ತೊದಲು ಮಾತು (ಕೇಶವ ಕುಲಕರ್ಣಿ, ಲಂಡನ್)
ನೀಲು ೧೭

ನೀನು ಒಂಚೂರೂ ರೋಮ್ಯಾಂಟಿಕ್ ಇಲ್ಲ
ಎಂದು ಹಗಲೆಲ್ಲ ಹೇಳುವುದು ಕೇಳಿ ಬೇಸತ್ತು
ಒಂದು ಚಂದದ ಹೂಗುಚ್ಛ ತಂದು ಕೊಟ್ಟರೆ
ಯಾಕಿಷ್ಟು ಸುಮ್ಸುಮ್ನೆ ಖರ್ಚು
ಎಂದು ರೇಗಾಡಿದಳು
Categories: ಇಂಗ್ಲೀಷ್ ಪುಟಗಳು, ಕನ್ನಡ ಪುಟಗಳು
ನೀಲು ೧೬
ದಾರಿಯಲ್ಲಿ ಹೋಗುವಾಗ ಕಾಣಿಸುವ
ಹೃತಿಕ್‍ನಂಥಹ ಹುಡುಗರು
ಬದುಕನ್ನು ಸಹನೀಯ ಮಾಡಿದ್ದಾರೆ
ಎಂದರೆ
ನನ್ನ ಗಂಡನಿಗೆ ಕೋಪಬರುವುದಿಲ್ಲ
ಆತನೇನಾದರೂ ಹಾಗೆ ಹೇಳಿದ್ದರೆ
ಸುಮ್ಮನೆ ಬಿಡುತ್ತಿರಲಿಲ್ಲ
ಹೃತಿಕ್‍ನಂಥಹ ಹುಡುಗರು
ಬದುಕನ್ನು ಸಹನೀಯ ಮಾಡಿದ್ದಾರೆ
ಎಂದರೆ
ನನ್ನ ಗಂಡನಿಗೆ ಕೋಪಬರುವುದಿಲ್ಲ
ಆತನೇನಾದರೂ ಹಾಗೆ ಹೇಳಿದ್ದರೆ
ಸುಮ್ಮನೆ ಬಿಡುತ್ತಿರಲಿಲ್ಲ
Categories: ಇಂಗ್ಲೀಷ್ ಪುಟಗಳು, ಕನ್ನಡ ಪುಟಗಳು
