Adiga.
The man who took the coastal Yakshagana to Mysore Dasara was the Late Padyana Gopalakrishna (PaGo), a mercuric multi-faceted personality from Mangalore who later became the Times of India's Mangalore Correspondent. PaGo convinced the then Dharmadhikari, troupe manager Kuriya Vittala Shastry and a few well-known artistes for this off-season performance. The programme impressed the elite audience paving the way for a series of Yakshagana shows in Bangalore and New Delhi.
Peruvodi Narayana Hasyagara who was part of PaGo's team has recollected his experience in an article in a book on PaGo's life and achievements. Read it here.
However, according to historical records, Yakshagana was performed in the Mysore palace for the first time as early as 200 years before this event...
ತಲಕಾಡು - ಪ್ರವಾಸ ಲೇಖನ - 2
ಪ್ರವಾಸ ಲೇಖನ-೨
-ನಳಿನಿ ಸೋಮಯಾಜಿ
ತಲಕಾಡು ಶಿವಸಮುದ್ರದ ಭರಚುಕ್ಕಿ ಪ್ರದೇಶದಿಂದ 24 ಕಿಲೋಮೀಟರ್ ದೂರದಲ್ಲಿದೆ. ನಾವು ಈ ರಸ್ತೆಯಲ್ಲಿ ಮುಂದುವರೆದು ತಲಕಾಡು ಸೇರುವ ಉದ್ದೇಶದಿಂದ ನಮ್ಮ ಪ್ರಯಾಣ ಮುಂದುವರೆಸಿದೆವು. ರಸ್ತೆಯಂತೂ ಒಂದಿಷ್ಟೂ ಸರಿಯಿಲ್ಲದೆ ನಮಗೆ ಆ 24 ಕಿಲೋಮೀಟರ್ ದೂರ ಸಾಗಿ ತಲಕಾಡು ಸೇರಲು 2 ಗಂಟೆ ಬೇಕಾಯಿತು.   ಪೂರ್ತಿ ಓದಿ... »
ಎನರ್ಜಿ ಡ್ರಿಂಕ್ ಹಿಂದಿನ ಸತ್ಯ
-ಅರ್ಶದ್ ಹುಸೇನ್ ಎಂ.ಹೆಚ್, ದುಬೈ.
ತಕ್ಷಣ ಹೆಚ್ಚಿನ ಶಕ್ತಿ ನೀಡುವ ಎನರ್ಜಿ ಡ್ರಿಂಕ್ ಪಾನೀಯಗಳು ಜನಪ್ರಿಯತೆ ಪಡೆದುಕೊಳ್ಳುತ್ತಿದ್ದಂತೆಯೇ ಆ ಪೇಯದಲ್ಲಿರುವ ಋಣಾತ್ಮಕ ಅಂಶಗಳನ್ನು ಅಮೇರಿಕಾದ ಜಾನ್ ಹಾಪ್ಕಿನ್ಸ್ ಮೆಡಿಕಲ್ ಇನ್ಸಿಟಿಟ್ಯೂಶನ್ ಬಹಿರಂಬಪಡಿಸಿದೆ. ಇವುಗಳ ಸೇವನೆಯಿಂದ ಶರೀರಕ್ಕೆ ಅಗತ್ಯವಿರುವುದಕ್ಕಿಂತಲೂ ಹೆಚ್ಚಿನ ಕೆಫೀನ್ ದೇಹಕ್ಕೆ ಸೇರಿ ಹೆಚ್ಚಿನ ಹಾನಿಯುಂಟುಮಾಡುತ್ತದೆ ಎಂದು ಸಂಶೋಧನೆ ಬಹಿರಂಗಪಡಿಸಿದೆ.   ಪೂರ್ತಿ ಓದಿ... »
ಭವ ಬಂಧನ
- ಶ್ರೀನಾಥ್ ಭಲ್ಲೆ, ರಿಚ್ಮಂಡ್, ವಿ.ಎ.
ಹಲವಾರು ಬಾರಿ ಪದವೊಂದೇ ಆದರೂ ಅವುಗಳ ಅರ್ಥ ಬೇರೆ ಇರುತ್ತದೆ. ಅಂತಹ ಕೆಲವು ಪದಗಳನ್ನು ತೆಗೆದುಕೊಂಡು ಕವನ ರೂಪದಲ್ಲಿ ಭವ ಬಂಧನದ ಬಗೆಗಿನ ಒಂದು ಸನ್ನಿವೇಶವನ್ನು ಹೆಣೆದಿದ್ದೇನೆ. ಕವನದಲ್ಲಿ ಅಕ್ಕ-ತಂಗಿಯರ ಬಾಂಧವ್ಯವಿದೆ. ತಂದೆಯ ಸ್ಥಾನದಲ್ಲಿ ನಿಲ್ಲುವ ಭಾವನ ಚಿತ್ರಣವಿದೆ.   ಪೂರ್ತಿ ಓದಿ... »
ಓ ಗೆಳೆಯ, ಈ ಹುಡುಗಿಯರೇ ಹೀಗೆ....
- ಗುರು ಬಬ್ಬಿಗದ್ದೆ
ಓ ಗೆಳೆಯ, ಈ ಹುಡುಗಿಯರೇ ಹೀಗೆ
ಒಮ್ಮಿಂದೊಮ್ಮೆಲೇ ಸಂತೋಷದಲ್ಲಿ ತೇಲಾಡುತ್ತಾರೆ
ತಲೆಯ ಮೇಲೆ ಆಕಾಶವೇ ಬಿದ್ದಂತೆ ವರ್ತಿಸುತ್ತಾರೆ
ಯಾರ್ಯಾರದೋ ಮಾತಿಗೆ ತಲೆ ಕೆಡಿಸಿಕೊಳ್ಳುತ್ತಾರೆ
ಇನ್ಯಾರನ್ನೋ ಅದಕ್ಕಾಗಿ ಶಿಕ್ಷಿಸುತ್ತಾರೆ
ಓ ಗೆಳೆಯ, ಈ ಹುಡುಗಿಯರೇ ಹೀಗೆ   ಪೂರ್ತಿ ಓದಿ... »
ನ್ಯೂ ಜೆರ್ಸಿ ನ್ಯೂ ಯಾರ್ಕಿನಲ್ಲಿ ನಡೆದ ಎರಡು ಪ್ರಬುದ್ಧ ಯಕ್ಷಗಾನ ಪ್ರದರ್ಶನಗಳು
- ಭ್ರಮರಿ ಶಿವಪ್ರಕಾಶ್, ಯು.ಎಸ್.ಎ.
ಕರಾವಳಿ ಕರ್ನಾಟಕದ ಗಂಡು ಕಲೆ ಯಕ್ಷಗಾನದ ಉಳಿವಿಗಾಗಿ ಮತ್ತು ವೃತ್ತಿ ಕಲಾವಿದರ ಹಿತರಕ್ಷಣೆಗಾಗಿ ಗುಂಪು ವಿಮೆ, ಆರೋಗ್ಯ ವಿಮೆ ಮುಂತಾದ ಬೃಹತ್ ಯೋಜನೆಗಳನ್ನು ಹಮ್ಮಿಕೊಂಡಿರುವ ಸಂಸ್ಥೆ ಉಡುಪಿಯ ಯಕ್ಷಗಾನ ಕಲಾರಂಗ (ರಿ).   ಪೂರ್ತಿ ಓದಿ... »
Professional troupes may face shortage of artistes soon
The declining number of audience for Yakshagana is a topic of debate. I think Yakshagana will suffer in the future not for want of audience but artistes. It is extremely difficult to attract talent to professional Yakshagana.Average youngsters today have hundreds of better opportunities. So who will want to lose sleep and lead a nomad's life for six months in a year being part of a professional Yakshagana troupe. Sheni Gopalakrishna Bhat wrote in his autobiography:
'Yakshagana survives because many of us were ready to sacrifice life's comforts for our love of the art. Life is hard for yakshagana artistes. These days (he was referring 50s and 60s of the last century) even a daily wager earns more than what a popular Yakshagana artiste can earn.'
In fact Yakshagana grew because there were talented people in those days whose love for the art was above their love for a good life and their own family. Such commitment cannot be and should not be expected from today's generation.
A report in Deccan Herald last week says the famous and the only tenkutittu yakshagana training centre at Dharamasthala will remain closed this year because there are no students.
The report quotes the centre's director as saying:
'In the beginning (1972) we had 25 students. Later the number declined to 15. This year we received 14 applications. Later, there was no positive response from any of them'
Nothing surprising. This was bound to happen. That it found students all these years is surprising indeed.
So, professional troupes in all likelihood will soon become part of history. Even the existing temple troupes will find it difficult to find artistes. The future of Yakshagana will lie in the hands of amateurs - just as the theatre today.
ಜೀವನದಿ ಕಾವೇರಿ
ಕನ್ನಡ ನಾಡಿನ ಜೀವ ನದಿ ಕಾವೇರಿ. ದಕ್ಷಿಣದ ಗಂಗೆ ಎಂದೇ ಹೆಸರಾದ ಇದು, ಹಲವು ಕೋಟಿ ಜನ-ಜೀವಿಗಳ ಜೀವನಾಧಾರ. ಕೊಡಗಿನ ಜನರ ಆರಾಧ್ಯ ದೈವ. ಈ ನದಿಯ ಮೂಲ ಸೆಲೆಯಿರುವುದು ಹಸಿರು ಹೊದ್ದ ಬ್ರಹ್ಮಗಿರಿಯ ತಲಕಾವೇರಿಯಲ್ಲಿ. ಅರಬ್ಬಿ ಸಮುದ್ರದ ಅನತಿ ದೂರದಲ್ಲಿಯೇ ಹುಟ್ಟಿದರೂ, ಅದಕ್ಕೆ ಬೆನ್ನಿಕ್ಕಿ, ಕೋಟ್ಯಂತರ ಜನರ ದಾಹ ತಣಿಸಿ, ಲಕ್ಷಾಂತರ ಎಕರೆ ಭೂಮಿಗೆ ನೀರುಣಿಸಿ, ನೂರಾರು ಮೈಲು ದೂರ ಕ್ರಮಿಸಿ, ಬಂಗಾಳ ಕೊಲ್ಲಿಯ ಒಡಲಲ್ಲಿ ಲೀನವಾಗುತ್ತದೆ ಕಾವೇರಿ. ಈ ಜೀವ ನದಿಯ ನೀರುಣ್ಣಲು ನೆರೆಯ ರಾಜ್ಯಗಳೊಂದಿಗೆ ನಿರಂತರ ಸೆಣಸುತ್ತಿದ್ದೇವೆ.
ಆದರೆ ಕಾವೇರಿ ಬಗ್ಗೆ ನಾವೆಷ್ಟು ತಿಳಿದುಕೊಂಡಿದ್ದೇವೆ? ಅದರ ತಟದಲ್ಲಿರುವ ಸಂಸ್ಕೃತಿಯ ಬಗ್ಗೆ ಎಷ್ಟು ತಿಳಿದಿದ್ದೇವೆ? ಕಾವೇರಿ ಜನಿಸುವಲ್ಲಿಂದ ಪ್ರಾರಂಭಿಸಿ ದೂರದ ಬಂಗಾಳ ಕೊಲ್ಲಿಯವರೆಗೂ ಚಿತ್ರಗಳನ್ನು ತೆಗೆದು ಬರೆದಿಟ್ಟ ಕ್ಲೇಯ್ರ್ ಹಾಗೂ ಆರಿಯೋಲ್ ರೊಂದಿಗೆ ಒಂದು ಪುಟ್ಟ ಪ್ರಯಾಣ ಮಾಡೋಣ. ಬರ್ತೀರ?
ಚಿತ್ರಗಳು ಮತ್ತು ಮೂಲ ಬರಹ: Claire Arni ಮತ್ತು Oriole Henri
ಕನ್ನಡಕ್ಕೆ ತಂದವರು: ಹೇಮ ಕದ್ರಾಪುರ
ಆವ ಕುಲವಾದರೇನು
ರಾಗ ರೇಗುಪ್ತಿ/ಅಟ್ಟ ತಾಳ
ಆವ ಕುಲವಾದರೇನು ಆವನಾದರೇನು ಆತ್ಮ
ಭಾವವರಿತ ಮೇಲೆ || ಪಲ್ಲವಿ ||
ಹಸಿ ಕಬ್ಬು ಡೊಂಕಿರಲು ಅದರ
ರಸ ತಾನು ಡೊಂಕೇನೊ
ವಿಷಯಾಸೆಗಳ ಬಿಟ್ಟು
ಹಸನಾದ ಗುರುಭಕ್ತಿ ಮಾಡೋ || ೧ ||
ರಾಗ ರೇಗುಪ್ತಿ/ಅಟ್ಟ ತಾಳ
ನಾನಾ ವರ್ಣದ ಆಕಳು ಅದು
ನಾನಾ ವರ್ಣದ ಕ್ಷೀರವೇನೋ ಮುಂದೆ ಓದಿ »

