ಸಂಪದದಲ್ಲಿ ಹೊಸತು! | Sign up | Login | Font Help
Planet Kannada | ಪ್ಲಾನೆಟ್ ಕನ್ನಡ
  • Sampada Initiative
  • Kannada Learning Center
  • Sampada Community
  • ಸಂಪರ್ಕಿಸಿ
Home › ಪ್ಲಾನೆಟ್ ಕನ್ನಡ

ಕಾವ್ಯ-ಕೃಷಿ

Syndicate content
ನನ್ನ ಮನಸ್ಸಿನ ಭಾವನೆಗಳಿಗೆ ಹಿಡಿದ ಕನ್ನಡಿಯಂತೆ ಈ ನನ್ನ ಕವನಗಳು... ನನ್ನ ಮನಸ್ಸಿನಲ್ಲುಂಟಾದ ತುಮುಲಗಳ ಗುಚ್ಚ ಈ ನನ್ನ ಕವನಗಳು... ನನ್ನ ಮನಸ್ಸಿನಲ್ಲೆದ್ದ ತರಂಗಾಂತರಂಗಗಳು ಈ ನನ್ನ ಕವನಗಳು...
URL: http://susankritha.blogspot.com/
Updated: 12 min 12 sec ago

ಆ ದಿನಗಳು....

Thu, 2008-08-14 19:45
ಸಿಡಿಲೊಡೆದು ಪಳೆಯುಳಿದ
ಇಟ್ಟಿಗೆಗೂಡಲೊಂದು
ಚಾ ದುಖಾನು

ಹೋದ ತಿಂಗಳ
ಪ್ರಜಾಮತದ ಮುಖಪುಟದಿ
ಸುಮಲತಾಳ ಹುಸಿನಗು

ಪಟ್ಟಿಗಾಜಿನ ಲೋಟದ ತಳದಲಿ
ನೀರ್ಕಾಪಿ,
ದವಡೆಯಾಡಿಸಲು ಒಣಕಲು ಬನ್ ಒಂದು

ಮನಸಿನಾಳದ ಕೊರಗು,ಲೋಕಾರೂಢಿ ಚಿಂತೆ
ಎಲ್ಲವೂ ಬ್ರಿಸ್ಟಲ್ ಸಿಗರೇಟಿನ
ಹೊಗೆಯಾಗಿ ಗಾಳಿಯಲಿ ಲೀನ

ಮೂಲೆಮೂಲೆಯ ಜನ್ಮ ಜಾಲಾಡಿ
ಮುದಿರೆಲೆಯ ಗತಿಕಾಣಿಸಿದ
ಉದಯವಾಣಿ ಪತ್ರಿಕೆಯೊಂದು

ಬೆಳಗಿಂದ ಕೂತು ತಲೆಕೆರೆದು ಕುರಮಾಡಿ ಮುಗಿಸಿದ
ಕಾಪಿ-ಬನ್ನು-ಇಡ್ಲಿ-ಮಸಾಲ್ ವಡೆ-ಚಿತ್ರಾನ್ನ-ಸಿಗರೇಟಿನ
ಒಟ್ಟು ಮೊತ್ತ ಇಪ್ಪತ್ತು ರುಪಾಯಿ!!

ಏನಾದರೇನು?
ಗೋರ್ಬಚೇವನಿಗಾಗಲೀ
ಬುಶ್ಶಪ್ಪನಿಗಾಗಲಿ ಮೋಕ್ಷವಿಲ್ಲ,
ಕುಂತಿ ಮಕ್ಕಳಿಗೆ ರಾಜ್ಯವಿಲ್ಲ!
Categories: ಇಂಗ್ಲೀಷ್ ಪುಟಗಳು, ಕನ್ನಡ ಪುಟಗಳು

Planet Kannada brought to you by Sampada Community via Sampada Foundation.
Setup and designed by Hari Prasad Nadig.

separator