ಅಲ್ಲಿದೆ ನಮ್ಮ ಮನೆ...
World’s Largest Tamboori
Wow! Nataraj & Vinod (of Shiva Musicals, Malleshvara, Bengalooru) have made the worlds largest Tamboori.
This stands 11 feet tall, and weighs about 150 Kgs!
Photo source: An article on www.thatskannada.com
-neelanjana

ಶಾಂತಲೆಯದೊಂದು ನೆನಪು
ನನ್ನೂರ ಸುತ್ತ ಮುತ್ತ ದೇವಸ್ಥಾನಗಳಿಗೇನೂ ಕೊರತೆ ಇಲ್ಲ. ಹನ್ನೊಂದರಿಂದ ಹದಿನಾಕನೇ ಶತಮಾನದವರೆಗೆ ಹೊಯ್ಸಳರು ನಿರ್ಮಿಸಿರುವ ಅತಿ ಸುಂದರ ದೇವಾಲಯಗಳು ಇಲ್ಲಿವೆ. ಅದೇ ಕಾರಣಕ್ಕೆ ಎಲ್ಲೆಲ್ಲಿ ಹೋದರೂ, ಚಿಕ್ಕ ಪುಟ್ಟ ಹಳ್ಳಿಗಳಲ್ಲೂ ಶಿಲಾಶಾಸನಗಳೂ ಕಂಡುಬರುತ್ತವೆ.
ಸಾವಿರ ವರ್ಷಗಳಿಂದಲೂ ನಮ್ಮ ಊರವರು ಮರೆಯದ ಒಂದು ಹೆಸರೆಂದರೆ ಅದು ಶಾಂತಲೆಯದು. ಒಬ್ಬ ರಾಣಿಯಾಗಿ, ಒಬ್ಬ ಕಲೆಗಾರ್ತಿಯಾಗಿ ಅವಳು ಎಲ್ಲರ ಮನದಲ್ಲಿ ನಿಂತುಬಿಟ್ಟಿದ್ದಾಳೆ. ಹಳೇಬೀಡಿನ, ಬೇಲೂರಿನ ದೇವಾಲಯದಲ್ಲಿ ಹೋದವರು ಯಾರೂ ದೇವರೆದುರಿಗಿರುವ ನವರಂಗದ ನಡುವೆ ಇರುವ ಗುಂಡು ಜಗಲಿಯನ್ನು ತೋರಿಸಿ - ಶಾಂತಲೆ ನೃತ್ಯ ಮಾಡುತ್ತಿದ್ದಿದ್ದು ಇದೇ ಜಾಗದಲ್ಲಿ ಎಂದು ಹೇಳದೇ ಇರುವುದೇ ಇಲ್ಲ. ಹಾಗೇ ಬೇಲೂರಿನ ದೇವಾಲಯದ ನಾಟ್ಯಸರಸ್ವತಿ ಎಂಬ ಹೆಸರಿನ ಶಿಲಾಬಾಲಿಕೆಯನ್ನು ಕೆತ್ತಲು ಶಾಂತಲೆಯೇ ಸ್ಫೂರ್ತಿ ಎಂದು ನುಡಿಯುತ್ತಾರೆ.
ಗೆಳೆಯರೊಬ್ಬರು ಕನ್ನಡದಲ್ಲಿರುವ ಶಾಸನ ಪದ್ಯಗಳ ಪುಸ್ತಕವೊಂದನ್ನು ಕೊಟ್ಟರು. ಅಲ್ಲಿ ಶಾಂತಲೆಯ ಬಗ್ಗೆ ಪದ್ಯವೊಂದು ಕಂಡಿತು. ಆ ಶಾಸನ ಸಿಕ್ಕಿದ್ದೂ ನಮ್ಮೂರಿನಲ್ಲೇ ಅನ್ನುವುದಿನ್ನೊಂದು ಹೆಚ್ಚಾಯ!
ಆ ಪದ್ಯ ಹೀಗಿದೆ:
ಸತತಂ ನೋೞ್ಪೊಡೆ ಲಕ್ಷೀ ದೇವತೆ ರಣವ್ಯಾಪಾರದೊಳ್ ಖೞ್ಗ ದೇ
ವತೆ ಬಿಣ್ಪಿಂದಮೆ ಭೂಮಿದೇವತೆ ಜನಕ್ಕೆಲ್ಲಂದದಿಂ ಪುಣ್ಯ ದೇ
ವತೆ ವಾಗ್ದೇವತೆ ವಿದ್ಯೆಯೊಳ್ ಸಕಲ ಕಾರ್ಯೋದ್ಯೋಗದೊಳ್ ಮಂತ್ರ ದೇ
ವತೆ ನಾಥಂಗೆ ಶಾಂತಿದೇವಿಯನದಿನ್ನೇ ವಣ್ಣಿಪಂ ಬಣ್ಣಿಪಂ!
“ನೋಡಲು ಲಕ್ಷ್ಮಿಯ ಸೊಬಗಿನ, ಕಾಳಗದಲ್ಲಿ ಹೋದರೆ ಸಾಕ್ಷಾತ್ ಖಡ್ಗವನ್ನು ಹಿಡಿದ ದೇವತೆಯಂತೆ ಕಾಣುವ, ಹಿರಿಮೆಯಲ್ಲಿ ಸಾಕ್ಷಾತ್ ಭೂಮಿ ತೂಕದ, ಅಂದದಲ್ಲಿ ಪುಣ್ಯದೇವತೆಯ, ತಿಳಿವಿನಲ್ಲಿ ಸರಸ್ವತಿಯ ಹೋಲುವ, ಎಲ್ಲ ಕಾರ್ಯಗಳಲ್ಲೂ ಗಂಡನಿಗೆ ಮಂತ್ರಿಯಂತೆ ಸಲಹೆಕೊಡುವ ಆ ಶಾಂತಿದೇವಿಯನ್ನು ಹೇಗೆ ತಾನೇ ಹೊಗಳಲು ಸಾಧ್ಯ?”
ಇಂತಹ ಆಳುವವರಿದ್ದ ಊರು ನನ್ನದು ಅನ್ನುವುದೇ ಒಂದು ಹೆಮ್ಮೆಯ ಮಾತು ನನಗೆ. ಅದಕ್ಕೇ ಬ್ಲಾಗ್ ನ ತಲೆ ಬರಹದ ಚಿತ್ರದಲ್ಲಿ ಇವತ್ತು ಈ ಪದ್ಯವೇ ಕಾಣುತ್ತಿದೆ.
-ನೀಲಾಂಜನ

Days of Navaratri
If you can read Kannada, then click the following links:
And here is what I wrote during Navaratri festival in 2007:
-neelanjana

A Very Special Concert
On 13th September, I attended a concert of bay area vocalist Sri Ragavan Manian. This was a very special concert form me as it becomes clear as I go telling you about the concert.
I have written about Ragavan Manian before , more than once. If you already know that I am a die-hard fan of Dr Balamuralikrishna, you might think that it is no wonder I like Ragavan’s music. But as good desciples of great gurus go, Ragavan does not stop with just following his Guru’s footsteps. Ragavan does sing Dr Balamurali’s compositions and also sings many other compositions that Dr BMK has made his own by his special touch, but also comes up with very great themes in his concerts. Ragavan is himself a composer, and I have seen him give astonishingly refreshing ideas every time I hear him. I’d say that’s his greatest asset.
When I came to know that our Kannada koota (Kannada Koota of Northern California) was having Ragavan’s concert as part of the 2008 Kannadotsava event, I was pleasantly surprised. For an audience where you have a mix of folks with varied interests, the organizers have to select programs based on what they think the crowd will like, and many times classical music takes a backseat. Dance is a different issue - it is a visual art, and people can be engaged in a classical dance program easily compared to someone singing an AlApane of punnAgavarALi or Ahiri, I would say.
But no need to worry I should say, as the concert proved itself. Ragavan made it a concert with all Kannada compositions, which made it a little easier for those who are not very much into classical music to appreciate it. And for a change, the concert had a Veena ( by Raja Sivamani) accompanying the vocalist in addition to violin (Keshav) and mridanga ( Ramesh Srinivasan).
The following is not a review, but just a listing with some music clips. I am thankful for my friends in KKNC who provided the video clips.
Ragavan started the concert with a shatpadi ( a six-liner) of Kanaka dAsa (dIna nAnu samasta lOkake dAni nInu) followed by nammamma shArade, a very popular composition of Kanakadasa set to hamsadhwani rAga
Next was a brisk and short kharaharapriya followed by dharmave jayavemba divya mantra , a composition of Purandara dAsa.
The first rAga Ragavan took for elaboration was mAyAmALavagouLa.
When he announced the composition he was going to sing, it was a surprise to some of the audience, but not to me :). It was Tyagaraja’s classic kriti in mAyAmALavagouLa - mEru samAna dhIra in Kannada - translated by yours truly :-).
I was really happy to hear the lines I had penned (of course, translated from Tyagaraja) which came alive.
If you are interested in reading the sAhitya for this kannada version of this kriti, read it here in an earlier post I wrote around Tyagaraja Aradhane this year.
After this came a wonderful AlApane of kalyANi, followed by Purandara dAsa’s kELanO hari tALanO. This was the main item in the concert. I particularly liked how he included the ugAbhOga “malagi pADidare kuLitu kELuvanu” in one of the charaNas.
Next, Ragavan sang a rAgamAlika composition of PadmacharaN, manavE mantrAlaya.
Sandhyaa Raaga, a Kannada movie of the 1960’s had a number of good classical songs. This was a special movie for Kannada cinema, as both Bheemasen Joshi and BMK have sung as playback singers in this movie.
Ragavan sang a very popular song from this movie (sung by Dr BMK in the movie) nambide ninna nAda dEvateye in pUrvikalyANi next.
Then came two vacanas: kAyada kattaleya kaLeyayya, a vachana of Akkamahadevi set in rAga sindhu bhairavi and Chakorange chandramana beLakina chinte, a vachana of Basavanna, set in rAga Bhatiyar
Ragavan concluded the concert with one of his own compositions, a tillAna in Bhatiyar.
This is a concert I would definitely remember for a long time
-neelanjana

ಪುತಿನ ಅವರ “ಶ್ರೀರಾಮ ಪಟ್ಟಾಭಿಷೇಕ”
ನಾನು ಈ ಮೊದಲು ಪುತಿನ ಅವರನ್ನು ಹೆಚ್ಚೇನೂ ಓದಿಕೊಂಡಿರಲಿಲ್ಲ. ಏನೋ ಅಲ್ಲಲ್ಲಿ ಕೇಳಿದ ಹಾಡುಗಳು -ಹರಿಗೆ ಎಂದು ಗುಡಿಯನೊಂದ ಕಟ್ಟುತಿರುವೆನು, ಕೃಷ್ಣನ ಕೊಳಲಿನ ಕರೆ, ಮಳೆಯು ನಾಡ ತೊಯ್ಯುತಿರೆ, ನಿಲ್ಲಿಸದಿರು ವನಮಾಲಿ ಕೊಳಲಗಾನವಾ ಮೊದಲಾದ ಬಿಡಿಗವನಗಳಷ್ಟನ್ನೇ ಓದಿದ್ದೆ, ಹಾಡಿದ್ದೆ. ಮತ್ತೆ ಕೆಲವು ವರ್ಷಗಳ ಹಿಂದೆ ಅವರ ಗೋಕುಲ ನಿರ್ಗಮನ ನೃತ್ಯನಾಟಕದ ಒಂದು ರಂಗಪ್ರಯೋಗವನ್ನು ನೋಡಿದಾಗ ಅದರಲ್ಲಿನ ಸಂಗೀತ ಸಾಹಿತ್ಯಗಳ ಸಮ್ಮೇಳಕ್ಕೆ ಬೆರಗಾಗಿದ್ದೆ. ಮತ್ತೆ ಮೊನ್ನೆ ಅವರದೇ ಶ್ರೀರಾಮಪಟ್ಟಾಭಿಷೇಕದ ಪ್ರಯೋಗ ನೋಡಿದಮೇಲೆ, ಹಾಡುಗಳನ್ನು ಒಮ್ಮೆ ಶುರುವಿಂದ ಕೊನೆಯವರೆಗೆ ಓದಬೇಕೆನಿಸಿ ಕುಳಿತು ಓದಿದ್ದೂ ಆಯಿತು.
ಪುತಿನ ಅವರು ರಾಮಾಯಣದ ಕಥೆಯನ್ನಾಧರಿಸಿ ಐದಾರು ನೃತ್ಯನಾಟಕಗಳನ್ನು ಬರೆದಿದ್ದಾರೆ. ಅಹಲ್ಯೆ, ಶಬರಿ, ಹರಿಣಾಭಿಸರಣ ಮೊದಲಾದ ನಾಟಕಗಳಲ್ಲಿ ಮುಂದುವರೆಯುವ ರಾಮಾಯಣದ ಕಥೆ ಕೊನೆಗೊಳ್ಳುವುದು ಶ್ರೀರಾಮ ಪಟ್ಟಾಭಿಷೇಕದಲ್ಲಿ. ಕಥೆ ಎಲ್ಲರಿಗೂ ಗೊತ್ತಿರುವುದೇ ಆದರೂ ಕವಿ, ಅದನ್ನು ಹೇಳುವ ರೀತಿ ಹೆಚ್ಚಾಯದ್ದು. ಒಂದುಕಡೆಗೆ ಸಂಸ್ಕೃತ ಪದಗಳೇ ತುಂಬಿದ ವೃತ್ತಗಳಿಂದ ಹಿಡಿದು, ಜಾನಪದ ಧಾಟಿಯಲ್ಲಿ ಬರುವ ಹಾಡುಗಳ ತನಕ ಅದರ ವಿಸ್ತಾರ. ಜೊತೆಗೆ ಕವಿಯೇ ಹಾಡುಗಳಿಗೆ ಸಂಗೀತವನ್ನೂ ಒದಗಿಸಿ ವಾಗ್ಗೇಯಕಾರನಾಗಿರುವುದರಿಂದ ಒಂದೊಂದು ಹಾಡೂ ಕೂಡ ಮತ್ತೆ ಮತ್ತೆ ಕೇಳುವಂತಿರುವುದರಲ್ಲಿ ಆಶ್ಚರ್ಯವೇನಿಲ್ಲ. ಪುತಿನ ಅವರೇ ಮುನ್ನುಡಿಯಲ್ಲಿ ಹೇಳಿರುವಂತೆ, ಅವರು ಸಂಗೀತವನ್ನು ಸಾಂಪ್ರದಾಯಿಕವಾಗಿ ಕಲಿಯದೇ ಹೋಗಿದ್ದರಿಂದ ಒಳ್ಳೆಯದೇ ಆಗಿದೆ. ಬಹಳ ಕಟ್ಟುಪಾಡುಗಳಿಗೆ ಒಳಗಾಗದೆ, ಎಷ್ಟೋ ಪ್ರಸಿದ್ಧ ರಾಗಗಳಲ್ಲಿ, ಮತ್ತೆ ಕೆಲವು ಇಂತಹದ್ದೇ ಎಂದು ಹೆಸರಿಸಲು ಆಗದೇ ಇರುವಂತಹ ಹೊಸ ಸೊಗಡಿರುವ ರಾಗಗಳಲ್ಲೂ ಅವರ ಲಹರಿ ಹರಿದಿದೆ.
ಶ್ರೀರಾಮ ಪಟ್ಟಾಭಿಷೇಕದ ಕಥೆ ಆರಂಭವಾಗುವುದು ರಾಮ ರಾವಣನನ್ನು ಕೊಂದ ನಂತರ. ಆದಿಕವಿ ವಾಲ್ಮೀಕಿಯನ್ನು “ವಂದೇ ವಾಲ್ಮೀಕಿ ಕೋಕಿಲಂ” ಎಂದು ನಮಿಸುತ್ತಾ ಬರುವ ಕಥೆ ಹೇಳುವ ಕಥಕ ವೃಂದವವರು , ರಾವಣನಮೇಲೆ ವಿಜಯ ಸಾಧಿಸಿದ ರಾಮನಿಗೆ “ಜಯಜಯ ವಿಜಯೀ ರಘುರಾಮ, ಶ್ರುತಿಮನೋಹರ ಪ್ರಿಯನಾಮ, ವಿಜಿತದುರಾಸದ ಕಾಮ, ಸುಜ್ಞಪುರಸ್ಕೃತಗುಣಧಾಮ, ಸದ್ಭಾವಸಾಮ್ರಾಜ್ಯ ಸಾರ್ವಭೌಮ” ಎಂದೆಲ್ಲಾ ಹಾಡಿ ಹೊಗಳುತ್ತಾರೆ. ಸಾಂಪ್ರದಾಯಿಕವಾಗಿ ಮಂಗಳಕಾರಿ ಎನಿಸಿದ ಸೌರಾಷ್ಟ್ರ ರಾಗದಲ್ಲಿರುವ ಈ ಹಾಡಿನಲ್ಲಿ, ರಾಮನು ರಂಗದ ಮೇಲೆ ಮಂಗಳಕಾರಿಯಾಗಿ ಬರಲಿ ಎನ್ನುವ ಆಶಯ ಕಾಣುತ್ತೆ.
ಆರಂಭವೇನೋ ಮಂಗಳವೇ. ರಾಮ ರಂಗಕ್ಕೆ ಬರುವುದನ್ನೇ ಕಾಯುತ್ತಿರುವ ಕಥಕ ವೃಂದವು ಆ ಮಹನೀಯ ದಾಶರಥಿಯನ್ನು ಕೊಂಡಾಡುವುದನ್ನು ಮುಂದುವರೆಸುತ್ತಾರೆ. ಅವನನ್ನು ಹಾಡಿ ಹೊಗಳುವ ಐಸಿರಿಗೆ ಹೆಮ್ಮೆ ಪಡುತ್ತಾರೆ. ಹಾಗೆಯೇ, ಅವನ ಚರ್ಯೆಯನ್ನು ಮಾತ್ರ ಅರಿಯುವುದು ಅಷ್ಟು ಸುಲಭವಲ್ಲ ಎಂದು ಮುಂದಾಗಬಹುದಾದ ಅನಾಹುತಕ್ಕೆ ಮುನ್ನುಡಿ ಬರೆಯುತ್ತಾರೆ. ಏಕೆಂದರೆ ಆ ರಾಮನ ಗುಣಗಳೇ ಅಂತಹವು. ಒಂದುಕಡೆ ತಂದೆಯ ಮಾತಿಗೆಂದು ರಾಜ್ಯವನ್ನೇ ತೊರೆದುಬಿಟ್ಟವನು, ಇನ್ನೊಂದು ಕಡೆ ಮಡದಿಯ ಮಾತಿಗೆಂದು ಮಾಯೆಯೆಂದು ತಿಳಿದಿದ್ದೂ, ಮಾರೀಚನ ಬೆನ್ನಟ್ಟುತ್ತಾನೆ. ಒಂದು ಕಡೆ ತಮ್ಮಂದಿರನ್ನು ಪಾಲಿಸುವವನೆಂದು ಹೆಸರುಗಳಿಸಿದ್ದರೆ, ಇನ್ನೊಂದು ಕಡೆ ಅಣ್ಣನನ್ನೇ ಕೊಲ್ಲಹೊರಟ ಸುಗ್ರೀವನ ಪರನಿಲ್ಲುತ್ತಾನೆ. ಕೋತಿಗಳ ಕೈಯಲ್ಲಿ ಸಮುದ್ರಕ್ಕೆ ಸೇತುವೆ ಕಟ್ಟಿಸಿ ರಾಕ್ಷಸರ ಪುರಿಯನ್ನೇ ಮುರಿಯುತ್ತಾನೆ. ಅದಕ್ಕೆಂದೇ, ಕವಿ ಆ ದಾಶರಥೀ ಮಹನೀಯನ “ಲೋಭ ತ್ಯಾಗಗಳ ಯೋಗವರಿಯೆವಯ್ಯ, ಮಮತೆ ವಿಷಮತೆಯ ಸಮಯವರಿವೆವಯ್ಯ, ಚಿತ್ತಚರಿತೆಗತಿವಿಸ್ಮಿತರಾವಯ್ಯ” ಎನ್ನುತ್ತ ಅವನನ್ನು ಸ್ತುತಿಸುವ ತಮ್ಮ ಭಾಗ್ಯಕ್ಕೆ ಎಣೆಯಿಲ್ಲವೆಂದು ಕಥಕ ವೃಂದದಿಂದ ಹಾಡಿಸುವುದು ಯುಕ್ತವೇ ಆಗಿದೆ. ಹೀಗೆ ಹಾಡುವಾಗಲೇ ಆಂಜನೇಯ ಲಕ್ಷ್ಮಣರ ಸಮೇತ ರಾಮನ ಆಗಮನ. ನೀರೆಯರೆಲ್ಲ ಅವರಿಗೆ ಆರತಿ ಬೆಳಗಿ ಸ್ವಾಗತಿಸುತ್ತಿರುವಷ್ಟರಲ್ಲಿ ಇನ್ನೊಂದೆಡೆಯಿಂದ ಮೇನೆಯಲ್ಲಿ ಕುಳಿತ ಸೀತೆ ರಾಮನ ಬಳಿಸಾರಿ ಬರುತ್ತಾಳೆ. ಸೀತೆ ರಂಗದೊಳಗೆ ಬರುವ ಪರಿಯನ್ನು ಕವಿಯ ಮಾತಲ್ಲೇ ಕೇಳಬೇಕು:
ನೋಡದೋ ಬರುತಿಹಳು
ಭೂದೇವಿಯ ಮಗಳು
ಎಂದೂ ಕಾಣದಿಹ ಚೆಂದದವಳ ನೋಡೇ
ಮಂದಿಯಂದಣವ ಮುತ್ತುತಿಹುದಹಹ
ಅಂದು ಖರಹರನ ಕಂಡ ಸೊಗಮರುಕೊಳೆ
ಮಂದಗಮನದೊಳು ಗಂಡನ ಸನಿಯಕೆ
ಊರವರೆಲ್ಲ, ಇಂತಹ ಮಂದಗಮನೆಯ ಮೊಗವನ್ನು ನೋಡಲು ಅಂದಣವನ್ನು ಮುತ್ತುವುದರ
ಲ್ಲಿ ಅಚ್ಚರಿಯೇನಿದೆ? ಆ ಸೀತೆಯಾದರೂ ಎಂತಹವಳು? ಅವಳು “ವಸುಮತಿ ದುಹಿತೆ ಜನಕರಾಜರ್ಷಿಸುತೆ ನಿರುಪಮಚರಿತೆ ಲೋಕಮಾತೆ” ಅಲ್ಲವೇ? ಮಹಾಪುರುಷನ ಪ್ರೇಮಕ್ಕೆ ಒಬ್ಬಳೇ ಹಕ್ಕುದಾರಿಣಿಯಾದ ಈ ಸೀತೆ ದುಷ್ಟರನ್ನು ಅಳಿಸಿ ದಕ್ಷ ಬ್ರಹ್ಮನ ಮಗಳಾದ ದಾಕ್ಷಾಯಣಿಯ ಸ್ವರೂಪಿಯೇ ಸರಿ ಎಂದು ಅವಳನ್ನು ಎಲ್ಲರೂ ಬರಮಾಡಿಕೊಳ್ಳುತ್ತಾರೆ.
ಆದರೆ, ಸೀತೆ ಬಳಿಸಾರುತಿದ್ದರೂ ರಾಮನ ಮುಖ ಮಾತ್ರ ಎತ್ತಲೋ ಇರುವುದು ಎಲ್ಲರಿಗೂ ಏನೋ ಮನಕ್ಲೇಶವನ್ನು ತರುತ್ತಿದೆ. ಆ ರಾಮನ ಮುಖ ವ್ಯಾಕುಲತೆಯೆಂದ ನೆಲದೆಡೆಗೆ ಇರುವುದು ಎಲ್ಲರ ಗಮನಕ್ಕೂ ಬಂದು ಮೂಕರಾಗಿ, ಭೀತರಾಗಿ, ಇನ್ನೇನು ನಡೆಯುವುದೋ ಎಂದು ಕಾಯುತ್ತಿರುವಂತೆ ಸೀತೆ ರಾಮನ ಬಳಿ ಬಂದು ಅವನನ್ನು ಮೆಲುದನಿಯಲ್ಲಿ “ಆರ್ಯಪುತ್ರ, ಆರ್ಯಪುತ್ರ” ಎಂದು ಕರೆಯುತ್ತಾಳೆ
ಹೌದು. ಈ ರಾಮನಿಗಾದರೂ ಏನಾಯ್ತು? ರಕ್ಕಸರನ್ನು ಮುರಿದು ಮಡದಿಯ ಬಿಡಿಸಿಕೊಂಡವನಿಗೇನಾಯಿತು? ಅವನ ಮಾತನ್ನು ಕೇಳಿ ಸೀತೆ ಏಕೆ, ಅಲ್ಲಿದ್ದ ಊರವರೆಲ್ಲ ಮೂರ್ಛೆ ಹೋಗುವುದೇ ಬಾಕಿ. ಅವನು ಹೇಳಿದ್ದೇನು? ಕಣ್ಣ ಬೇನೆಯವನಿಗೆ ಬೆಳಕು ಚೆಲ್ಲುವ ದೀವಿಗೆ ಚಿನ್ನದ್ದಾದರೂ ಹೇಗೆ ನೋಡಲು ನೋವ ತರುವುದೋ, ಹಾಗೆ ಸೀತೆಯ ಮುಖವನ್ನು ಕಂಡರೆ ಅವನಿಗೆ ಆಗುವುದು - ಆ ರಕ್ಕಸನ ಮನೆಯಲ್ಲಿ ಹೇಗೆ ತಾನೇ ಅಂದಗೆಡದೇ ಇದ್ದಳೋ ಎಂಬ ಉಮ್ಮಳ. ಕುಲದ ಗೌರವವನ್ನುಳಿಸಲು ರಾವಣನನ್ನು ಕೊಂದಾಯ್ತು. ಸೀತೆಯನ್ನ್ನು ಸೆರೆಯಿಂದ ಬಿಡಿಸಾಯ್ತು. ಆದರೆ, ಮೋಹದಿಂದ ಸೀತೆಯನ್ನು ಸ್ವೀಕರಿಸುವುದು ಮಾತ್ರ ಸಾಧ್ಯವಿಲ್ಲ. ಎಲ್ಲಾದರೂ ಹೋಗಿ ಚೆಂದದಿಂದಿರು ಎಂದುಬಿಡುವ ರಾಮನ ” ಪೋ ಪೋ ಪೋ ಚಲುವೆ - ಪೋ ಮನ ಬಂದೆಡೆ ನೆಂಟನೋ ಕೆಳೆಯನೋ ಉಂಟಾದವರೆಡೆ” ಎನ್ನುವ ಮಾತನ್ನು ಕೇಳಿದ ಸೀತೆಗೆ ದಿಗ್ಭ್ರಾಂತಿ. ಈ ಮಾತನ್ನು ಕೇಳಲು ಬದುಕಿದೆನೇ ನಾನು? ಎಂಬ ಪ್ರಶ್ನೆ ಅವಳಿಗೆ ಕಾಡುತ್ತದೆ.
“ಬರುವೆ ಬರುವೆ ದುರುಳರ ತರಿವೆ ಸೆರೆಯ ಬಿಡಿಸಿ ಒಯ್ವೆಯೆಂದು” ಕಾಯುತ್ತಿದ್ದ ಪತಿಯಲ್ಲೇ ಪ್ರಾಣವಿಟ್ಟ ತನ್ನಂತಹ ಹೆಣ್ಣಿಗಾಡುವ ಮಾತೇ ಇದು ಎಂಬ ಸೀತೆಯ ಪ್ರಶ್ನೆಗೆ ರಾಮನ ನಿಟ್ಟುಸಿರೇ ಉತ್ತರ. “ಕೆಟ್ಟ ಸಮಯದಿ ದುಷ್ಟರಕ್ಕಸ ರಟ್ಟೆಯಸೆಳೆದೊಯ್ಯುವಂದು ಅಟ್ಟೆಯಿದನು ಕಟ್ಟಿಗೆಯೆನಿಸಿ ನೆಟ್ಟೆ ನಿನ್ನೊಳು ಮನವ ಸ್ವಾಮಿ” ಎನ್ನುವ ಸೀತೆಯ ಮಾತಿಗೆ ಕರಗದವರು ಯಾರು ತಾನೇ ಇದ್ದಾರು ಆ ರಾಮನ ಹೊರತು?
ಕೊನೆಗೆ ಅಲ್ಲಿ ನೆರೆದಿದ್ದ ಜನಕ್ಕೇ ಸೀತೆ ರಾಮನಿಗೆ ಬುದ್ಧಿ ಹೇಳಬಾರದೇ?ಈಂದು ಕೇಳುತ್ತಾಳೆ:
ಬಲ್ಲಹನೊಲ್ಲದನಾಥೆ ಹೆಣ್ಣಿಗೆ
ಎಲ್ಲಿಹುದಾಸರೆ? ಆವನ ಮರೆ?
ಬಲ್ಲವರಿಲ್ಲವೆ ಈ ನೆರವಿಯೊ-
ಳೊಳ್ಳೆ ಮಾತನಾಡುವರೀತಗೆ?
ಆದರೇನು? ರಾಮನಿಗಿಂತೂ ಕರುಣ ಬಂದಂತೆ ತೋರದು. ಸೀತೆ ಎದ್ದು ನಿಲ್ಲುತ್ತಾ ಮನವನ್ನು ಗಟ್ಟಿಮಾಡಿಕೊಳ್ಳುತ್ತಾಳೆ. ಆ ಕೂಡಲೇ, ಚಿತೆಯೊಂದನ್ನು ಸಿದ್ಧಮಾಡುವಂತೆ ಲಕ್ಷ್ಮಣನಿಗೆ ಆಣತಿಕೊಡುತ್ತಾಳೆ.
“ಹೊತ್ತಿಸು ಚಿತೆಯನು ಲಕ್ಷ್ಮಣ, ನಿನ್ನತ್ತಿಗೆ ಬೀಳಲಿ ಈ ಕ್ಷಣ! ಮೃತ್ಯುವಿಗಲ್ಲದೆ ಮತ್ತಾರಿಗಹುದಯ್ಯ ಕುತ್ತನಿದ ಕಳೆದೆನ್ನುತ್ತರಿಸುವಳವು” ಎನ್ನುವ ಸೀತೆಯ ಮಾತಿಗೆ ಮರುನುಡಿಯಲಾರದ ಲಕ್ಷ್ಮಣ ಚಿತೆಯೊಂದನ್ನು ಅಲ್ಲೇ ನಿರ್ಮಿಸುತ್ತಾನೆ.
ನೆರೆದವರೆಲ್ಲ ದಿಗ್ಭ್ರಾಂತರಾಗಿ ನೋಡುತ್ತಿರುವಂತೆ ಸೀತೆ ತಾನು ಪಾಪಿಯಲ್ಲದಿದ್ದರೆ ಈ ಬೆಂಕಿಯು ತನ್ನನ್ನು ಕಾಪಾಡಲೆಂದು ಕೋರುತ್ತಾ ಲಕ್ಷ್ಮಣನಿಗೆ “ಹೊಗುವೆನುರಿಯನು ಮೈದುನ, ನನ್ನ ಬಗೆಯ ನನ್ನಿಯ ತೋರಲೀಕ್ಷಣ” ಎನ್ನುತ್ತ ಚಿತೆಯೊಳಗೆ ಜಿಗಿದೇ ಬಿಡುತ್ತಾಳೆ.
ಕೆಟ್ಟಮೇಲೆ ಬುದ್ಧಿ ಬಂತು ಎಂಬ ಗಾದೆ ಕೇಳಿದ್ದೇವಲ್ಲ. ಹಾಗೇ ರಾಮ ಸೀತೆ ಅಗ್ನಿಕುಂಡಕ್ಕೆ ಬಿದ್ದಮೇಲೆ, ತಾನು ಮೋಸಹೋದೆನಲ್ಲಾ? ಇನ್ನೇಕೆ ತಾನೇ ತಾನು ರಾಜ್ಯಕ್ಕೆ ಮರಳಲಿ ಎಂದು ದುಃಖಿಸುತ್ತಾನೆ.
ಈ ಎಲ್ಲ ಹಾಡುಗಳಲ್ಲಿಯೂ ಪುತಿನ ಅವರ ವಾಗ್ಗೇಯಕಾರತ್ವ ಎದ್ದು ಕಾಣುತ್ತದೆ. ಒಂದೊಂದು ಭಾವನೆಗೂ ತಕ್ಕ ರಾಗಗಳನ್ನು ಬಳಸಿದ್ದಾರೆ. ಚಿತೆಗೆ ಬೀಳುವ ನಿರ್ಧಾರಕ್ಕೆ ತಕ್ಕುದಾದ ಹಂಸಧ್ವನಿ, ಮತ್ತೆ ಅದರ ನಂತರವೇ ಬರುವ ರಾಮನ ಶೋಕವನ್ನು ವ್ಯಕ್ತಪಡಿಸಲು ಬರುವ ಶುಭಪಂತುವರಾಳಿ ಹೀಗೆ ಪ್ರತಿಯೊಂದು ಹಾಡೂ ಅದಕ್ಕೆ ತಕ್ಕ ಮಟ್ಟಿನಲ್ಲೇ ಇದೆ.
ಸೀತೆ ಅಕಳಂಕೆ. ಅವಳನ್ನು ಬೆಂಕಿಯೂ ಕೂಡ ಸುಡಲಾರದೇ ಹೋಯಿತು. ಬದಲಿಗಾದದ್ದೇನು? ಎಲ್ಲರ ಅಚ್ಚರಿಗೆ ಸಾಕ್ಷಾತ್ ಅಗ್ನಿಯೇ ಕುಂಡದಿಂದೆದ್ದು ಸೀತೆಯನ್ನೆತ್ತಿ ತರುತ್ತಾ ರಾಮನಿಗೆ , ಈಗಾಗಲೇ ಸಂಕಷ್ಟಗಳಲ್ಲೇ ಬೆಂದ ಈ ಸೀತೆಯನ್ನು ಮತ್ತು ಸುಡಲು ಸಾಧ್ಯವೇ ಎಂದು ಕೇಳುತ್ತಾ, ಕುಂದಿಲ್ಲದ ಈಕೆಯನ್ನು ಸ್ವೀಕರಿಸಿ ಸಂತೋಷದಿಂದಿರು ಎಂದು ಹರಸಿ ಮಾಯವಾಗುತ್ತಾನೆ. ನಂತರ ರಾಮ ಸೀತೆಗೆ, ತಾನು ಅವಳು ಅಕಳಂ
ಕಿತ ಎಂದು ತಿಳಿದಿದ್ದರೂ ಕೂಡ, ಜನನಾಯಕನೆಂಬ ಹೊಣೆ ಹೊತ್ತಿರುವಾಗ, ಅಪವಾದ ಬರಬಹುದೆಂಬ ಭೀತಿಯಿಂದ ಹೀಗೆ ಸಲ್ಲದ ಕಾರ್ಯ ಮಾಡಬೇಕಾಯಿತೆಂದು ಹೇಳಿ ತನ್ನ ತಪ್ಪನ್ನು ಮನ್ನಿಸಿ ಮತ್ತೆ ತನ್ನನ್ನು ವರಿಸಬೇಕೆಂದು ಸೀತೆಯನ್ನು ಬೇಡಿಕೊಳ್ಳುತ್ತಾನೆ.
ಸೀತೆಯೋ, ಭೂದೇವಿಯ ಮಗಳಲ್ಲವೇ? ಅಷ್ಟೇ ಸಹನೆ ಅವಳಿಗೆ. ಅಪವಾದದ ಶಂಕೆಯನ್ನೂ ಹೀಗೆ ಬೆಂಕಿಯೇ ದೂರ ಮಾಡಿದಮೇಲೆ ಮನ್ನಿಸಲು ಏನಿದೆ? ಅಷ್ಟಕ್ಕೂ ಮಾಯಾಮೃಗದ ಹಿಂದೆ ರಾಮನನ್ನು ಕಳಿಸಿ ಎಲ್ಲ ಅನರ್ಥಕ್ಕೂ ತಾನೇ ದಾರಿಯಾದವಳಲ್ಲವೇ? - “ಚೆನ್ನ ಏನಿದೆ ಮನ್ನಿಸೆ, ನಿನ್ನವಳಲ್ಲವೇ?” ಎಂದು ಮರುನುಡಿಯುತ್ತಾಳೆ. ನಂತರ ಇಬ್ಬರೂ ಒಬ್ಬರಿಗೊಬ್ಬರು ಮರಳಿ ದೊರೆತ ಸುಖವನ್ನು ನೆನೆಯುತ್ತಾ, “ದೈವ ಮರಳಿ ಕರುಣಿಸಿರುವಾಗ ಇದೇ ಶುಭಗಳಿಗೆ, ಇಂದು ಕೆಟ್ಟ ಕನಸಳಿದು ಪ್ರಭಾತವಾಯ್ತು” ಎಂದೆಣೆಸಿ ಆನಂದದಿಂದಿರುವಾಗ, ವಿಭೀಷಣ “ಮನಸಿನ ವೇಗದ” ಪುಷ್ಪಕ ವಿಮಾನವನ್ನು ತಂದು ರಾಮನಿಗುಡುಗೊರೆಯಾಗಿ ಕೊಡಲು ರಾಮ ಸೀತಾ ಲಕ್ಷ್ಮಣರ ಆ ವಿಮಾನವನ್ನೇರಿ ಅಯೋಧ್ಯೆಯ ಕಡೆಗೆ ತೆರಳುತ್ತಾರೆ.
ದಾರಿಯಲ್ಲಿ ಹಾರಿಹೋಗುತ್ತಿರುವಾಗ ರಾಮ ಅಲ್ಲೆಲ್ಲ ಕೆಳಗೆ ಕಾಣುತ್ತಿರುವೆಡೆಗಳನ್ನು “ಇದು ಹನುಮ-ಸುಗ್ರೀವರು ನನಗೆ ಗೆಳೆಯರಾದ ಸ್ಥಳ, ಇಲ್ಲಿ ತಾನೇ ಅತ್ರಿ ಮುನಿಯ ಆಶ್ರಮ, ನೀನು ಅನುಸೂಯೆಯ ಕೈಯಲ್ಲಿಆಲಂಕಾರ ಮಾಡಿಸಿಕೊಂಡ ಸ್ಥಳ” ಎಂದೆಲ್ಲ ತೋರುತ್ತಾ ಇನ್ನೇನು ದೂರ ದಿಗಂತದಲ್ಲಿ ಅಯೋಧ್ಯೆಯ ಹೊನ್ನಕಳಸಗಳು ಕಾಣುತ್ತಿದ್ದಂತೆ, ಗುಹನನ್ನು ಕಾಣದೇ ಹೋದರೆ ಸರಿಯಲ್ಲ, ವಿಮಾನ ಇಲ್ಲೇ ಗಂಗೆಯ ತೀರದಲ್ಲಿ ನಿಲ್ಲಲಿ. ಮತ್ತೆ ತಮ್ಮ ಬರವನ್ನು ಭರತನಿಗೆ ತಿಳಿಸಲೆಂದು ಹನುಮನು ತೆರಳಲಿ ಎಂದಾಣತಿಯಿಡುತ್ತಾನೆ. ಅದ್ಭುತ, ಅಚ್ಚರಿಗಳನ್ನೆತ್ತಿತೋರುವ ಈ “ಏರೈನೀರೆ ಕುಬೇರನ ತೇರನು” ಎನ್ನುವ ಹಾಡನ್ನು ಮುಖಾರಿ ರಾಗದಲ್ಲ ಸಂಯೋಜಿಸಿರುವುದು ಪುತಿನ ಅವರ ರಾಗದೊಳಗಿನ ತಿರುಳನ್ನು ಗ್ರಹಿಸುವ ಶಕ್ತಿಗೆ ಗುರುತಾಗಿದೆ.
ಅತ್ತ ಭರತನೋ, ಹದಿನಾಕು ವರ್ಷದಿಂದ ಅಣ್ಣನನ್ನೇ ನೆನೆಯುತ್ತ “ಎಂದಣ್ಣನನು ಕಾಂಬೆ ನಾ ಪಾದುಕೆ, ಎಂದು ಜೋಡಿಪೆ ನಿನ್ನ ಶ್ರೀ ಪಾದಕೆ” ಎಂದು ಕಾಯುತ್ತಲಿರಲು ಹನುಮ ಬಂದು ನೀಡಿದ ಸುದ್ದಿ ಅವನುಗೆ ಬಹಳ ಸಂತೋಷ ತಂದಿತು. ಶತ್ರುಘ್ನನಿಗೆ “ಪೋ ಶತ್ರುಘ್ನ, ಊರ ಸಿಂಗರಿಸು ಕೇರಿಕೇರಿಯೊಳು ಸುದ್ದಿಯ ಹರಡುತ” ಎಂದು ಅಪ್ಪಣೆ ಕೊಡಲು ಊರಿನ ಜನರ ಹರ್ಷಕ್ಕೆ ಮೇರೆಯೇ ಇಲ್ಲ! ಎಲ್ಲರೂ “ವನಕೆ ತೆರಳಿದವ ಮರಳಿದನಿದೆಕೋ ಅನುಜ ಸತಿ ಸಹಿತ ಶ್ರೀ ರಘುರಾಮ” ಎಂದು ಹಾಡಿ ಕುಣಿದು ನಲಿಯುತ್ತಾರೆ. “ಛತ್ರ ಚಾಮರ ತನ್ನಿ ಮಿತ್ರರೆಲ್ಲರು ಬನ್ನಿ ಚಿತ್ರಾಲಂಕಾರದೊಳು ಪುತ್ರ ಪರಿವಾರ ಸಹಿತ” ಎನ್ನುತ್ತ ಸುದ್ದಿ ತಂದ ಆ ಹನುಮಂತನೊಡನೆಯೇ ಕುಣಿದು ನಲಿಯುತ್ತಾರೆ
ಮತ್ತಿನ್ನೇನು? ಅರಮನೆಯಲ್ಲ ರಾಮ ಬರವಿಗೆ ಕಾಯುತ್ತೆ. ಎಲ್ಲ ಕಡೆಯಲ್ಲೂ ಸಡಗರ. ಗುಹನನ್ನು ಕಂಡು ಬಂದ ರಾಮ ಲಕ್ಷ್ಮಣ ಸೀತೆಯನ್ನು ಭರತ ನಂದಗ್ರಾಮದಿಂದ ಅಯೋಧ್ಯೆಗೆ ಕರೆತರುತ್ತಾನೆ. ಪರ್ಣಕುಟಿಲ್ಲೇ ಹದಿನಾಲ್ಕು ವರ್ಷ ಪಾದುಕೆಯ ಸ್ಮರಣೆಯಲ್ಲೇ ಕಳೆದ ಆ ಭರತ ರಾಮನನ್ನು ಕಂಡಾಗ ಅವನಿಗಾದ ಹರ್ಷ ಇಡೀ ಜಗತ್ತನ್ನೇ ಆವರಿಸಿಕೊಳ್ಳುವಷ್ಟು ಗಾಢವೆಂದು ಕವಿ ನುಡಿಯುತ್ತಾರೆ. ಭರತ ರಾಮನಿಗೆ “ದೊರೆಯ ತನವನು ಕೋ ಓ ರಾಘವ, ಹೊರೆಯಲರಿಯೆನು ನಿನ್ನ ತೆರದೊಳು ಕಿರಿಯ ನಾನೀ ರಾಜ್ಯವ” ಎನ್ನಲು ತಮ್ಮನ ಸವಿಯಾದ ಮಾತುಗಳನ್ನೂ, ವಿನಯವನ್ನೂ ಕಂಡು ಬೆರಗಾಗಿ, ಅಯೋಧ್ಯೆಯ ಅರಸನಾಗುವುದೇ ತಕ್ಕದ್ದೆಂದು ಕೊಳ್ಳುತ್ತ ಎಲ್ಲರ ಸಹಿತ ಅಯೋಧ್ಯೆಗೆ ತೆರಳುತ್ತಾನೆ.
ಮತ್ತಿನ್ನೇನುಳಿದಿದೆ? ಅರಮನೆಯೆಲ್ಲ ಸಿದ್ಧವಾಗಿದೆ. ಋಷಿಮುನಿಗಳೆಲ್ಲ ಪವಿತ್ರ ಜಲದೊಂದಿಗೆ ಕಾದಿದ್ದಾರೆ. ಪಟ್ಟಾಭಿಷೇಕ ಮಹೋತ್ಸವಕ್ಕೆ ಸಿದ್ಧರಾದ ರಾಮ ಸೀತೆಯರನ್ನು ರತ್ನ ಸಿಂಹಾಸನವೇರಿಸಿ ಅವರ ಮುಡಿಗೆ ಹೊನ್ನಿನ ಕಿರೀಟವೇರಿಸಿದ್ದಾರೆ. ಎಲ್ಲ ಹಿರಿಯರು ಆಶೀರ್ವಾದ ಮಾಡಿದ್ದಾರೆ. ಮಂತ್ರ ಘೋಷ ಹೊಮ್ಮಿದೆ. “ಅರಸುತನದಿ ಅಭಿಷೇಚಿಪೆವು ನಿನ್ನ ಹಿರಿಮೆ ಹೆಚ್ಚಲೆಂದು ಹರಸುವೆವು” ಎಂದು ಹಾಡಿದ್ದಾರೆ. “ತಿರೆಯವರೊಲವೊಳು ಸೇಚಿಪೆವು” ಎನ್ನುತ್ತ “ಸಹಜ ಸತಿ ಸಹಿತ ಹಿತವರೊಡನೆ ನೀ ಮಹಿತನಾಗಿ ಚಿರ ದೊರೆತನದೊಳಗಿರು” ಎನ್ನತ್ತ ಮಂಗಳಾಚರಣೆ ಮಾಡಿದ್ದಾರೆ.
ರಾಮನನ್ನು ನಾವೆಲ್ಲ ಆದರ್ಶಪುರುಷನೆಂದು ನಂಬಿದ್ದೇವಲ್ಲವೇ? ಅದಕ್ಕೆ ತಕ್ಕಂತೆ ತಾನೇ ಅವನು ನಡೆದುಕೊಳ್ಳುವುದು? ತನ್ನ ಪ್ರಜೆಗಳಿಗಳಿಗೆಲ್ಲ “ತಮ್ಮಾಶಯದೊಲು ನಡೆವೆ, ಕ್ಲೇಶಗಳಿಲ್ಲದೆ ತಿರೆಯ ಜನರು ಸಂತೋಷದೊಳಿರುವೊಲು ಜತುನವಗೊಳ್ಳುವೆ; ಧರ್ಮದೊಳೇ ನಿಲ್ಲುವೆ, ಸತ್ಕರ್ಮದಿ ಕೇಡ ಗೆಲ್ಲುವೆ ; ಸಕಲಕೂ ಶುಭವ ಕೋರುವೆ, ಅಕಲುಷನಾಗಿ ಬಾಳುವೆ ” ಎನ್ನುವ ಭಾಷೆಯನ್ನೀಯುತ್ತಾನೆ.
ನಾಟಕವು ಪ್ರಸಿದ್ಧವಾದ “ಮಂಗಳಂ ಕೋಸಲೇಂದ್ರಾಯ” ಎಂಬ ಸಂಸ್ಕೃತ ಶ್ಲೋಕದ ಕನ್ನಡ ಅನುವಾದದೊಂದಿಗೆ, ಮತ್ತೆ ಕಾಲಕಾಲಕ್ಕೂ ಮಳೆಬೆಳೆಗಳಾಗಲಿ ಎನ್ನುವ ಸಾರ್ವಕಾಲಿಕ ಮಂಗಳಾಚರಣೆಯೊಂದಿಗೆ ಮುಕ್ತಾಯವಾಗುತ್ತದೆ.
“ಕೋಸಲೇಂದ್ರ ಮಹನೀಯ ಗುಣಾಬ್ಧಿಗೆ
ಚಕ್ರವರ್ತಿಸುತ ಸಾರ್ವಭೌಮನಿಗೆ
ಮಂಗಳಂ ಜಯ ಮಂಗಳಂ
ಪಟ್ಟಾಭಿರಾಮಗೆ|| ಮಂಗಳಂ||
-ನೀಲಾಂಜನ
(ಚಿತ್ರಗಳು: ಸೆಪ್ಟೆಂಬರ್ ೧೩, ೨೦೦೮ ರಂದು ಪಾಲೋ ಆಲ್ಟೋ ನಲ್ಲಿ ನಡೆದೆ ಶ್ರೀರಾಮ ಪಟ್ಟಾಭಿಷೇಕ ನೃತ್ಯ ನಾಟಕದ ರಂಗ ಅವತರಣಿಕೆಯಿಂದ. ಚಿತ್ರಕೃಪೆ: ಉತ್ತರ ಕ್ಯಾಲಿಫೋರ್ನಿಯಾ ಕನ್ನಡ ಕೂಟದ ಗೆಳೆಯರು)

ಕಷ್ಟಕಾಲದಕ್ಕೊಂದೊಳ್ಳೆ ಮಾತು
ಜೀವನದಲ್ಲಿ ಕ್ಷೋಭೆಗಳಿಗೇನು ಕೊರತೆ? ಲೆಹ್ಮನ್ ಬ್ರದರ್ಸ್ ಇಂದ ಮಂಗಳೂರಿನಲ್ಲಿ ನಡೆದ ಗಲಾಟೆಯವರೆಗೆ, ಗುಸ್ತಾವ್, ಐಕ್ ನಿಂದ ಹಿಡಿದು ಬೀಳುತ್ತಿರುವ ಶೇರು ಮಾರುಕಟ್ಟೆಯ ತನಕ ಬೇಕಾದಷ್ಟಿವೆ.
ಈಗ ತಾನೇ ಪುತಿನ ಅವರ ಶ್ರೀರಾಮ ಪಟ್ಟಾಭಿಷೇಕ ಗೀತನಾಟಕವನ್ನು ಓದಿ ಮುಗಿಸಿದೆ. ಅದರಲ್ಲಿ ಕಡೆಯಲ್ಲಿ ಬರುವ ಮಂಗಳ ಶ್ಲೋಕ (ಹೊಸತೇನಲ್ಲದಿದ್ದರೂ) ಹಿಡಿಸಿತು. ಅದನ್ನೇ ಇಲ್ಲಿ ಬರೆದಿರುವೆ.
ಕಾಲಕಾಲಕ್ಕೂ ಮೇಘ ವರ್ಷಿಸಲಿ
ಪೃಥಿವಿಯಾಗಲಿ ಸಸ್ಯಶಾಲಿನಿ
ಕ್ಷೋಭೆಗಳಿಲ್ಲದೆ ದೇಶ ಹದುಳಿರಲಿ
ಸಾಧುಗಭಯ, ಜಗಕೆಲ್ಲವು ಸಮ್ಮುದ
ಇದರ ಮೂಲ ಸುಮಾರು ಎಲ್ಲರಿಗೂ ತಿಳಿದದ್ದೇ ಆಗಿದೆ:
ಕಾಲೇ ವರ್ಷತು ಪರ್ಜನ್ಯ ಪೃಥಿವೀ ಸಸ್ಯಶಾಲಿನೀ|
ದೇಶೋSಯಂ ಕ್ಷೋಭರಹಿತಃ ಸಾಧವೋ ಸಂತು ನಿರ್ಭಯಾ:||
ಈ ಗೀತರೂಪಕವನ್ನು ಮೊನ್ನೆ ರಂಗದ ಮೇಲೆ ನೋಡಿದ ಮೇಲೆ ಇದನ್ನು ಕುಳಿತು ಓದಬೇಕೆಂದೆನಿಸಿ, ಓದಿದೆ. ಇನ್ನೊಂದಷ್ಟು ಬರೆಯಬೇಕು, ನೋಡೋಣ. ಎಂದಾಗುವುದೋ?
-ನೀಲಾಂಜನ

One Year Later
Last year on this day when I wrote my first blogpost, I had no clue I would still writing something one year later. Because my interests are rather limited and are confined, I find it hard find a topic to ramble. But as they say the impossible does happen, and I am still around
in here!
As I wrote in my very first post, this ‘other house’ is a place to go around and make new friends and learn a few things on the way. It has definitely proved to be an enriching experience for me.
When I posted my first few posts, I was fiddling with a different themes and images to go with, and one day when the Hoysala Architecture page in the Wikipedia, I was sure which images should go with this ‘house’ of mine. From then on I have selected the image on the top of my blog from within Hasana district (where I come from) in southern Karnataka, or from where I live now (Bay area, CA). Some of them were my own pictures, and some others were used from others with their permission whenever possible.
To mark the completing of one year, I have changed the image to the very first of such images I used - A view from inside the navaranga of Hoysaleswara temple in Halebeedu - a wonderful example of Hoysala architecture (11th century).
Here is a list of images that showed up here earlier:
7th century Kannada inscription atop Chandragiri Hill @ Sravana Belagola
Sunset seen from the top of Mavinakere hill
Garuda in procession, on a street in Kowshika village
A wall panel from Chennakeshava temple showing the court of King Vishnuvardhana
Twin temples of Mosale - Channakeshava and Nageshwara
Decorated doorway in Mavinakere Ranganatha temple
Narasimha on a wall panel of Chennakeshava temple, Belur
A pillar on Indragiri hill, Sravana Belagola
Golden Lights to celebrate Deepavali
A wall panel with elephants from Beluru Chennakeshava temple
Creeper in stone, from a Hoysala temple
Group of Hoysala temples in Doddagaddavalli
Oranges from my backyard
Nandi mantapa in front of Hoysaleshwara temple in Halebeedu
Someshwara temple in Harnahally
Feet of Gommateshwara, Belagola
Navaranga from Hoysaleshwara temple, Halebeedu
You can see some of these images here.
Finally, a big thanks to all those who came by! I guess 60+ posts and 13600+ visits in a year is not too bad for a blog of this nature
-neelanjana

Seven Days In A Week
“There are seven days, there are seven days,
There are seven days in a week
Sunday Monday Tuesday Wednesday
Thursday Friday Saturday”
You might know this rhyme for a long time, but have you thought why there should be seven days in a week? Why not five? Why not ten?
Or for that matter why there should be a week after all?
If you didn’t know, let’s do some time travel to see the origin of the seven day week.
As a second language learner of English, I remember being surprised at the fact that three of the days of the week (Sunday, Monday and Saturday) had the same meanings as their counterparts in Kannada, my mother tongue. This similarity was very conspicuous given the fact that the names of the months of traditional Indian calendar were very different from their western counterparts. As you might know, Indian names for the days of the week are based on the 7 visible planets (Traditionally, the Sun too was considered a planet) Later on, I came to know that even the names like Tuesday and Wednesday (which do not show a direct relation with Mars and Mercury, were indeed coming from old Germanic words which are either equivalent to the planets or another God or deity with very similar features.
If you look at world languages, there are two distinct ways of naming the days of the week. The first is calling the days of the week as the first day, second day, all the way up to seventh day. Some languages have a ‘Day of rest’ after the sixth day. This system is used in languages such as Hebrew and Mandarin.
In the other scheme, the names of the days are always named on the planets. I will elaborate on this scheme because this one is most likely the fore-runner to the other system.
This naming scheme seems to have originated in or near Babylon around 3000 years ago, and spread to around the world in historic times. The names were obviously based on the planet names, but why should Monday follow Sunday or Saturday follow Friday?
Years and Years of looking at the night sky had made the ancient civilizations proficient in everything seen in the night sky. They had figured out that it took about 365 days between the return of the seasons, and Sun complete a revolution in the sky against the background of the stars in the same time. They call this unit as the ‘year’.
They also knew that there were 12 full moons in one year. In other words, there were 24 waxing and waning cycles of the moon in one year. When they had to define a unit of time shorter than a day, they choose to divide a day into 24 parts. This is the unit that has come to be known as an hour. This is why we have 24 hours in a day.
These people from ancient civilizations knew that there were exactly seven objects in the sky which moved with the stars being fixed in the background. Each one took a different amount of time to move in the background of stars. Moon took about 27.5 days to return to the same position among the stars. Mercury took about 90 days to return to the same spot among the stars. Venus took about 225 days. Sun took exactly 1 year. Mars took little more than 2 years. Jupiter took about 12 years and finally Saturn took about 30 years.
Now let us write this in a table, in the decreasing order of the revolving time of the planets around the sky in the background of stars, as observed from Earth :
Saturn
1
8
15
22
5
12
19
Jupiter
2
9
16
23
6
13
20
Mars
3
10
17
24
7
14
21
Sun
4
11
18
1
8
15
22
Venus
5
12
19
2
9
16
23
Mercury
6
13
20
3
10
17
24
Moon
7
14
21
4
11
18
1
Earlier, we saw that a day was comprised of 24 hours. Who ever came up with this naming, allocated each hour of the day to a celestial object in this order. Assume on day 1, the first hour (hour when the sun rises is given to Saturn, Then the following hour is given to Jupiter and the third hour to Mars and so on. When you finish 24 hours and go to the next day, you may notice that this hour will be associated with Sun. - and that is the first hour of the next day. Continuing this process repeatedly you will see that the first hours of each day are governed by these planets in the following order - Sun, Moon, Mars, Mercury, Jupiter, Venus and Saturn.
This method adopted by Babylonians went to the west through Greeks and Romans. This was also carried to the Far East, most likely through India. All the major Indian languages follow this naming. Japanese, Korean and Old Vietnamese follow this scheme for some of the days of the week and for the rest the days, there are substitutions such as fire –day, water-day etc. But in Japanese, the planets themselves are named on the five principles (fire, water etc) thus indicating the source of naming to be the same. For some reason, this naming is lost in China, which follows a first-day second-day kind of naming.
Many of the customs and rituals followed by ancient civilizations had real scientific principles behind them. I wish we take sometime in understanding the traditions of earlier generations, and take the best part for our future. We should not forget a giant Sequoia tree becomes great by a combination of its ancient roots, and the shoots and blossoms of today.
-neelanjana
ps: This was a speech I gave in my Toastmasters Club

ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ ….
The 5th AKKA Kannada Sammelana, being held in Chicago,IL starts today at the Rosemont Convention Center.
Although I did not make it to the conference, I am glad one of my short stories made it to the literary souvenir being published
during the conference. One of the committee members called me few weeks ago, and said my story is one of the stories being published in the magazine.
This is a story about the life and times of Purandara Dasa. This may not be very much in line with tradition, but I have some notes at the end. Consider it as an alternate-history story. The title of the story is “tamboori meeTidava, bhavAbdi dATidava”.
I will be really glad to hear all your comments.
Now let’s get back to the 15th century, to the lush green hills of Sharavati valley in West Karnataka!
-neelanjana
*******************************************************************************************************************
ಗಂಟೆ ಹನ್ನೊಂದಾಗುವ ಮೊದಲು ಅಂತೂ ಪೂಜೆ ಮುಗಿಸಿ ಎದ್ದಳು ಸರಸ್ವತಿ. ಇವತ್ತು ಮಂಗಳಾರತಿ ಮಾಡುವಾಗ ಜೋರಾಗಿಯೇ ಹಾಡನ್ನು ಹೇಳಿದ್ದಳು. ಗಂಡ ಮನೆಯಲ್ಲಿದ್ದಾಗ ಅವಳ ಹಾಡು ಕೇವಲ ಗುನುಗಾಗಿ, ಬರೀ ಅವಳ ಕಿವಿಗೆ ಮಾತ್ರ ಕೇಳುವಂತಾಗಿಬಿಡುತ್ತಿತ್ತು. ಹಾಗೇನೂ ಕೆಟ್ಟದಾಗಿ ಅವಳು ಹಾಡುತ್ತಿರಲಿಲ್ಲ. ಅವಳಿಗೂ ಚಿಕ್ಕ ವಯಸ್ಸಿನಲ್ಲಿ ಸಂಗೀತ ಪಾಠವಾಗಿತ್ತು. ಆದರೆ, ಅವಳ ಗಂಡ ಎಷ್ಟಾದರೂ ಸಂಗೀತದಲ್ಲಿ ನುರಿತವನು. ಅವನಿಗೆ ಕೇಳುವಂತೆ ಹಾಡುವುದಕ್ಕೆ ಇವಳಿಗೇ ಸ್ವಲ್ಪ ಹಿಂಜರಿಕೆ. ಏನಾದರೂ ತಪ್ಪು ಹಾಡಿದರೆ, ಅವನು ಕೂಡಲೆ ಹೀಗಲ್ಲ ಹಾಗೆ ಎಂದು ತಿದ್ದುವನು. ವೇಳೆಯಿದ್ದರೆ ಮೂಲೆಯಲ್ಲಿಟ್ಟ ತಂಬೂರಿಯನ್ನೂ ತಂದೇಬಿಡುವನು. ಹೀಗೆ ಹಾಡಿದರೆ ಇನ್ನೂ ಸೊಗಸು ಎಂದು ಹೊಸ ಸಂಗತಿಗಳನ್ನು ತೋರುವನು. ಹಾಗಾಗಿ ಇಷ್ಟು ವರ್ಷವಾದರೂ, ಸರಸ್ವತಿಗೆ ಅವನ ಮುಂದೆ ಹಾಡಲು ಏನೋ ಆತಂಕ. ಅವಳ ಕಂಠಕ್ಕೆ ಧ್ವನಿ ಬರಬೇಕಿದ್ದರೆ, ಗಂಡ ಹೊರಕ್ಕೆ ಹೋಗಿರಲೇಬೇಕು. ಜೀವನಕ್ಕೆ ಬೇರೆ ವ್ಯಾಪಾರವಿಲ್ಲದಿದ್ದರೆ ಅವನು ಸಂಗೀತವನ್ನೇ ವೃತ್ತಿ ಮಾಡಿಕೊಂಡುಬಿಡುತ್ತಿದ್ದನೋ ಏನೋ ಎಂದು ಸರಸ್ವತಿಗೆ ಹಲವು ಬಾರಿ ಅನ್ನಿಸಿದ್ದು ನಿಜವೇ. ಹಾಗಾಗಿದ್ದರೂ ಚೆನ್ನಿತ್ತೇನೋ? ಅವನು ಹಾಡುವುದನ್ನು ನೆಮ್ಮದಿಯಿಂದ ಕೇಳಿಯೇ ಎಷ್ಟೋ ತಿಂಗಳಾಗಿಹೋಗಿರಬೇಕು. ಅವನು ಹಾಡುತ್ತಾ ಕುಳಿತರೆ, ಆ ಸ್ವರ್ಗವೇ ಇಳಿದು ಬರುತ್ತದೆಯೋ? ಅಥವ ಆ ಕೃಷ್ಣನ ಬೃಂದಾವನವೇ ಈ ಕ್ಷೇಮಪುರಕ್ಕೆ** ಬಂದುಬಿಡುವುದೋ? ಮದುವೆಯ ಮರುದಿವಸ ಅವನು ಹಾಡುತ್ತಿದ್ದನ್ನು ಕೇಳಿದ ಗೆಳತಿಯರಿಗೆಲ್ಲ ತನ್ನನ್ನು ಕಂಡರೆ ಹೊಟ್ಟೆಕಿಚ್ಚಾಗಿತ್ತಲ್ಲ? ಇವರಷ್ಟು ಚೆನ್ನಾಗಿ ಹಾಡುತ್ತಿದ್ದವರು ಅಂದರೆ ನಮ್ಮೂರಿನ ವೈಕುಂಠದಾಸರು. ಅವರನ್ನ ಬಿಟ್ಟರೆ ಇನ್ಯಾರೂ ಅಷ್ಟು ಸೊಗಸಾದ ಕಂಠದವರನ್ನು ಕಂಡೇ ಇಲ್ಲ ತಾನು ಅನ್ನುವುದು ನೆನಪಾಯಿತು ಅವಳಿಗೆ.
ಈ ಊರಿಗೆ ಬಂದು ಇಪ್ಪತ್ತು ವರ್ಷಕ್ಕೂ ಹೆಚ್ಚಾದರೂ, ಇನ್ನೂ ನನ್ನೂರು, ನನ್ನೂರು ಎನ್ನುತ್ತೇನಲ್ಲ! ಇದು ಎಂತಹ ವೈಪರೀತ್ಯ ಅನ್ನಿಸುವಾಗಲೇ ತವರು ಮನೆಗೆ ಹೋಗಿ ಆಗಲೇ ವರ್ಷಗಳೇ ಕಳೆದಿವೆ ಅನ್ನುವ ಸತ್ಯ ಖೇದವನ್ನು ಹೆಚ್ಚಿಸಿತು. ಮದುವೆಯಾಗಿ ಎಷ್ಟು ವರುಷವಾದರೂ, ಹೆಣ್ಣಿಗೆ ತವರ ಬಯಕೆ ಕರಗುವುದೇ ಇಲ್ಲವಲ್ಲ! ಮೊದಲಿಗೆ ಮಲೆನಾಡಿನ ಮೂಲೆಯ ಈ ಊರಿಗೆ ತನ್ನನ್ನು ಮದುವೆಮಾಡಿಕಳಿಸಿಕೊಡುವ ಮಾತು ಬಂದಾಗ ಅವಳಿಗೆ ಬಹಳ ಯೋಚನೆಯಾಗಿತ್ತು. ತನ್ನ ತವರೂರು ಎಷ್ಟು ಚೆಂದ? ಊರಿನ ನಟ್ಟನಡುವೆ ಮುನ್ನೂರಕ್ಕೂ ಹೆಚ್ಚು ವರ್ಷ ಹಳೆಯದಾದ ಚೆನ್ನಕೇಶವನ ಗುಡಿ. ಪ್ರತಿನಿತ್ಯ ಒಂದಲ್ಲ ಒಂದು ಉತ್ಸವ! ಆದರೇನು? ಮದುವೆಯಾದ ಹೆಣ್ಣಿಗೆ ಗಂಡನೂರೇ ತನ್ನೂರಾಗಬೇಕಲ್ಲ? ಇಲ್ಲಿಗೆ ಬಂದ ಹೊಸತರಲ್ಲಿ ಅವಳಿಗೆ ಇಲ್ಲಿನ ಹಸಿರು ಕಂಡು ಬಹಳ ಹಿತವೆನಿಸಿತ್ತು. ಆದರೆ, ಮಳೆಗಾಲದಲ್ಲಿ ಧೋ ಎಂದು ಸುರಿಯುವ ಮಳೆಗೆ ಅವಳು ಹೆದರಿ ಹೋಗಿದ್ದಳು! ಇಲ್ಲಿ ಮಳೆಗಾಲವೋ, ವರ್ಷಕ್ಕೆ ನಾಲ್ಕು ತಿಂಗಳಿಗಿಂತ ಹೆಚ್ಚೇ. ಮಳೆ ಬಂತೆಂದರೆ, ನೆಲವೆಲ್ಲೋ, ನೀರೆಲ್ಲೋ ತಿಳಿಯಲಾರದಂತಹ ಪರಿಸ್ಥಿತಿ. ಆದರೂ, ಮಳೆಗಾಲ ಬಂದರೆ ಗಂಡ ವ್ಯಾಪಾರದ ಚಿಂತೆ ಬಿಟ್ಟು ಕೆಲವು ತಿಂಗಳು ಮನೆಯಲ್ಲಿ ಸಂಗೀತಸಾಧನೆ ಮಾಡುವುದನ್ನು ಕೇಳುತ್ತಿರಬಹುದು. ಆಷಾಢ ಬೇಗ ಬರಬಾರದೇ? ಎಂದುಕೊಳ್ಳುತ್ತಾ ಅವಳು ಅಡುಗೆ ಕೋಣೆ ಹೊಕ್ಕಳು.
*********
ಒಳಗಿನಿಂದ ನಾಗಾಚಾರಿ ತಂದ ನವರತ್ನದ ಪದಕವನ್ನು ನೋಡಿದ ಶ್ರೀನಿವಾಸ. ಪರವಾಗಿಲ್ಲ. ಹೇಳಿದಂತೆಯೇ ಮಾಡಿದ್ದಾನೆ. ಆದರೆ, ಇಲ್ಲಿ ಒಂದು ಕಡೆ ಪಚ್ಚೆ ಕಲ್ಲುಗಳು ತುಸು ಹೆಚ್ಚಾದುವು ಎನ್ನಿಸಿತು. ಸರಿ, ಸರದಲ್ಲಿ ಅದಕ್ಕೆ ಸಮತೂಗಿಸುವಂತೆ ವಿನ್ಯಾಸ ಮಾಡಿದರಾಯಿತು ಎಂದು ಹೊಸ ನಕಾಸೆ ಬರೆಯತೊಡಗಿದ. ಇದು ಅರಮನೆಯವರಿಗೆ ಹಬ್ಬದೊಳಗೆ ತಲುಪಬೇಕು, ಸ್ವಲ್ಪ ಹೆಚ್ಚು ಹೊತ್ತು ಕೆಲಸ ಮಾಡು ಎಂದು ನಾಗಾಚಾರಿಗೆ ಹೇಳಿ, ಮತ್ತೊಂದು ಒಡವೆಯ ಚಿತ್ರ ಬರೆಯತೊಡಗಿದವನಿಗೆ, ಅಪ್ಪ ಹೋದ ಮೇಲೆ, ತನ್ನ ದಿನ ಪೂರ್ತಿ ಅಂಗಡಿಯಲ್ಲೇ ಹೋಗುತ್ತಿದೆ ಅನ್ನುವುದು ನೆನಪಾಯಿತು. ಈಗಾಗಲೇ ಹೇಬಣನಿಗೆ ಹದಿನೆಂಟಾಯಿತು. ಅವನಿಗೊಂದು ಮದುವೆ ಮಾಡಿ, ಅವನಿಗೂ ಚೆನ್ನಾಗಿ ಕೆಲಸ ಕಲಿಸಿಕೊಟ್ಟು, ಜವಾಬ್ದಾರಿಯಲ್ಲಿ ಅವನಿಗೂ ಪಾಲಿತ್ತರೆ, ಮತ್ತೆ ಸ್ವಲ್ಪವಾದರೂ ಸಂಗೀತಸಾಧನೆಗೆ ತೊಡಗಬಹುದು ಅನ್ನಿಸಿತು.
ಅಪ್ಪ ಚಿಕ್ಕಂದಿನಿಂದಲೇ ತನಗೆ ಕೆಲಸದ, ವ್ಯಾಪಾರದ ತರಪೇತಿ ಕೊಟ್ಟಿದ್ದರು. ಅರೆ, ನಾನು ಮಕ್ಕಳಿಗೆ ಅಂಗಡಿಗೆ ಬರೋದಕ್ಕೆ ಹೆಚ್ಚು ಹೇಳುತ್ತಲೇ ಇಲ್ಲವಲ್ಲ? ಈ ಕಿರಿಯವ ಮಧ್ವಪತಿ ಒಬ್ಬನಿಗೆ ಮಾತ್ರ ಅಂಗಡಿಗೆ ಬರುವುದಕ್ಕೆ ಉತ್ಸಾಹ. ಎಷ್ಟೋ ಬಾರಿ ಜೊತೆಗೆ ಬರುತ್ತಾನೆ. ಕುಳಿತು ನಾನು ಮಾಡುವ ಚಿತ್ತಾರಗಳನ್ನು ನೋಡುತ್ತಿರುತ್ತಾನೆ. ಅವನೂ ಸ್ವಲ್ಪ ಬರೆಯುತ್ತಾನೆ. ಈ ದೊಡ್ಡ ಇಬ್ಬರೂ ಅಮಾವಾಸ್ಯೆ ಹುಣ್ಣಿಮೆಗೂ ಬಂದರೆ ಬಂದರು, ಬಿಟ್ಟರೆ ಬಿಟ್ಟರು. ಸ್ವಲ್ಪ ಬಿಗಿ ಮಾಡಬೇಕು. ಇಲ್ಲದಿದ್ದರೆ ನಾಳೆ ವ್ಯಾಪಾರವನ್ನೇ ಕಡೆಗಣಿಸಿದರೆ ಎಂದು ಭಯವಾಯಿತು. ಆಮೇಲೆ, ಅಪ್ಪ ನನಗೂ ಅಂಗಡಿಗೆ ಬರಲು ಬಲವಂತ ಮಾಡುತ್ತಿರಲಿಲ್ಲ. ಆದರೂ, ನಾನೀಗ ಮೂರುಹೊತ್ತೂ ವ್ಯಾಪಾರದಲ್ಲೇ ಮುಳುಗಿಲ್ಲವೇ ಎನ್ನುವುದು ಹೊಳೆದು, ಭಯವಿಲ್ಲ ಅನ್ನಿಸಿತು. ಅಪ್ಪನಂತೂ, ತಾಯಿಯ ಬಳಿ “ಶೀನಪ್ಪ ಹಾಡಿಕೊಳ್ಳುತ್ತಿದ್ದರೆ ಅವನಿಗೆ ಕೆಲಸ ಕಾರ್ಯ ಅಂತ ತೊಂದರೆ ಮಾಡಬೇಡ, ಅವನ ಪಾಡಿಗವನನನ್ನ ಬಿಟ್ಟುಬಿಡು” ಅಂತ ಹೇಳಿಟ್ಟಿದ್ದರು. ಸಂಗೀತದಲ್ಲಿ ನನಗೆ ಗುರುಗಳು ಕಲಿಸಿದ್ದು ಒಂದಾದರೆ, ನಾನೇ ಶಾಸ್ತ್ರ ಗ್ರಂಥಗಳ ಹೊತ್ತಿಗೆಗಳನ್ನು ಓದಿ, ತಾನೇ ರೂಢಿಸಿಕೊಂಡು ಕಲಿತಿದ್ದು ಇನ್ನೆಷ್ಟೋ. ಚಿಕ್ಕಂದಿನಿಂದ ನಾನಾಗೇ ಸಂಗೀತದಲ್ಲಿ ಏನಾದರೂ ಸಾಧಿಸಬೇಕೆಂಬ ಹಂಬಲ. ಒಮ್ಮೆ ಮಾತ್ರ ಅಪ್ಪ ಹೇಳಿದ್ದು ನೆನಪಿದೆ - “ಏನೇ ಆಗಲಿ ಶೀನಪ್ಪ, ಈ ನಮ್ಮ ಕಸುಬನ್ನ ಕೈ ಬಿಡಬೇಡ. ಸಂಗೀತ ಹಾಡುತ್ತೇನೆಂದು ಅರಮನೆಯವರ ಕಾಲು ಹಿಡಿಯುವುದು ಬೇಡ. ಹಾಡುವುದಾದರೆ, ನಿನಗೋಸ್ಕರ ಹಾಡಿಕೋ, ಅಷ್ಟೆ”. ನಾನೂ ಅದನ್ನ ಮೀರದೇ ನಡೆದೆ. ಅಷ್ಟಕ್ಕೂ ನಮ್ಮ ತಲೆತಲಾಂತರದ ರತ್ನಪಡಿ ವ್ಯಾಪಾರ ಇರುವಾಗ, ಪುರಂದರಪುರದ ಶ್ರೀನಿವಾಸನಾಯಕ ಎಂದರೆ ನವಕೋಟಿ ನಾರಾಯಣ ಎಂದೇ ಎಲ್ಲರೂ ಎನ್ನುವಾಗ, ರಾಜರಿಗೇ ಸಾಲಕೊಡುವಂತಹ ಶ್ರೀಮಂತಿಕೆ ನಮಗಿರುವಾಗ, ಅರಸರ ಬಾಗಿಲು ಕಾಯುವುದೇಕೆ? ಅಪ್ಪ ಹೇಳಿದ್ದೇ ಸರಿ. ಈಗ ನನಗೆ ನಾನೇ ಅರಸ. ಬೇಕಾದಾಗ ಹಾಡುವೆ. ಬೇಡವಾದಾಗ ಇಲ್ಲ ಎಂದುಕೊಳ್ಳುವಾಗಲೇ, ಎರಡು ಮೂರು ವಾರಗಳಿಂದ ತಂಬೂರಿ ಹಿಡಿದಿಲ್ಲ, ಮಕ್ಕಳಿಗೂ ಹೇಳಿಕೊಟ್ಟಿಲ್ಲವೆಂಬುದು ಹೊಳೆದು ಮನಸ್ಸಿಗೆ ಮೋಡ ಆವರಿಸಿದ್ದಾಗ ಒಳಗಿನಿಂದ ಮಧ್ವಪತಿ ಬಂದು, “ಅಪ್ಪ, ಈ ಚಿತ್ರ ನೋಡಿ - ಕಿವಿಯ ಓಲೆಗೆ ಈ ರೀತಿ ಮಾಡಿದರೆ ಚೆನ್ನಾಗಿರತ್ತೆ. ಅಲ್ವಾ?” ಎಂದು ಕೇಳಿದ್ದು ಶ್ರೀನಿವಾಸನ ಮನಸ್ಸು ಬೇರೆಡೆಗೆ ಹರಿಯಲು ಅನುವಾಯಿತು.
*********
ಅಭಿನವ ಸಂಗೀತ ಅಭ್ಯಾಸಕ್ಕೆ ಕೂತಿದ್ದ. ಅಪ್ಪ ಸಂಗೀತದ ವಿಷಯದಲ್ಲಿ ಬಹಳ ಕಟ್ಟುನಿಟ್ಟು. ಹೊಸ ಪಾಠ ಇರಲಿ, ಇಲ್ಲದೇ ಇರಲಿ ಅಭ್ಯಾಸ ಮಾತ್ರ ಪ್ರತಿ ನಿತ್ಯ ಮಾಡಲೇಬೇಕು. ಅಣ್ಣತಮ್ಮಂದಿರಲ್ಲ್ಲಿ ನನ್ನ ಧ್ವನಿ ಎಲ್ಲರಿಗಿಂತ ಚೆನ್ನಾಗಿರುವುದೆಂದು, ಅಪ್ಪ ತನ್ನ ಪಾಠದ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ ಅನ್ನುವುದು ಬಾಯಿ ಬಿಟ್ಟು ಹೇಳದಿದ್ದರೂ, ಅಭಿನವನಿಗೆ ಎಷ್ಟೋ ದಿನದ ಹಿಂದೆ ತಿಳಿದಿತ್ತು. ಪ್ರತಿ ನಿತ್ಯ ವರಸೆಗಳನ್ನು ಮೂರು ಕಾಲದಲ್ಲೂ ಅಭ್ಯಾಸ ಮಾಡಲೇ ಬೇಕು! ವರ್ಷದ ಹಿಂದೆ ಒಂದು ದಿನ ಆಟದ ಬಯಲಲ್ಲಿ ಮೂಲೆ ಮನೆಯ ವೇಂಕಟೇಶ ಹಾಸ್ಯ ಮಾಡಿದ್ದು ನೆನಪಾಯಿತು. “ನಿಮ್ಮಪ್ಪ ಎಲ್ಲೂ ಇಲ್ಲದ ಪದ್ಧತಿಯಲ್ಲಿ ಪಾಠ ಮಾಡ್ತಾರಂತೆ! ಸರಿಯಾಗಿ ಒಬ್ಬ ಗುರು ಹತ್ತಿರ ಹೋಗದೇ ಇದ್ರೆ ನೀನು ಸಂಗೀತ ಕಲಿತಹಾಗೇ! ಉದ್ಧಾರ ಆದ ಹಾಗೇ!”. ಅಭಿನವನಿಗೆ ಒಂದು ಕಡೆ ಸಿಟ್ಟು, ಇನ್ನೊಂದು ಕಡೆ ಅಳು ಎರಡೂ ಒಟ್ಟಿಗೆ ಬಂದಿತ್ತು - ಎಲ್ಲರೆದುರು ಗೇಲಿ ಮಾಡಿದನಲ್ಲ ಎಂದು.
ಮರುದಿನ ಪಾಠಕ್ಕೆ ಕೂತಾಗ ಅವನು ಕೇಳಿದ್ದ: “ಅಪ್ಪ, ನೀವು ಹೇಳಿಕೊಡೋ ಪಾಠದ ವಿಧಾನ ಎಲ್ಲೂ ಇಲ್ಲವಂತೆ…. ಎಲ್ಲ ಹುಡುಗರೂ ನನ್ನ ಹಾಸ್ಯ ಮಾಡ್ತಾರೆ”
“ನಾಕು ಮಂದಿ ಬಾಯಿ ಯಾರು ತಾನೇ ಮುಚ್ಚಿಸೋಕೆ ಸಾಧ್ಯ? ಹೌದು. ಈ ರೀತಿ ಸಾಧಕಗಳೆಲ್ಲ ಎಲ್ಲೂ ಇಲ್ಲ. ಇವೆಲ್ಲ ನಾನೇ ರಚನೆ ಮಾಡಿದ್ದು. ಅದಕ್ಕೇನೀಗ? ಮಕ್ಕಳಿಗೆ ಸಂಗೀತ ಕಲಿಯೋದಕ್ಕೆ ಹೊರಟಾಗ ಸ್ವರ ಹಿಡಿಯೋಕೆ, ಶ್ರುತಿ ಜ್ಞಾನ ಬರೋಕೆ, ಕಾಲಪ್ರಮಾಣ ಹೊಳೆಯೋಕೆ, ನಾಲಿಗೆ ಹೊರಳೋಕೆ ಅನುಕೂಲ ಆಗ್ಲಿ ಅಂತ ನಾನೇ ಯೋಚಿಸಿ ನಿಮಗೆಲ್ಲ ಹೀಗೇ ಹೇಳ್ಕೊಡ್ತಿದೀನಿ. ಅಪ್ಪ ಹಾಕಿದ ಆಲದ ಮರಕ್ಕೇ ನೇತು ಹಾಕ್ಕೋಬೇಕೇನು? ಯಾವ ರೀತಿ ಕಲಿತರೆ ಚೆನ್ನಾಗಿ ಹಾಡಬಹುದೋ ಹಾಗೆ ಕಲಿತರಾಯಿತು. ಈಗ ಅದೆಲ್ಲದರ ಯೋಚನೆ ಬಿಟ್ಟು, ಶ್ರೀ ಗಣನಾಥ ಹಾಡು ಮುಂದಿನ ಪಾಠಕ್ಕೆ ಮೊದಲು” ಎಂದಿದ್ದರು ಅಪ್ಪ.
“ಸುಮ್ಮನೆ ತಂಬೂರಿ ನುಡಿಸ್ತಾ ಇದೀಯಲ್ಲೋ? ಏನು ಹಾಡಬೇಕು ಅನ್ನೋದು ಮರೆತು ಹೋಯಿತಾ?” ಅಮ್ಮ ಕೇಳಿದರು. ಎಲ್ಲೋ ಯೋಚಿಸುತ್ತಿದ್ದ ಅಭಿನವ “ಏನೂ ಇಲ್ಲ” ಅನ್ನುತ್ತ, ದೇವಗಾಂಧಾರ ರಾಗದ ಪ್ರಬಂಧವನ್ನು ಹಾಡತೊಡಗಿದ.
**********
ಆಕಾಶದಲ್ಲಿ ಮೋಡಗಳು ಕವಿಯುತ್ತಿರಬೇಕು. ಒಳಗೆ ಆಗಲೇ ಕತ್ತಲಾಗುತ್ತಿದೆ ಎಂದೆನ್ನಿಸಿತು ಶ್ರೀನಿವಾಸನಿಗೆ. “ಏ, ಮಧ್ವಪತಿ, ದೀಪ ಹತ್ತಿಸಿ ತಾರೋ” ಎಂದು ಕೂಗು ಹಾಕಿದ. ಎರಡು ನಿಮಿಷವಾದರೂ ಅವನೇಕೋ ಬರಲಿಲ್ಲ. ಆದರೆ, ಅವನ ಧ್ವನಿ ಅಂಗಡಿಯ ಮುಂಭಾಗದಲ್ಲಿ ಸಣ್ಣಗೆ ಕೇಳುತ್ತಿತ್ತು. ಯಾರ ಹತ್ತಿರ ಮಾತಾಡುತ್ತಿದ್ದಾನೆ? ಕೊಲ್ಲೂರಿನ ದೇವಿಗೆ ಒಂದಷ್ಟು ಆಭರಣಗಳನ್ನ ಮಾಡಬೇಕಿದೆ ಎಂದು ನಾಯಕರ ಕಡೆಯವರು ಹೇಳಿಕಳಿಸಿದ್ದರು. ಅಲ್ಲಿಂದಲೇ ಯಾರಾದರೂ ಬಂದಿರಬಹುದೇ? ಈ ಹುಡುಗ ಏನಾದ್ರೂ ಅರೆಕೊರೆ ಹೇಳಿ ಕಳಿಸಿಬಿಟ್ಟರೆ ಕಷ್ಟವೆನ್ನಿಸಿ ಹೊರಗೆ ಧಾವಿಸಿದ ಶ್ರೀನಿವಾಸ.
“ನೋಡ್ರೀ, ಹಾಗೆ ಯಾವ್ಯಾವಾಗ್ಲೋ ಏನೂ ದಾನ ಮಾಡೋಕಾಗಲ್ಲ. ಹೊರಡಿ. ನಾಳೆ ಬನ್ನಿ ನೋಡೋಣ” ಎನ್ನುತ್ತಿದ್ದ ಮಧ್ವಪತಿ. ಪರವಾಗಿಲ್ಲ. ಅಪ್ಪನಿಗೆ ತಕ್ಕ ಮಗನೇ. ಇನ್ನೂ ಅಜ್ಜನಿಗೆ ತಕ್ಕ ಮೊಮ್ಮೊಗ ಅಂದರೆ ಇನ್ನೂ ಒಳ್ಳೆಯದು! ಅಜ್ಜನ ಮಾತನ್ನ ಚಾಚೂ ತಪ್ಪದೇ ಆಚರಿಸ್ತಿದಾನೆ!
ತಂದೆಯವರು ತೀರಾ ಆರೋಗ್ಯ ತಪ್ಪಿದಾಗ ತನಗೆ ಕೂರಿಸಿ ಬುದ್ಧಿ ಹೇಳಿದ್ದು ಶ್ರೀನಿವಾಸನಿಗೆ ಮನದ ಮುಂದೆ ಹಾದು ಹೋಯಿತು. ಅವತ್ತೂ ಮಧ್ವಪತಿ ನನ್ನ ಜೊತೆಯಲ್ಲೇ ಇದ್ದನಲ್ಲ.
“ಶೀನಪ್ಪ, ನೋಡು ನೀನು ಇಷ್ಟು ದಿನ ಅಂಗಡಿ ವ್ಯಾಪಾರದ ವಿಷಯ ತಲೆ ಕೆಡಿಸಿಕೊಂಡಿಲ್ಲ. ಇನ್ನು ನಾನು ಹೆಚ್ಚು ದಿನ ಉಳಿಯೋನಲ್ಲ. ಇನ್ನು ಮುಂದೆ ನೀನೇ ಎಲ್ಲ ನಿಂತು ನೋಡಿಕೋಬೇಕು. ದುಂದು ವೆಚ್ಚ ಮಾಡಬೇಡ. ಒಂದು ವರಹ ಉಳಿಸಿದ್ದು ಅಂದರೆ, ಒಂದು ವರಹ ಗಳಿಸಿದ್ದಕ್ಕಿಂತ ಹೆಚ್ಚು ಅನ್ನೋದನ್ನ ಮರೀಬೇಡ. ದೇವರುದಿಂಡರು ಅಂತ ಸುಮ್ಮಸುಮ್ಮನೆ ಹರಕೆ ಹಣ ವೆಚ್ಚ ಮಾಡಬೇಡ. ಕಾಯಕವೇ ಕೈಲಾಸ ಅಂತ ಹೇಳೋದು ಕೇಳಿಲ್ಲವೇ ನೀನು? ನಮ್ಮ ಕೆಲಸವನ್ನ ನಾವು ಶ್ರದ್ಧೆಯಿಂದ ಮಾಡಿದರೆ, ಹರನೇ ಆಗಲಿ, ಹರಿಯೇ ಆಗಲಿ ಅದನ್ನ ಮೆಚ್ಚುತ್ತಾರೆಯೇ ಹೊರತು, ನೀನ್ಯಾವ ಗುಡಿ ಸುತ್ತಿದೆ, ಗೋಪುರ ಹತ್ತಿದೆ ಅಂತ ಕೇಳೋರಲ್ಲ ಅವರು”.
“ಅಪ್ಪ, ಆದ್ರೂ, ನಮ್ಮ ಕೈಲಾದ್ದನ್ನು ಕೊಟ್ಟರೆ ಅದರಲ್ಲಿ ತಪ್ಪೇನು..” ಎಂದು ಹೊರಟ ಮಾತನ್ನು ಅರ್ಧಕ್ಕೇ ತುಂಡರಿಸಿದ್ದರು ಅವರು.
“ಆದರೂ ಇಲ್ಲ, ಗೀದರೂ ಇಲ್ಲ. ನಾವು ಕೆಟ್ಟು ಕಷ್ಟದಲ್ಲಿ ಬಿದ್ದರೆ ನೋಡೋರು ಯಾರು? ನೀನು ಚಿಕ್ಕವನಿದ್ದಾಗ ನಾನು ಅವರಿವರಿಗೆ ದಾನ -ಸಾಲ ಅದು ಇದು ಅಂತ ಕೊಟ್ಟು, ಬಹಳ ಕಷ್ಟದಲ್ಲಿದ್ದೆ. ನಿನಗೆ ನೆನಪಿಲ್ಲ. ಆ ಕಾಲದಲ್ಲಿ ನನಗೆ ಸಹಾಯ ಅಂತ ಮಾಡಿದವರು ಯಾರೂ ಇಲ್ಲ. ಆದರೂ ಹೇಗೋ ಎದೆಗುಂದದೆ ಮುಂದೆ ಬಂದೆ. ನಾನು ಪಟ್ಟ ಕಷ್ಟ ನೀನು ಪಡೋದು ಬೇಡ. ಅದಕ್ಕೂ ಹೆಚ್ಚು, ನಿನ್ನ ತಪ್ಪಿನಿಂದ, ಈ ವರದಪ್ಪನ ಮೊಮ್ಮೊಕ್ಕಳು ಬೀದಿಗೆ ಬರುವುದು ಬೇಡ. ದಾನಧರ್ಮದ ಮಾತಿನಿಂದ ಮೂರು ಮಾರು ದೂರ ಇರ್ತೀನಿ ಅಂತ ಮಾತು ಕೊಡು” ಎಂದಿದ್ದರು ಅಪ್ಪ.
ಅಪ್ಪನ ಮಾತು ಎಂದಿಗೂ ಮೀರದಿದ್ದ ಶ್ರೀನಿವಾಸ ಭಾಷೆ ಇತ್ತಿದ್ದ. ಗಂಟಲೊಣಗುತ್ತಿದ್ದರೂ, ಅಪ್ಪ ಮಾತು ಮುಂದುವರೆಸಿದ್ದರು:
“ನೋಡು ಶೀನಪ್ಪ. ’ಅನ್ನದಾನಂ ಪರಂ ದಾನಂ ವಿದ್ಯಾದಾನಮತ: ಪರಂ ಅನ್ನೇನ ಕ್ಷಣಿಕಾ ತೃಪ್ತಿಃ ಯಾವಜ್ಜೀವಂಚ ವಿದ್ಯಯಾ’ ಅನ್ನೋ ಮಾತು ನಿನಗೆ ಗೊತ್ತಿದೆ. ಒಬ್ಬರಿಗೆ ಒಂದು ವರಹ ದಾನ ಮಾಡೋ ಬದಲು, ಒಂದು ವರಹ ಗಳಿಸೋ ದಾರಿ ತೋರಿಸಿಕೊಟ್ಟರೆ, ಅದು ಅವರ ಜೀವಮಾನ ಪೂರ್ತಿ ಅವರೊಡನೆ ಇರತ್ತೆ. ಹಣ ಕೊಟ್ಟರೆ, ಅದು ವೆಚ್ಚಮಾಡುವವರೆಗೆ ಮಾತ್ರ. ಅದರ ಬದಲು, ಹಣಗಳಿಸುವಂಥ ವಿದ್ಯೆ ಹೇಳಿಕೊಟ್ಟರೆ, ಅವರ ಜೀವನ ಪೂರ್ತಿ ಅದು ಅವರನ್ನ ಕಾಯುತ್ತೆ. ಅದಕ್ಕೆ, ನಿನಗೆ ಯಾರಿಗಾದರೂ ಸಹಾಯ ಮಾಡ್ಬೇಕಿದ್ದರೆ, ಅವರಿಗೆ ನಿನ್ನ ಚಿನಿವಾರಿಕೆಯನ್ನೋ, ನಿನ್ನ ಪ್ರೀತಿಯ ಸಂಗೀತಕಲೆಯನ್ನೋ ಹೇಳಿಕೊಡು. ಅದನ್ನ ಅವರು ರೂಢಿಸಿಕೊಂಡರೆ ಅವರವರ ಹಣೆಪಾಡು. ಅದಕ್ಕಿಂತ ಹೆಚ್ಚು ಮಾಡಲು ನೀನೇನು ಬ್ರಹ್ಮನೇ?”
ಹೊರಗೆ ಮಧ್ವಪತಿ ಇನ್ನೂ ಮಾತಾಡುತ್ತಿದ್ದ:
“ಇಲ್ಲ ಸ್ವಾಮೀ, ನೀವು ನಡೆಯಿರಿ. ಉಪನಯನವಾಗಲಿ, ಮದುವೆಯೇ ಆಗಲಿ, ನಮ್ಮ ತಂದೆ ಆದ್ರೂ ನಾನು ಹೇಳೋ ಉತ್ತರವನ್ನೇ ಹೇಳ್ತಾರೆ. ಯಾಕೆ ಸಮಯ ಹಾಳು ಮಾಡ್ಕೋತೀರಾ? ಇನ್ಯಾವಾಗ್ಲಾದರೂ ಬನ್ನಿ ನೋಡೋಣ”
ಶ್ರೀನಿವಾಸನಾಯಕ ಮುಂದಿನ ಹಜಾರಕ್ಕೆ ಬರುವುದಕ್ಕೂ, ಆ ಮುದುಕ ಹೊರಕ್ಕೆ ಹೋಗುವುದಕ್ಕೂ ಸರಿಯಾಯಿತು.
ಆದರೆ ಅವನು ಹೋಗಿದ್ದು ತತ್ಕಾಲಕ್ಕೆ ಎಂದು ಮರುದಿನವೇ ಗೊತ್ತಾಯಿತು. ಅಂಗಡಿ ತೆಗೆಯುವ ವೇಳೆಗೇ ಆ ಮುದುಕ ಅಲ್ಲಿ ಬಂದು ನಿಂತಿದ್ದ. ಶ್ರೀನಿವಾಸನನ್ನು ಕಂಡ ಕೂಡಲೆ, “ಅಯ್ಯ, ನಿಮ್ಮ ಮಗ ಮತ್ತೆ ಬರೋದಕ್ಕೆ ಹೇಳಿದ್ದ. ಮೊಮ್ಮೊಗನಿಗೆ ಉಪನಯನ ಮಾಡ್ಬೇಕು. ಏನಾದರೂ ದಾನ ಕೊಡಿ ಸ್ವಾಮೀ” ಎಂದ. ಈಗ ತಾನೇ ಅಂಗಡಿ ಬಾಗಿಲು ತೆಗೀತಾ ಇರೋದು ಕಾಣೋದಿಲ್ವೇ, ಆಮೇಲೆ ಸ್ವಲ್ಪ ವ್ಯಾಪಾರ ಆದ ಮೇಲೆ ಬಾ” ಎಂದಿದ್ದಕ್ಕೆ ಮುದುಕ “ಇಲ್ಲೇ ಕೂತಿರ್ತೀನಿ ಸ್ವಾಮೀ ಹಾಗೇ” ಎಂದು ಹೊರಗೇ ಕೂತುಕೊಂಡ. ಅವತ್ತೆಲ್ಲ ಶ್ರೀನಿವಾಸನಿಗೆ ಕೆಲಸದ ಭರಾಟೆ ಹೆಚ್ಚಾಗಿತ್ತು. ಕೆಳದಿಯ ನಾಯಕರ ಕಡೆಯವರು ಬಂದಾಗ ಅವರಿಗೆ ತಕ್ಕಂತೆ ಮರ್ಯಾದೆ ಮಾಡುವ ಗಲಭೆ ಕೂಡ ಇತ್ತು. ಇವೆಲ್ಲ ಸೇರಿ ಸಂಜೆ ಹೊರಡುವ ಸಮಯಕ್ಕೆ ಬಹಳ ಆಯಾಸವೂ ಆಗಿತ್ತು. ಹೊರಟಾಗ, ಮತ್ತೆ ಆ ಮುದುಕ ಪ್ರತ್ಯಕ್ಷನಾಗಬೇಕೇ? ಕಂಡರೂ ಕಾಣದ ಹಾಗೆ ಹೊರಟ ಶ್ರೀನಿವಾಸ. ಇದು ಇನ್ನೂ ಮೂರು ನಾಲ್ಕು ದಿವಸ ಮತ್ತೆ ಮತ್ತೆ ನಡೆಯಿತು. ಇದಲ್ಲದೇ, ಇನ್ನೂ ಒಂದೆರಡು ಸಲ ಮಧ್ವಪತಿ ಆ ಮುದುಕನನ್ನು ಗದರಿಸಿ ಕಳಿಸಿದ್ದು ಶ್ರೀನಿವಾಸನಿಗೆ ಕೇಳಿಯೂ ಇತ್ತು.
ಅವತ್ತು ಹುಣ್ಣಿಮೆಯ ರಾತ್ರಿ ಶ್ರೀನಿವಾಸ ಅಂಗಡಿಯಿಂದ ಹೊರಡುವ ಸಮಯ. ಮಧ್ವಪತಿ ಸಂಜೆಗೆ ಮುಂಚೆಯೇ ಮನೆಗೆ ಹೋಗಿ ಆಗಿತ್ತು. ಸಂದೂಕವನ್ನೂ ಮುಚ್ಚಿದ್ದಾಗಿತ್ತು. ಅಷ್ಟರಲ್ಲೇ, ಆ ಮುದುಕ ಮತ್ತೆ”ನಮಸ್ಕಾರ ನಾಯಕರೇ” ಎನ್ನುತ್ತಾ ಬರಬೇಕೇ? ಹಾಗೇ ಓಡಿಸಬೇಕೆಂದಿದ್ದರೂ, ಶ್ರೀನಿವಾಸನಿಗೆ ತಾನು ಕುಳ್ಳಿರುವ ಹಾಸಿನ ಕೆಳಗೆ ವರಹವೊಂದು ಬಿದ್ದಿದ್ದು ಕಾಣಿಸಿತು. “ತೊಗೋ, ಇನ್ನೊಂದು ಸಲ ಮುಖ ತೋರಿಸಬೇಡ ಇಲ್ಲಿ” ಅಂತ ಮುದುಕನ ಕೈಗೆ ಹಾಕಿದಾಗ, ಆ ವರಹದ ಅಡಿಭಾಗ ಒದ್ದೆಯಾಗಿ, ಕಿಲುಬಿದ್ದು ಕಾಣಿಸಿತು, ಆದರೆ ಅವನಲ್ಲಿ ಮತ್ತೆ ಪೆಟ್ಟಿಗೆ ತೆಗೆದು ಒಂದು ಒಳ್ಳೇ ವರಹ ಕೊಡುವ ತಾಳ್ಮೆಯಿರಲಿಲ್ಲ. ಮುದುಕ ಮರುಮಾತಾಡದೇ ಹೋಗಿದ್ದು ನೋಡಿ “ಪಾಪ, ಮುದುಕನಿಗೋ, ಕಣ್ಣು ಕಾಣದೇನೋ? ಅದಕ್ಕೆ ನಾಣ್ಯ ಕಿಲುಬಿದ್ದು ಕಾಣಲಿಲ್ಲವೇನೋ? ಅದೇನಾದರೂ ಹಾಳಾಗಲಿ” ಎಂದುಕೊಳ್ಳುತ್ತಾ ಮನೆಗೆ ನಡೆದ.
**********
ನಡುಹಗಲು. ಅಡುಗೆಮನೆ ಕೆಲಸವೆಲ್ಲ ಮುಗಿಯುತ್ತ ಬಂದಿದೆ. ಹೇಬಣ ಮತ್ತು ಅಭಿನವ ಇಬ್ಬರೂ ಮೂರು ದಿನವಾಯಿತು ಊರಿಗೆ ಹೋಗಿ. ಇವತ್ತು ಸಂಜೆ ಬರಬೇಕು. ಸರಸ್ವತಿಗೆ ಯಾಕೋ ಆಯಾಸವಾದಂತಾಗಿ ಹತ್ತು ನಿಮಿಷ ಕೂರೋಣವೆನ್ನಿಸಿ ಹಜಾರದ ಉಯ್ಯಾಲೆಯ ಮೇಲೆ ಹಾಗೇ ಕುಳಿತಳು. ಅಷ್ಟರಲ್ಲೆ, ಬಾಗಿಲು ಬಡಿಯುವ ಶಬ್ದ. ಹೋಗಿ ಅಗುಳಿ ತೆಗೆದಳು. ಒಬ್ಬರು ವಯಸ್ಸಾದವರೊಬ್ಬರು ಬಾಗಿಲಲ್ಲಿ ನಿಂತಿದ್ದರು.
“ಒಳಗೇ ಬರಲೇ ಸರಸ್ವತಮ್ಮ?”
ಅವರನ್ನು ಸರಸ್ವತಿ ಯಾವತ್ತೂ ಕಂಡಿರಲಿಲ್ಲ. ಅವರಿಗೆ ತನ್ನ ಹೆಸರು ಹೇಗೆ ಗೊತ್ತಾಯಿತೋ? ಸ್ವಲ್ಪ ಉದ್ದವಾದ ಮೂಗು. ಮುಖದಲ್ಲಿ ಕಿರುನಗೆ. ತಲೆಯ ಮೇಲೆ ಸುತ್ತಿದ್ದ ಬಿಳೀ ದಟ್ಟಿ. ಯಾಕೋ ತನ್ನ ತಂದೆಯನ್ನೇ ನೋಡಿದಂತಾಯಿತು ಅವಳಿಗೆ.
“ಬನ್ನಿ” ಅಂದಳು ಅವಳು. ಆತ ಒಳಗೆ ಬಂದು, ನಾನೂ ಹಿಂದೆ ನಿಮ್ಮ ಬೇಲೂರಿನ ಕಡೆಯವನೇ. ಈಗ ಬಿದನೂರು ಸೀಮೆಯಲ್ಲಿದ್ದೀನಿ. ನನಗೆ ಒಬ್ಬ ಮೊಮ್ಮೊಗನನ್ನು ಬಿಟ್ಟು ಇನ್ಯಾರೂ ಇಲ್ಲ. ಅವನಿಗೆ ಕಾಲ ಮೀರೋದಕ್ಕೆ ಮೊದಲು ಉಪನಯನ ಮಾಡ್ಬೇಕಮ್ಮ. ಉಪನಯನ ಆದಮೇಲೆ ಅವನನ್ನು ಶೃಂಗೇರಿಗೆ ಕಳಿಸಿ ಕಲಿಸಬೇಕು ಅಂತ ನನ್ನ ಆಸೆ. ಈ ಮುದುಕನಿಗೆ ಏನಾದರೂ ಸಹಾಯ ಕೊಡ್ತೀಯೇನಮ್ಮ?” ಎಂದರು.
ತನ್ನ ಕೈಯಲ್ಲಿ ದುಡ್ಡುಕಾಸಿನ ವ್ಯವಹಾರ ಯಾವತ್ತೂ ಮಾಡಿದವಳಲ್ಲ ಅವಳು. “ನಾನು ಹೆಣ್ಣುಹೆಂಗಸು. ನನ್ನ ಹತ್ತಿರ ಏನು ತಾನೇ ಇದೆ ಕೊಡೋದಕ್ಕೆ? ನನ್ನ ಮನೆಯವರನ್ನು ಕೇಳದೇ ನಾನು ಏನು ತಾನೇ ಕೊಡೋದು?” ಎಂದಳು. ಮನಸ್ಸಿನಲ್ಲಿ ಪಿಚ್ಚೆನ್ನಿಸಿತು. ಗಂಡನನ್ನೇ ಕೇಳಿ ಕೊಡಿಸೋಣವೆಂದರೆ, ಆತ ಖಂಡಿತ ಒಪ್ಪುವುದಿಲ್ಲ. ಮೊದಲೇ ಅಕ್ಕಸಾಲಿ ಕೆಲಸ ಮಾಡುವವರು. “ನಮ್ಮ ಕಸುಬಿನಲ್ಲಿ ಯಾರುಏನು ಅಂತೆಲ್ಲ ನೋಡಬಾರದು. ಅಕ್ಕಸಾಲಿ ಅಕ್ಕನ ಚಿನ್ನವನ್ನೂ ಬಿಡೋಲ್ಲ ಅಂತ ಗಾದೆ ಇಲ್ಲವೇ?” ಎನ್ನುತ್ತಿದ್ದ ಅವನು. ಮೊದಲು ಇಷ್ಟು ಬಿಗಿಮುಷ್ಟಿಯಿರಲಿಲ್ಲ. ಆದರೆ, ಈಗ ಮಾವನವರು ಹೋಗಿ ಐದುವರ್ಷವಾಯಿತಲ್ಲ? ಆಗಿನಿಂದಂತೂ ಗಂಡನಿಗೆ ವ್ಯವಹಾರವೇ ಹೆಚ್ಚಾಗಿ ಹೋಗಿದೆ.
“ನಿಮಗೆ ತವರುಮನೆಯಿಂದ ಬಂದಿರೋದು ಏನಾದರೂ ಇದ್ದರೆ ಕೊಡಮ್ಮ. ನಾನೂ ಮುದುಕ. ಎಷ್ಟು ಮನೆಗೆ ಅಂತ ಹೋಗಿ ಕೇಳಲಿ?” ಎಂದರು ಆತ. ಕತ್ತನ್ನು ಮುಟ್ಟಿಕೊಂಡಳು. ಅಲ್ಲಿರುವುದೊಂದು ತಾಳಿ. ಕೈಯಲ್ಲಿ ಎರಡು ಜೊತೆ ಬಳೆ. ಕಿವಿಯಲ್ಲಿ ವಜ್ರದ ಬೆಂಡೋಲೆ, ಮೂಗಲ್ಲಿ ಮೂಗುತಿ, ಇಷ್ಟು ಬಿಟ್ಟು ಅವಳ ಮೈಮೇಲೆ ಒಡವೆ ಇನ್ನೇನಿತ್ತು? ಮುತ್ತೈದೆಯಾದವಳು ಇದರಲ್ಲಿ ಯಾವುದು ತಾನೇ ತೆಗೆಯಬಹುದು? ಹೆಸರಿಗೆ ಮನೆಯದು ಚಿನ್ನದ ವ್ಯಾಪಾರ. ಆದರೆ ಎಲ್ಲವನ್ನೂ ಪೆಟ್ಟಿಗೆಯಲ್ಲಿಟ್ಟು ಭದ್ರಮಾಡುವ ಗಂಡ ಇರುವಾಗ, ಇವಳು ಏನು ತಾನೇ ಮಾಡಲಾಗುತ್ತೆ?
ಸರಸ್ವತಿ ಏನೋ ಯೋಚಿಸುತ್ತಿದ್ದು ನೋಡಿ, ತಾನು ಹೇಳಿದ್ದು ಕೇಳಲಿಲ್ಲವೇನೋ ಎಂದುಕೊಂಡು ಆತ ಮತ್ತೆ “ಬೇಲೂರಿಂದ, ನಿನ್ನ ತವರು ಮನೆಯಿಂದ, ಏನಾದರೂ ಬಂದಿರೋ ಹಣಕಾಸು ಒಡವೆ ಗಿಡವೆ ಅಂತ ಇದ್ದರೆ ಕೊಡಮ್ಮ, ನಿನ್ನ ಕೈಲಾದದ್ದು” ಎಂದರು. ಸರಸ್ವತಿಗೆ, ದೇವರ ಗೂಡಿನಲ್ಲಿ ಇನ್ನೊಂದು ಹರಳಿನ ಮೂಗುತಿ ಇರುವುದು ನೆನಪಾಯಿತು. ಹಾಕಿಕೊಂಡಿದ್ದ ಮುತ್ತಿನ ಮೂಗುತಿಯನ್ನು ತೆಗೆದಳು. “ತೊಗೊಳ್ಳಿ ಸ್ವಾಮೀ. ಇದು ನಮ್ಮ ತವರು ಮನೆಯಲ್ಲಿ ಕೊಟ್ಟಿದ್ದೇ. ನಿಮ್ಮನ್ನ ನೋಡಿದಾಗ ನನಗೆ ನನ್ನ ತಂದೆಯ ನೆನಪಾಗುತ್ತಿದೆ. ಇದು ಕೈಯಲ್ಲಿ ಹಿಡಿದು ಆಶೀರ್ವಾದ ಮಾಡಿ” ಎಂದು ನಮಸ್ಕಾರ ಮಾಡಿದಳು.
“ದೀರ್ಘ ಸುಮಂಗಲೀ ಭವ” ಎಂದು ಆಶೀರ್ವಾದ ಮಾಡಿ, ಅವರು ಹೊರಟುಹೋದಮೇಲೆ, ಸರಸ್ವತಿಗೆ ತಾನು ಕೊಟ್ಟದ್ದು ಸರಿಯೇ ತಪ್ಪೇ ಎಂಬ ಪೀಕಲಾಟ ಶುರುವಾಯಿತು. ಆಗಲಿ, ಇನ್ನೊಂದು ಮೂಗುತಿ ಹಾಕಿಕೊಂಡುಬಿಡುವೆ. ಗಂಡನಿಗೆ ಗೊತ್ತಾಗದೇ ಇರಬಹುದು ಎಂದುಕೊಳ್ಳುವಾಗಲೇ ಪಕ್ಕದ ಮನೆಯ ಲಕ್ಷ್ಮೀದೇವಿ ಬಂದಳು. ಹೊಸದಾಗಿ ಮದುವೆಯಾಗಿರುವ ಹುಡುಗಿ. ಅತ್ತೆ ಇಲ್ಲದ ಮನೆ. “ಸರಸ್ವತಮ್ಮ, ನನಗೆ ಹುಡಿಗಡುಬು ಹೇಗೆ ಮಾಡೋದು ಅಂತ ಹೇಳಿಕೊಡ್ತೀನಿ ಅಂದಿದ್ದಿರಲ್ಲ, ಅದಕ್ಕೇ ಬಂದೆ” ಎಂದಳು. “ಬಾಮ್ಮಾ ಲಕ್ಷ್ಮೀ” ಎನ್ನುತ್ತ ಸರಸ್ವತಿ ಅವಳನ್ನು ಅಡುಗೆ ಮನೆಗೆ ಕರೆದೊಯ್ದಳು.
**********
ಇವತ್ತು ಅಪ್ಪ ಬರೆಯೋದಕ್ಕಿಂದ ಒಳ್ಳೆ ಚಿತ್ತಾರ ಬರೆದುಕೊಡ್ತೀನಿ ಅನ್ನೋ ಮನಸು ಮಾಡಿಕೊಂಡು ಅಂಗಡಿಯ ಹಿಂದಿನ ಹಜಾರದಲ್ಲಿ ಕುಳಿತಿದ್ದ ಮಧ್ವಪತಿ. ತಾನು ದೊಡ್ಡವನಾದಮೇಲೆ, ಅಜ್ಜನಿಗಿಂತ, ಅಪ್ಪನಿಗಿಂತ ಒಳ್ಳೊಳ್ಳೆ ಚಿತ್ತಾರದ ಒಡವೆಗಳನ್ನ ಮಾಡಬೇಕು ಅನ್ನುವ ಆಸೆ ಅವನಿಗೆ ಬಹಳ ಇತ್ತು. ವ್ಯವಹಾರದಲ್ಲಿ ಆಸಕ್ತಿ ಇರುವ ಅವನ ಕಿವಿ ಹಾಗೇ ಹೊರಗಡೆ ಅಪ್ಪ ಬಂದವರೊಡನೆ ಆಡುತ್ತಿದ್ದ ಮಾತುಗಳನ್ನೂ ಕೇಳುತ್ತಿದ್ದವು. “ಇನ್ನು ಮೂರು ದಿನದಲ್ಲಿ ಸಿದ್ಧವಾಗುತ್ತೆ ಅಡ್ಡಿಕೆ ನಿಮ್ಮದು ಎನ್ನುತ್ತಿರುವ ತಂದೆಯ ಮುಖ ಮಧ್ವಪತಿಗೆ ಕಾಣುತ್ತಿರಲಿಲ್ಲ. ಎದುರು ಕೂತವರು ಇಕ್ಕೇರಿಯ ಗಣಪತಿ ಹೆಗಡೆಯವರು. “ಅರೆ, ಇನ್ನೂ ಇವರ ಅಡ್ಡಿಕೆಯ ಕೆಲಸ ಆರಂಭವೇ ಆಗಿಲ್ಲವಲ್ಲ, ಮೂರು ದಿನದಲ್ಲಿ ಕೊಡೋದು ಹೇಗೆ!” ಎಂದುಕೊಂಡ. ಈ ಚಿನ್ನದ ಕೆಲಸದಲ್ಲಿ, ಸಣ್ಣ ಪುಟ್ಟ ಸುಳ್ಳುಗಳು ಹೇಳಬೇಕಾಗುತ್ತೆ ಅನ್ನೋದು ಅವನಿಗೆ ತಿಳಿದದ್ದೇ. ಹೇಗಿದ್ದರೂ ಇಕ್ಕೇರಿಯಿಂದ ಇವರು ಮತ್ತೆ ಮೂರು ದಿನಕ್ಕೆ ಬರೋದಿಲ್ಲ ಅಂತ ಗೊತ್ತಿದ್ದೇ ಅಪ್ಪ ಹೀಗೆ ಹೇಳಿರುವುದು ಎಂದು ಅವನಿಗೆ ಊಹೆ ಆಯಿತು. ಸರಿ ಎಂದು ಹೇಳಿ ಹೆಗಡೆಯವರು ಹೊರಟಿದ್ದು ಅವನಿಗೆ ಕಾಣಿಸಿತು. ಅವರು ಹೋಗುತ್ತಿರುವ ಹಾಗೇ, ಬಾಗಿಲಲ್ಲಿ ಮತ್ತೆ ಆ ಮುದುಕ ಪ್ರತ್ಯಕ್ಷ! “ಈ ಮುದುಕಪ್ಪ ಮತ್ತೆ ಬರುತ್ತಿದ್ದಾನಲ್ಲ? ಎರಡು ಮೂರು ಸಲ ನಾನೇ ಓಡಿಸಿದ್ದೆನಲ್ಲ ಇವರನ್ನ” ಎಂದುಕೊಂಡವನು ಸರಿ, ಅಪ್ಪ ಇದ್ದಾರಲ್ಲ, ಏನಾದರೂ ಮಾಡಿಕೊಳ್ಳಲಿ ಎಂದು ಸುಮ್ಮನಾದ.
ಆ ಮುದುಕ ಬಂದವನು “ನಾಯಕರೇ, ನನ್ನ ಹತ್ತಿರ ಒಂದು ಒಡವೆ ಇದೆ. ಇದನ್ನ ತೊಗೊಂಡು, ಏನು ಬರತ್ತೋ ಕೊಡಿ ಸ್ವಾಮಿ” ಅಂತ ಹೇಳಿದ್ದು ಕೇಳಿಸಿತು. ಯಾವುದೋ ಹಳೆಯ ಒಡವೆ ಇದ್ದಿರಬಹುದು. ಸರಿ, ಇದಾದರೆ ಪರವಾಗಿಲ್ಲ. ಹೇಗಿದ್ದರೂ, ಅವನ ಸಮಯಕ್ಕೆ ಸಹಾಯ ಆಗುತ್ತಲ್ಲ ಅಪ್ಪ ಅದನ್ನ ಕೊಂಡುಕೊಂಡು ದುಡ್ಡು ಕೊಟ್ಟರೆ, ಅನ್ನಿಸಿತು ಮಧ್ವಪತಿಗೆ.
“ಒಂದು ಅರ್ಧ ಗಂಟೆ ಇಲ್ಲೇ ಇರಪ್ಪ, ಮತ್ತೆ ಬಂದು ಈ ಮೂಗುಬೊಟ್ಟಿನ ದುಡ್ಡು ಕೊಡ್ತೀನಿ” ಎಂದು ಹೇಳಿದ್ದು ಕೇಳಿಸಿತು. ಒಳಗೆ ಬಂದು ನನಗೆ ಹೇಳಿ ಹೋಗ್ತಾರೇನೋ ಅಂಗಡಿ ನೋಡಿಕೊಳ್ಳೋದಕ್ಕೆ ಎಂದು ಮಧ್ವಪತಿ ಎಂದುಕೊಳ್ಳುವಷ್ಟರಲ್ಲೇ, ಅಂಗಡಿಯ ಬಾಗಿಲಿಗೆ ಬೀಗ ಜಡಿದ ಸದ್ದಾಯಿತು. ನಾನು ಇಲ್ಲಿ ಇರುವುದು ಗೊತ್ತಿರಲಿಲ್ಲ ಅನ್ನಿಸುತ್ತೆ. ನಾನು ಹಿಂದುಗಡೆಯಿಂದ ಬಂದಿದ್ದೆನಲ್ಲ ನಾಗಾಚಾರಿ ಹತ್ತಿರ ಕದ ತೆಗೆಸಿಕೊಂಡು? ಆಮೇಲೆ ತಂದೆ ಒಳಕ್ಕೆ ಬಂದೇ ಇರಲಿಲ್ಲ ಅನ್ನುವುದು ಹೊಳೆಯಿತು. ಇದಾವ ಮೂಗುಬೊಟ್ಟಿರಬಹುದು? ಅಷ್ಟು ಬೆಲೆಬಾಳುವುದಿರಬಹುದೇ? ಅದಕ್ಕೆ ಕೊಡುವಷ್ಟು ದುಡ್ಡು ಇಲ್ಲಿ ಇರಲಿಲ್ಲವೇನೋ? ಇನ್ನೆಲ್ಲಿಂದಾದರೂ ದುಡ್ಡು ತರಲು ಹೋಗಿರಬಹುದೇ? ಅದ್ಯಾವುದೋ ದಕ್ಷಿಣ ದೇಶದ ದೇವಸ್ಥಾನದಲ್ಲಿ, ದೇವಿಗೆ ಹಾಕಿರೋ ಮೂಗುತಿಯ ವಜ್ರದ*** ಹೊಳಪು ಎಷ್ಟೋ ದೂರಕ್ಕೆ ಕಾಣತ್ತೆ, ದೇವಿಯ ಮುಖಕ್ಕೆ ಬೇರೆ ದೀಪವೇ ಬೇಡವಂತೆ ಅಂತ ಒಂದು ಸಲ ಅಪ್ಪ ಹೇಳಿದ್ದು ನೆನಪಾಯಿತು. ಅಂತಹದ್ದಾಗಿದ್ದರೆ, ನೋಡಬೇಕು ಎಂದು ಆಸೆಯಾಗಿ ಮುಂದಿನ ಕೋಣೆಗೆ ನಡೆದ ಮಧ್ವಪತಿ. ಸಂದೂಕದ ಬೀಗದ ಕೈ ಎಂದಿನಂತೆ ಹಾಸಿನ ಕೆಳಗೆ ಸಿಕ್ಕಿತು. ಪೆಟ್ಟಿಗೆ ತೆಗೆದು ನೋಡಿದ. ಮೇಲಿನ ಚೌಕೋನದ ಖಾನೆಯಲ್ಲೇ ಇತ್ತು ಆ ಮುತ್ತಿನ ಮೂಗುತಿ. ಆದರೆ ಅವನ ಕಲ್ಪನೆಯಂತೆ ಯಾವುದೇ ಭಾರೀ ಮೂಗುತಿಯಾಗಿರಲಿಲ್ಲ ಅದು. ಮೇಲೊಂದು ಮುತ್ತು. ಕೆಳಗೆ ಬೇಸರಿಯಲ್ಲಿ ಮೂರು ಸಣ್ಣ ಮುತ್ತುಗಳು. ಕಣ್ಣುಗಾಜಿನಲ್ಲಿ ಹಿಡಿದು ಮುತ್ತನ್ನು ನೋಡಿದ. ಒಳ್ಳೇ ಮುತ್ತೇ. ಆದರೆ, ನಾವು ಕೊಳ್ಳಲಾರದಷ್ಟು ಬೆಲೆ ಬಾಳೋದೇನಲ್ಲ. ಅಪ್ಪ ಯಾಕೆ ಮತ್ತೆ ಹೊರಗೆ ಹೋದರು? ಸೋಜಿವಾಯಿತು ಅವನಿಗೆ. ಹಾಗೇ, ಇದು ಬಹಳ ಪರಿಚಿತವಾದದ್ದು ಅಂತಲೂ ಅನ್ನಿಸತೊಡಗಿತು. ಮತ್ತೊಮ್ಮೆ ಮಧ್ವಪತಿ ಮೂಗುತಿಯನ್ನು ಕೈಯಲ್ಲಿ ಹಿಡಿದ. ಅದು ಯಾವುದು ಎಂದು ಅವನಿಗೆ ಗೊತ್ತಾಗಿಬಿಟ್ಟಿತು.
*********
ಹುಡಿಗಡುಬು ಮಾಡುವ ವಿಧಾನವನ್ನು ಹೇಳಿಸಿಕೊಂಡು ಲಕ್ಷ್ಮೀದೇವಿ ಹೊರಟಳು. ಬಾಗಿಲು ಹಾಕಿಕೊಳ್ಳಲು ಅವಳ ಹಿಂದೆಯೇ ಹೋದ ಸರಸ್ವತಿಗೆ, ಮನೆ ಬಾಗಿಲಲ್ಲಿ ಗಂಡ ಬರುತ್ತಿರುವುದು ಕಂಡಿತು. ಇದೇನು, ಹೊತ್ತಲ್ಲದ ಹೊತ್ತಿನಲ್ಲಿ ಇವರು ಅಂಗಡಿ ಬಿಟ್ಟು ಇಲ್ಲಿಗೆ ಬಂದಿರುವುದು? ಎಂದುಕೊಂಡಳು. ಅಲ್ಲದೆ, ಏಕೋ ಅವನ ಮುಖ ಎಂದಿನಂತಿಲ್ಲ ಎಂತಲೂ ಅನ್ನಿಸಿತು.
“ಒಂದು ಸ್ವಲ್ಪ ನೀರು ಕೊಡ್ತೀಯಾ ಆಸರೆಗೆ” ಎಂದ ಶ್ರೀನಿವಾಸ.
ಒಳಹೋಗಿ, ತಾಮ್ರದ ತಂಬಿಗೆಯಲ್ಲಿ ನೀರು ತಂದಳು ಸರಸ್ವತಿ. ಅದನ್ನು ಕೊಡುತ್ತಿದ್ದ ಹಾಗೇ ಗಂಡ ತನ್ನ ಮುಖವನ್ನೇ ನೋಡುತ್ತಿರುವುದರ ಅರಿವಾಯಿತು ಅವಳಿಗೆ.
“ಮುತ್ತಿನ ಮೂಗುತಿ ಏನಾಯಿತು ನಿನ್ನದು?” ಎಂದ ಅವನು. ಇವಳ ಎದೆ ಧಸಕ್ಕೆಂದಿತು. ಹುಡಿಗಡುಬು ಮಾಡುವ ಧಾವಂತದಲ್ಲಿ, ಬೇರೆ ಮೂಗುತಿ ಹಾಕಿಕೊಳ್ಳುವುದನ್ನು ಮರೆತಿದ್ದಳು. ತಕ್ಷಣ ಬಾಯಿಗೆ ಬಂದದ್ದು ಹೇಳಿದಳು: “ಎಣ್ಣೆ ನೀರು ಹಾಕ್ಕೊಳ್ಳೋವಾಗ ತೆಗೆದಿಟ್ಟಿದ್ದೆ ಎಣ್ಣೆ ಕೂರುತ್ತೆ ಅಂತ, ಹಾಕಿಕೊಳ್ಳೋದು ಮರೆತಿದ್ದೆ”. ಆದರೆ, ಯಾಕೋ ಈ ಸುಳ್ಳನ್ನ ತಾನು ಸಾಧಿಸೋಕ್ಕಾಗೋದಿಲ್ಲ ಎನ್ನಿಸಿತು. ಅಲ್ಲದೆ, ಮುಖವೆಲ್ಲ ಬೆವರುತ್ತಿದೆ.
“ಹೌದಾ? ಸರಿ. ಹಾಕ್ಕೊಂಡು ಬಾ. ಈಗ”
ಜೀವ ಬಾಯಿಗೆ ಬಂತು ಅವಳಿಗೆ. ಆದರೆ ಮಾತು ಹೊರಬಂದಾಗಿದೆ. ಇನ್ನೇನೂ ಗತಿ ಕಾಣಲಿಲ್ಲ. ನಡುಮನೆಗೆ ನಡೆದಳು. ದೇವರ ಮುಂದೆ ಕುಳಿತಳು. ಗಂಡ ಜಗಲಿಯ ಮೇಲೆ ಕಾಯುತ್ತಿದ್ದಾನೆ.
ಇಪ್ಪತ್ತಕ್ಕೂ ಹೆಚ್ಚು ವರ್ಷದ ದಾಂಪತ್ಯ ಜೀವನ ಕಣ್ಣು ಮುಂದೆ ಒಂದುಸಲ ಬಂದು ಹೋಯಿತು ಅವಳಿಗೆ. ಪ್ರೀತಿಸುವ ಗಂಡ, ಆದರೆ ಸ್ವಲ್ಪ ಕಠಿಣ ಸ್ವಭಾವ. ದುಡ್ಡಿನ ವಿಷಯದಲ್ಲಂತೂ ಕೈ ಬಿಗಿ. ಸುಳ್ಳು ತಟವಟ ಎಂದರೆ ಆಗದು. ಸ್ವಲ್ಪ ಕೈಸಡಿಲಿಸು ಎಂದು ತಾನು ಹೇಳಿದರೆ ಅವನು ಕೇಳದವ. ಚೆನ್ನಾಗಿ ಓದಿ ಬರೆದು ಮಾಡಿರುವ ಅವನಿಗೆ, ಏನಾದರೂ ಬದಲು ಹೇಳಿದರೆ, ಕೂಡಲೆ ಅದಕ್ಕೆ ವಿರುದ್ಧಾರ್ಥ ಬರುವ ಯಾವುದೋ ಶ್ಲೋಕವನ್ನೋ, ವಚನವನ್ನೋ ಆ ಕ್ಷಣವೇ ಉದಾಹರಣೆಗೆ ಹೇಳಿಬಿಡುವಂತಹವನು. ಈಗ ತಾನು ಮಾಡಿದ ಕೆಲಸ ಹೇಳಿಬಿಡಲೇ? ಬೇಡವೇ? ಮನಸ್ಸು ಉಯ್ಯಾಲೆಯ ಮೇಲೆ ತೂಗಿತು.
ತಟ್ಟೆಯಲ್ಲಿದ್ದ ಹೂವು ತೆಗೆದು ದೇವರ ಮುಡಿಗೇರಿಸಿದಳು. ಬಲಗಡೆಗೆ ಬಿದ್ದರೆ, ಹೋಗಿ ಕ್ಷಮೆ ಕೇಳುತ್ತೇನೆ. ಅವಮಾನ ಆದದ್ದಾಗಲಿ. ಎದುರಿಸುವುದು. ಎಡಗಡೆಗೆ ಬಿದ್ದರೆ, ಮಾನ ಉಳಿಯುತ್ತೆ, ಆದರೆ ಅದಕ್ಕೆ ಕೊಡಬೇಕಾದ ಬೆಲೆ ಪ್ರಾಣತ್ಯಾಗ. ಅಷ್ಟೇ. ನಿರ್ಧರಿಸಿಬಿಟ್ಟಳು. ವಿಠಲನ ಮೂರುತಿಯ ಮೇಲೆ ಮಲ್ಲಿಗೆ ಹೂವು ಮಿನುಗಿತು ಸಣ್ಣ ನಂದಾದೀಪದ ಬೆಳಕಲ್ಲಿ. ಕಣ್ಣು ಮುಚ್ಚಿ ಮೂರು ಪ್ರದಕ್ಷಿಣೆ ಹಾಕಿದಳು.
ಕಣ್ಣು ಬಿಟ್ಟಾಗ ಹೂವು ಎಡಕ್ಕೆ ಬಿದ್ದಿರಬೇಕೆ?
ಅವಳಿಗೆ ಮುಂದಿನ ದಾರಿ ಕಂಡಿತ್ತು.
*********
ಮಧ್ವಪತಿ ಓಡುತ್ತಿದ್ದ. ಮುಷ್ಟಿ ಬಿಗಿಹಿಡಿದು ಓಡುತ್ತಿದ್ದ.
ಅಂಗಡಿಗೂ ಮನೆಗೂ ನಿದಾನವಾಗಿ ನಡೆದರೆ ಒಂದು ಗಳಿಗೆ ಬೇಕು. ಈಗ ಅವನಿಗೆ ಅಷ್ಟು ಸಮಯ ಇಲ್ಲ.
ಮನೆಯಲ್ಲಿ ಅಪ್ಪ ಏನಾದರೂ ಗಲಾಟೆ ಮಾಡಿದರೆ? ಅಮ್ಮನನ್ನು ಬೈದರೆ? ಅಮ್ಮ ಅತ್ತರೆ? ಆದಷ್ಟು ಬೇಗ ಓಡಿ ಹೋಗಿ ಅಪ್ಪನ ಕಣ್ಣು ತಪ್ಪಿಸಿ ಕೊಟ್ಟುಬಿಡಬೇಕು.
ಯಾವತ್ತೋ ಯಾರೋ ಕೇಳಿದರು ಎಂದು ಅಮ್ಮ ಒಂದು ಚೀಲ ಬತ್ತ ಕೊಟ್ಟಾಗ ಆಗಿದ್ದ ಗಲಭೆ ನೆನಪಾಗಿತ್ತು ಅವನಿಗೆ.
ಹಾಗೆಲ್ಲಾ ಕೆಲಸಕ್ಕೆ ಬಾರದಿರುವವರಿಗೆ ಕೊಡಬೇಕು ಎನ್ನುವ ಇಷ್ಟ ತನಗೂ ಇಲ್ಲ. ಆದರೆ, ಅಮ್ಮ ಅಳುವುದು ಮಾತ್ರ ಮಧ್ವಪತಿಗೆ ಬೇಕಾಗಿಲ್ಲ.
ಮನೆ ಹತ್ತಿರವಾಗಿತ್ತು. ಜಗಲಿಯ ಮೇಲೆ ಅಪ್ಪ ಕುಳಿತದ್ದು ಕಂಡಿತು. ಸುತ್ತ ಬಳಸಿ ನಡುಮನೆಯ ಕಿಟಕಿ ಹತ್ತಿರ ಹೋಗಿ ಮೆತ್ತಗೆ “ಅಮ್ಮ ಅಮ್ಮ” ಎಂದು ಕೂಗಿದ. ಎತ್ತರದ ಕಿಟಕಿಯ ಮೇಲೆ ಹತ್ತಲು ಆಗುತ್ತಿಲ್ಲ ಅವನಿಗೆ.
ಹೇಗೋ ಸರಳುಗಳನ್ನು ಹಿಡಿದು ಮೇಲೆ ಹತ್ತಿ, ತಲೆಯನ್ನು ಕಿಟಕಿಯಲ್ಲಿ ತೂರಿಸಿ ಒಳಗೆ ಕಣ್ಣು ಹಾಯಿಸಿದ.
ದೇವರ ಮುಂದೆ ಕುಳಿತ ಅಮ್ಮ. ಕಣ್ಣುಮುಚ್ಚಿ ಕೈಯಲ್ಲಿ ಬಟ್ಟಲು ಹಿಡಿದಿದ್ದಾಳೆ. ಅದರಲ್ಲೇನಿದೆ?
ಹೊರಗಿನಿಂದ ಅಪ್ಪ ಕೂಗಿದ್ದು ಅವನಿಗೂ ಕೇಳಿಸಿತು. “ಬಂದೆಯಾ ಸರಸ್ವತಿ ಮೂಗುತಿ ಹಾಕ್ಕೊಂಡು? ಎಷ್ಟು ಹೊತ್ತು ಮಾಡ್ತಿದೀ?”
ಏನೋ ಆಗಬಾರದ್ದು ಆಗುತ್ತಿದೆ ಎಂದು ಅವನಿಗನ್ನಿಸಿತು. ಕೈಯಲ್ಲಿದ್ದ ಪುಟ್ಟ ಪೆಟ್ಟಿಗೆಯನ್ನು ನೇರವಾಗಿ ಅಮ್ಮನ ತಲೆಯ ಮೇಲೇ ಬೀಳುವಂತೆ ಎಸೆದ. ಅಷ್ಟರಲ್ಲಿ ಸರಳುಗಳನ್ನು ಹಿಡಿದಿದ್ದ ಅವನ ಕೈಗಳು ಜಾರಿ, ಕೆಳಗೆ ಬಿದ್ದ ಮಧ್ವಪತಿ.
**********
ಸರಸ್ವತಿಗೇ ತನ್ನ ಕಣ್ಣುಗಳನ್ನೇ ನಂಬಲಾಗುತ್ತಿಲ್ಲ. ತಾನು ವಿಷ ಕುಡಿಯ ಹೊರಟಾಗ ಮೇಲಿನಿಂದ ಬಿದ್ದ ಪುಟ್ಟ ಪೆಟ್ಟಿಗೆಯಲ್ಲಿ ತನ್ನ ಮೂಗುತಿ! ಅದನ್ನು ಹಾಕಿಕೊಂಡು ಹೊರಗೆ ಹೊರಟರೆ ಗಂಡನ ಮುಖದಲ್ಲಿ ಆಶ್ಚರ್ಯ! ಹೊರಗೆ ಹೋದವಳು ಬಟ್ಟಲನ್ನೂ ಮರೆತು ಕೈಯಲ್ಲೇ ಹಿಡಿದಿದ್ದಳು ಅವಳು.
ಅವಳ ಕಿವಿಯ ಓಲೆಯ ಹರಳೊಂದು ಮಾಯವಾಗಿದ್ದು ಅವನಿಗೆ ಕಂಡಿದ್ದರಿಂದ, ಬಟ್ಟಲಲ್ಲೇನಿತ್ತೆಂದು ಅವನಿಗೆ ಗೊತ್ತಾಗಿಹೋಗಿತ್ತು. ಅದನ್ನು ಅವಳ ಕೈಯಿಂದ ಕಿತ್ತು ಹೊರಗೆ ಎರಚಿ ಮಾತಿಲ್ಲದೇ ಧಾವಿಸಿದ್ದ ಅವನು ಅಂಗಡಿಗೆ.
ಅಂಗಡಿಗೆ ಹೋಗಿ ನೋಡಿದರೆ ಮುಂಬಾಗಿಲ ಬೀಗ ಹಾಗೇ ಇದೆ. ಆ ಮುದುಕನ ಪತ್ತೆ ಇಲ್ಲವೇ ಇಲ್ಲ. ಒಳಹೊಕ್ಕು ನೋಡಿದರೆ, ಸಂದೂಕದಲ್ಲಿ ಮೂಗುತಿಯ ಸುದ್ದಿಯೂ ಇಲ್ಲ.
ಶ್ರೀನಿವಾಸನಿಗೆ ಮನಸ್ಸು ಕಲಕಿಹೋಗಿತ್ತು. ತನಗೆ ಹೇಳದೆ ಕೊಟ್ಟ ದಾನದಿಂದ ಹೆದರಿದ ಹೆಂಡತಿ ಪ್ರಾಣ ಕಳೆದುಕೊಳ್ಳಹೊರಟಳೇ? ಹಾಗೇನಾದರೂ ಆಗಿದ್ದರೆ, ತನ್ನ ಹತ್ತಿರ ಇದ್ದ ಹಣವನ್ನೆಲ್ಲ ಸುರಿದರೂ ಅವಳು ಮತ್ತೆ ಬರುತ್ತಿರಲಿಲ್ಲವಲ್ಲ?
ಒಂದು ನಿರ್ಧಾರಕ್ಕೆ ಬಂದಿತ್ತು ಅವನ ಮನಸ್ಸು. ಅಂಗಡಿಗೆ ಮತ್ತೆ ಬೀಗ ಹಾಕಿ ಹೊರಟ ಅವನು.
*********
ಊರಿನಲ್ಲೆಲ್ಲ ಒಂದೇ ಸುದ್ದಿ. ನವಕೋಟಿ ನಾರಾಯಣ ಶ್ರೀನಿವಾಸ ನಾಯಕರು ಇದ್ದುದೆಲ್ಲ ದಾನ ಮಾಡುತ್ತಿದ್ದಾರಂತೆ! ಯಾರಿಗೂ ನಂಬಲಾರದ ಮಾತು! ಎಲ್ಲವನ್ನೂ ದಾನ ಮಾಡಿ, ಹರಿದಾಸರಾಗುತ್ತಾರಂತೆ!
ಶ್ರೀನಿವಾಸ ನಾಯಕ ಅಂಗಡಿಗೆ ಹೋಗಿ ಬಂದವನೆ ಸರಸ್ವತಿಗೆ ಮುದುಕನ ಕಥೆ ಹೇಳಿ, ಅವನು ಯಾರೋ ಮಹಾತ್ಮನೇ ಇರಬೇಕು, ನಾನು ನಿಜವಾಗಲೂ ತಪ್ಪು ಮಾಡುತ್ತಿದ್ದೆ ಎನ್ನಿಸಿದೆ. ಹೆಚ್ಚು ಕಡಿಮೆಯಾಗಿದ್ದರೆ, ನಿನ್ನನ್ನೂ ಕಳೆದುಕೊಳ್ಳುತ್ತಿದ್ದೆ. ಆಮೇಲೆ ನಾವೆಲ್ಲ ಅನಾಥರಾಗುತ್ತಿದ್ದೆವಲ್ಲ ಎಂದು ಹಳಹಳಿಸಿದ್ದ.
ಸರಸ್ವತಿಗೆ ಅವನಲ್ಲಾದ ಬದಲಾವಣೆ ನೋಡಿ ಅಚ್ಚರಿಯಾಗಿತ್ತು.
ಅವನ ಮಾತು ಮುಂದುವರೆಯುತ್ತಿತ್ತು: “ನಾವು ವಿಜಯನಗರಕ್ಕೆ ಹೋಗಿಬಿಡೋಣ. ಅಲ್ಲಿ ಯಾರಾದರೂ ಗುರುಗಳನ್ನು ಹುಡುಕುತ್ತೇನೆ. ಹಿಂದೆ ಕಲಿತದ್ದನ್ನು ಮುಂದುವರೆಸುತ್ತೇನೆ. ಅವರು ಹೇಳಿದಂತೆ ಮಾಡುತ್ತೇನೆ. ನಾಲ್ಕು ಹಾಡು ಬರೆದು ಮಕ್ಕಳಿಗೆ ಹೇಳಿಕೊಡುವ ಬದಲು, ಎಲ್ಲರ ಮನೆಯ ಮುಂದೆ ನಾಲ್ಕು ಹಾಡು ಹೇಳುವ ಹರಿದಾಸನಾಗುತ್ತೇನೆ. ಇನ್ನು ಸಾಕು ನಮಗೆ ಈ ಕ್ಷೇಮಪುರ. ಇವತ್ತೇ ಆಗಲಿ ಈ ಶ್ರೀನಿವಾಸ ನಾಯಕನ ಕೊನೆ. ನೀವೆಲ್ಲ ನನ್ನ ಜೊತೆ ಬರಲು ಸಿದ್ಧವೇ?”
ವೈಕುಂಠದಾಸರ ನೆನಪಾಯಿತು ಅವಳಿಗೆ. ಮನೆಯ ಮುಂದೆ ಬಂದು ಅವರು ನಿಂತು ಹಾಡುತ್ತಿದ್ದುದ್ದು ಎಷ್ಟು ಸೊಗಸು! ಈಗ ಇವನೂ ಹಾಗೇ













