ಅವಧಿ
ಸರ್ಕಾರ ಎಂಬ ‘ಸಿನೆಮಾ’
ಕನ್ನಡ ಪತ್ರಿಕೋದ್ಯಮವೂ ವೇಗದ ಜೊತೆಗೆ ಏಗುವ ಅನಿವಾರ್ಯತೆಗೆ ತುತ್ತಾಗಿದೆ. ವೇಗದ ಜೊತೆ ಸ್ಪರ್ಧಿಸಿದರೆ ಪತ್ರಿಕೆಗಳಿಗೆ ಒಂದಷ್ಟು ಪ್ರಸಾರ ಚಾನಲ್ ಗಳಿಗೆ ಒಂದಿಷ್ಟು ರೇಟಿಂಗ್ಸ್ ಏರಿಕೆಯಾದ ಸಂಭ್ರಮ. ಜಾಹಿರಾತುಗಳು ಕದ ತಟ್ಟುತ್ತವೆ. ಆದರೆ ಈ ಎಲ್ಲ ಬೆಳವಣಿಗೆಯ ಮಧ್ಯೆ ಸೂಕ್ಷ್ಮ ಮನಸ್ಸೊಂದು ಕಳೆದುಹೋಗುತ್ತದೆ.
ಇಂತಹ ವೇಗದ ಮಧ್ಯೆಯೂ ಒಂದಿಷ್ಟು ತಾಳ್ಮೆ ಇಟ್ಟುಕೊಂಡು ತನ್ನ ಸುತ್ತಲಿನ ಎಲ್ಲವನ್ನೂ ಅಳೆದು ನೋಡುವ ಮನಸ್ಸು ಇಟ್ಟುಕೊಂಡವರು ಎನ್ ಎ ಎಂ ಇಸ್ಮಾಯಿಲ್. ಉದಯವಾಣಿಯಲ್ಲಿ ಪತ್ರಕರ್ತರಾಗಿರುವ ಇಸ್ಮಾಯಿಲ್ ಅಲ್ಲಿ [...]
Categories: ಕನ್ನಡ ಪುಟಗಳು
ಪ್ರಭಾಕರ ಚಿಕ್ಕಮಗಳೂರಿಗೆ ಹೋಗಿದ್ದಾನೆ, ಪ್ರಶಾಂತ ಯು ಎಸ್‌ನಲ್ಲಿದ್ದಾನಂತೆ
ಪರಮೇಶ್ವರ ಗುಂಡ್ಕಲ್ ಅವರ ‘ಪಿಚ್ಚರ್’ ಬ್ಲಾಗ್ನಲ್ಲಿ ಇದನ್ನು ಓದಿದಾಗ ಒಂದು ಕ್ಷಣ ಈ ಕವಿತೆಯಲ್ಲಿ ನಾವು ನೀವು ಅವರು ಇವರು ಎಲ್ಲರೂ .. ಇದ್ದೀವೇನೋ ಅನಿಸಿತು. ನಾವೆಲ್ಲಾ ಈ ಕವಿತೆಯಲ್ಲಿ ನಮ್ಮನ್ನು ಹುಡುಕಿಕೊಳ್ಳೋಣ ಎಂದು ಇದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.-
ಪೊಲೀಷ್ ಭಾಷೆಯ ನೊಬಲ್ ಪ್ರಶಸ್ತಿ ಪುರಸ್ಕೃತ ಕವಯಿತ್ರಿ ವಿಸ್ಲಾವಾ ಸಿಂಬೋರ್‌ಸ್ಕಾಳ ವಿಶಿಷ್ಟ ಶೈಲಿಯ ಕವಿತೆ ಇದು. ವ್ಯಕ್ತಿಯೊಬ್ಬ ಸತ್ತ ದಿನ ಅವನ ಸಾವನ್ನು ನಿರ್ಭಾವುಕವಾಗಿ `ಆಡಿಕೊಳ್ಳುವು’ದನ್ನು ಕವಯಿತ್ರಿ ಅದ್ಭುತವಾಗಿ ಹಿಡಿದಿಟ್ಟಿದ್ದಾರೆ. ಅದನ್ನು ಅಷ್ಟೇ ಅದ್ಭುತವಾಗಿ ಕನ್ನಡಕ್ಕೆ ತಂದಿಡಲು ವಿಕಾಸ [...]
Categories: ಕನ್ನಡ ಪುಟಗಳು
ಅನಂತ ಚಿನಿವಾರ್ ಅವರ ‘ಹೇ ರಾಮ್’
ಅನಂತ ಚಿನಿವಾರ್ ಕನ್ನಡ ಪತ್ರಿಕೋದ್ಯಮದಲ್ಲಿ ಹಲವು ಅಲೆಗಳನ್ನು ಕಂಡವರು. ಓದಿದ್ದನ್ನು ಸಮರ್ಪಕವಾಗಿ ಅರಗಿಸಿಕೊಳ್ಳುವ, ಗ್ರಹಿಸುವ ಶಕ್ತಿ ಚಿನಿವಾರ್ ಅವರಿಗಿದೆ. ಉದಯ ಚಾನಲ್, ಸುವರ್ಣ ನಂತರ ಈಗ ರಾಜ್ ಚಾನಲ್ ನ ಮುಖ್ಯಸ್ಥರಾಗಿದ್ದಾರೆ. ‘ಅತ್ತ ಇತ್ತಗಳ ಸುತ್ತ ಮುತ್ತ’ ಹಾಗೂ ‘ಗೇಮ್’ ಇವರ ಜನಪ್ರಿಯ ಅಂಕಣಗಳು. ಅಭಿವ್ಯಕ್ತಿಗೆ ಎಲ್ಲಾ ಮಾಧ್ಯಮಗಳನ್ನೂ ಹುಡುಕುವ ಅವರು ರಂಗಭೂಮಿಯಲ್ಲೂ ತಾವು ಹೇಳಬೇಕಾದದ್ದನ್ನು ಹೇಳಲು ಹೊರಟಿದ್ದಾರೆ. ಗಾಂಧೀ ಕುರಿತ ‘ಹೇ ರಾಮ್’ ಅಂತಹ ಪ್ರಯೋಗಗಳಲ್ಲೊಂದು. ಸಾಧ್ಯವಿದ್ದಲ್ಲಿ ನಾಟಕ ನೋಡಿಬನ್ನಿ.
[...]
Categories: ಕನ್ನಡ ಪುಟಗಳು
ಹೀಗೂ ಒಂದು ಅನುಭವ ಆಯ್ತು
‘ಸಿರಿ’ ಬಂದ ಕಾಲಕ್ಕೆ…
-ಮೃಗನಯನಿ
ನಮ್ಮ ಮನೆ ಎದುರಿಗೆ ಒಬ್ಬ ನಿವೃತ್ತ ಸೇನೆಯ ಅಧಿಕಾರಿ ತಮ್ಮ ಕುಟುಂಬದ ಜೊತೆ ವಾಸವಾಗಿದ್ದರು. ಅವರಿಗೆ ಮೂರು ಜನ ಮಕ್ಕಳು ಮೊದಲನೆಯ ಅಣ್ಣ ವೈದ್ಯರು, ಮಧ್ಯದ ಹುಡುಗಿ ಟೀಚರ್, ಮೂರನೆಯ ಹುಡುಗ ಏನೂ ಮಾಡುತ್ತಿರಲಿಲ್ಲ ಏಕೆಂದರೆ ಅವನಿಗೆ ಬುದ್ಧಿಮಾಂದ್ಯವಾಗಿತ್ತು .
ಆ ಮನೆಯವರು ತುಂಬಾ ಒಳ್ಳೇ ಜನ. ತಮ್ಮ ಕೈಯಲ್ಲಿ ಆದಷ್ಟು ಎಲ್ಲರಿಗೂ ಸಹಾಯ ಮಾಡುತ್ತಿದ್ದರು. ನಾವು ಮನೆ ಕಟ್ಟಿಸುವಾಗಲೂ ಕಬ್ಬಿಣ, ಸಿಮೆಂಟು ಏನೂ ಕಳ್ಳತನ ಆಗದ ಹಾಗೆ ನೋಡಿಕೊಂಡಿದ್ದರು.ನಾವು ಆ ಮನೆ ಕಟ್ಟಿಸಿ ಗೃಹ [...]
Categories: ಕನ್ನಡ ಪುಟಗಳು
ಸೋಗೆಮನೆ ಕಥೆಗಳು
ನಾನು
ಬುಡ್ಡಿಯ ಬೆಳಕು ಅತ್ತಿಂದಿತ್ತ ಹೊಯ್ದಾಡುತ್ತಿತ್ತು.
ಗೋಡೆಯ ಮೇಲೆ ನರಿಗಳ ಹಿಂಡು ಎಕ್ಕದ ಗಿಡವಾಗಿ, ಎಕ್ಕದ ಗಿಡ ಕಾಗೆಯಾಗಿ, ಕಾಗೆ ಹಲ್ಲಿಯಾಗಿ, ಹಲ್ಲಿ ಮುಳ್ಳಾಗಿ…
ಹೇಳುವುದು ಮರೆತಿದ್ದೆ
ಅದು ನನ್ನದೇ ನೆರಳು
ಅವನ ಹಾದಿ
ದಖನ್ ದೇಶದಲ್ಲಿ ಬಹಳ ಹಿಂದೆ ನಡೆದ ಕಥೆ. ದರೋಡೆಕೋರನೊಬ್ಬನಿಗೆ ಹಾದಿಹೋಕರನ್ನು ದೋಚುವುದೇ ಕೆಲಸ. ತಮ್ಮಲ್ಲಿದ್ದ ಎಲ್ಲವನ್ನೂ ಅವರು ಕೊಡಬೇಕಿತ್ತು ಇಲ್ಲವೇ ಹೆಣವಾಗಬೇಕಿತ್ತು. ಒಮ್ಮೊಮ್ಮೆ ಇವರ ತಂಡ ಇಡೀ ಹಳ್ಳಿಯನ್ನೇ ದೋಚುತ್ತಿತ್ತು.
ಅಂಥ ಒಂದು ಹಳ್ಳಿಯಲ್ಲಿ ಒಬ್ಬಳು. ದರೋಡೆಕೋರ ಅವಳನ್ನು ಹೊತ್ತೊಯ್ದ. ತಣಿಯುವಷ್ಟು ಪ್ರೇಮಿಸಿದ. ಒಂದು ದಿನ ಅದೆಂಥದೋ ದೊಡ್ಡ ಕಾಯಿಲೆ ಬಡಿದು ಅವಳು [...]
Categories: ಕನ್ನಡ ಪುಟಗಳು
ನೀನಾಸಂ ಸಂಸ್ಕೃತಿ ಶಿಬಿರ- ‘ಅವಧಿ’ ಕಣ್ಣಲ್ಲಿ
ನೀನಾಸಂ ಸಂಸ್ಕೃತಿ ಶಿಬಿರ ‘ಅವಧಿ’ ಕಣ್ಣಿಗೆ ಕಂಡದ್ದು ಹೀಗೆ.
ಇನ್ನಷ್ಟು ಫೋಟೋಗಳಿಗಾಗಿ ‘ಓದು ಬಜಾರ್‘ ಗೆ ಭೇಟಿ ಕೊಡಿ-
Categories: ಕನ್ನಡ ಪುಟಗಳು
ದಿನೇಶ್ ಅಮೀನ್ ಮಟ್ಟು ಫ್ರಂ ಡೆಲ್ಲಿ …
ದಿನೇಶ್ ಅಮೀನ್ ಮಟ್ಟು ಬರೆಯುತ್ತಿರುವ ಅಂಕಣ ‘ದೆಹಲಿ ನೋಟ’ವನ್ನು ನೀವೆಲ್ಲಾ ಓದುತ್ತಲೇ ಬಂದಿದ್ದೀರಿ. ಇತ್ತೀಚಿಗೆ ಕನ್ನಡ ಪುಸ್ತಕ ಪ್ರಾಧಿಕಾರ ಈ ಅಂಕಣಗಳ ಸಂಕಲನವನ್ನು ಹೊರತಂದಿದೆ.
ದಿನೇಶ್ ವಡ್ಡರ್ಸೆ ರಘುರಾಮ ಶೆಟ್ಟರ ‘ಮುಂಗಾರು’ ಗರಡಿಯಲ್ಲಿ ಪಳಗಿದವರು. ಸದಾ ತಮ್ಮ ನೋಟವನ್ನು ಹರಿತಗೊಳಿಸಿಕೊಂಡೇ ಬಂದವರು. ‘ಸುದ್ದಿಮಾತು‘ ಅವರ ಬಗ್ಗೆ ಒಂದು ಪುಟ್ಟ ಟಿಪ್ಪಣಿ ಬರೆದಿದೆ.
ಅಂಡು ಸುಟ್ಟ ಬೆಕ್ಕಿನಂತೆ ಅಡ್ಡಾಡುತ್ತಿರುವ ಯಡಿಯೂರಪ್ಪ ಅವರನ್ನು ಕುರಿತು “ಸುದ್ದಿ ಮಾತು” ಬರೆಯಬೇಕೆನ್ನುವಷ್ಟರಲ್ಲಿ ಪ್ರಜಾವಾಣಿ ಪತ್ರಿಕೆಯ ದೆಹಲಿ ಪ್ರತಿನಿಧಿ ದಿನೇಶ್ ಅಮೀನಮಟ್ಟು ಈ ವಾರದ ತಮ್ಮ “ದೆಹಲಿನೋಟ” [...]
Categories: ಕನ್ನಡ ಪುಟಗಳು
Nagabharana on Itsdiff Stanford Radio
Nagabharana’s interview on Itsdiff Stanford Radio 90.1 FM KZSU
Please mark your calenders and listen to ”Nagabharana Special” which includes an interview with Sri T S Nagabharana, and songs and discussion about his movies and plays.
Nagabharana is a multi-faceted personality in the field of culture. He is a Film Maker, Director, Actor, Theatre Activist and an Organizer. His films have won 8 National Awards and 14 State and [...]
Categories: ಕನ್ನಡ ಪುಟಗಳು
ಕಳುಹಬಂದವರಿಲ್ಲಿ ಉಳುಹಿಕೊಂಬುವರಿಲ್ಲ…
‘ಅವಧಿ’ಯಲ್ಲಿ ಈಗಾಗಲೇ ಬೇಂದ್ರೆ ಕಾವ್ಯದ ಬಗ್ಗೆ ಭಿನ್ನ ನೋಟ ನೀಡುವ ಸುನಾಥರ ಬಗ್ಗೆ ಬರೆದಿದ್ದೇವೆ. ಈ ಬಾರಿ ಸುನಾಥರು ಶಿಶುನಾಳ ಶರೀಫ್ ರ ‘ಅಳಬೇಡ ತಂಗಿ ಅಳಬೇಡ ಕವಿತೆ’ ಬಗ್ಗೆ ಬರೆದ ಒಂದು ವಿಶಿಷ್ಟ ಲೇಖನ ಇಲ್ಲಿದೆ. ’ಸಲ್ಲಾಪ’ ಬ್ಲಾಗ್ ನಿಂದ ಈ ಲೇಖನವನ್ನು ಆಯ್ದುಕೊಳ್ಳಲಾಗಿದೆ
ಅಳಬೇಡ ತಂಗಿ ಅಳಬೇಡ
-ಸುನಾಥ್
ಶಿಶುನಾಳ ಶರೀಫರು ೪೦೦ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಅನೇಕ ಗೀತೆಗಳು ಸಂದರ್ಭಾನುಸಾರವಾಗಿ ಹೊರಹೊಮ್ಮಿದ ಹಾಡುಗಳು. ಇಂತಹ ಹಾಡುಗಳಲ್ಲಿ “ಬಿದ್ದೀಯಬೆ ಮುದುಕಿ”, “ಗಿರಣಿ ವಿಸ್ತಾರ ನೋಡಮ್ಮ” , [...]
Categories: ಕನ್ನಡ ಪುಟಗಳು
ಆ ಒಂದು ಬಿಂದಿ…
ನವೋಮಿ ಎಂಬ ಕೂಲ್ ಕೂಲ್ ಹುಡುಗಿ ಮತ್ತೆ ಮಾತನಾಡಿದ್ದಾಳೆ
ಮೊಮ್ಮಗಳ ಒತ್ತಾಯಕ್ಕೆ ಅಪರೂಪಕ್ಕೊಮ್ಮೆ ಅವಳು ಹಣೆಗೊಂದು ಕಪ್ಪನೆಯ ಬಿಂದಿ ಇಟ್ಟುಕೊಂಡು ಬಿಡುತ್ತಾಳೆ. ಅವಳ ಮೈಬಣ್ಣಕ್ಕೋ ಅಥವಾ ಆ ಮುಖದಲ್ಲಿ ಇನ್ನು ಜೀವಂತವಾಗಿರೋ ಸೌಂದರ್ಯಕ್ಕೋ ಏನೋ? ಅಕ್ಕಪಕ್ಕದ ಮನೆಯ ಚಿಕ್ಕ ಚಿಕ್ಕ ಹೈಕಳೆಲ್ಲಾ ಅಜ್ಜೀ ನಿನಗೆ ಕಪ್ಪು ಬಿಂದಿ ಚೆನ್ನಾಗಿ ಕಾಣುತ್ತದೆ ಎನ್ನುತ್ತಾರೆ . ಅವಳಿಗೋ ಮತ್ತೆ ಕಳೆದು ಹೋದ ಯೌವನ ಮರುಕಳಿಸಿದ ಅನುಭವ. ತುಟಿಯಂಚಿನಲ್ಲಿ ನಗು. ಆದರೆ ಅದನ್ನು ತೋರಿಸಲೊಲ್ಲಳು. ಹೃದಯದಲ್ಲಿ ತನ್ನ ಅಪ್ರತಿಮ ಸೌಂದರ್ಯದ ಬಗ್ಗೆ ಮೊಮ್ಮಕ್ಕಳು,ಸುತ್ತಮುತ್ತಲ ಮಕ್ಕಳೆಲ್ಲಾ ಹೆಮ್ಮೆ [...]
Categories: ಕನ್ನಡ ಪುಟಗಳು
ಮತ್ತೆ ‘ಜೋಗಿ’ ಹಾಡು
ವಿರಹ
-ಜೋಗಿ
ವಿರಹಕ್ಕೆ ರೂಪಕ
ಚಾತಕ ಪಕ್ಷಿ
ಸುಡುವ ಬೆಳದಿಂಗಳು
ಸರಿಯದ ಕಾಲ
ಚಳಿಗಾಲದ ಸುದೀರ್ಘ ರಾತ್ರಿ
ಚಂದನದ ಮರಗಳ ಕಾಡಿಂದ ಬೀಸುವ
ತಂಗಾಳಿ
ಅವನ ತೋಳಮೇಲೆ ಪವಡಿಸಿದ
ಇರುಳಿನ ನೆನಪು
ಮಿಲನಕ್ಕೆ ರೂಪಕಗಳೇ ಇಲ್ಲ.
ಅಲ್ಲಿ ಕಾಲದೇಶ
ನೆಲೆಕಳಕೊಂಡು
ಕಣ್ರೆಪ್ಪೆ ತಾನೇ ತಾನಾಗಿ ಮುಚ್ಚಿ
ಎದೆ ಸೆಟೆದು ಇಡಿದೇಹ
ಹಿಡಿಯಾಗಿ
ಹಿಡಿಯಾಗಿದ್ದದ್ದುಬಿಡಿಬಿಡಿಯಾಗಿ
ನಿನ್ನೆನಾಳೆಗಳ ಅಕಾಲ ಅವಸಾನ.
ಸುರತದ ಕಂಪುಹೊತ್ತಲ್ಲಿ
ಮನಸುಗಳ ಕಲಸುಮೇಲೋಗರ
ಕ್ಯಾನ್ವಾಸಿನ ತುಂಬ
ಅವರ್ಣನೀಯ ವರ್ಣವೈಭವ,
ಮನೆಯ ಮಾಳಿಗೆ ಸೋರಿ
ಗುಡ್ಡ ಗವಿಯನ್ನು ನುಂಗಿ
ಸಿರಿಗೆರೆಯ ನೀರಲ್ಲಿ
ಉಂಗುರದ ಪುಳಕ.
ಕವಿ ಕವಿಯಲ್ಲ.
ಭವಿ ಭವಿಯಲ್ಲ.
ದೀಪೋತ್ಸವದ ರಾತ್ರಿ
ಕತ್ತಲೆಬೆಳಕಿನ ನಡುವೆ
ದಾಟಲಾಗದ ಹೊಸಿಲು.
ಅಂಗಾಗಕ್ಕೆ ಆಗಷ್ಟೇ ಮೂಡಿದ
ಮತ್ತೊಂದು ಟಿಸಿಲು.
ಓಂ ಸಹನಾವವತುಃ
ಸಹನೌಭುನಕ್ತು.
Categories: ಕನ್ನಡ ಪುಟಗಳು
ನಾವ್ಯ್ಯಾಕೆ ಹೀಗಾದೆವು?
ಅಕ್ಷತಾ ಕೆ
ದಣಪೆಯಾಚೆ…
ನಾವ್ಯ್ಯಾಕೆ ಹೀಗಾದೆವು?
ಗಂಡಸರ ಕಥೆ ಹಾಳು ಬಡೀಲಿ ಬಿಡು ನಾವು ಹೆಂಗಸರ್ಯಾಕೆ ಹೀಗಾದ್ವಿ? ಅವಳು ಕೇಳಿದಳು. ನಾನು ಮತ್ತೆ ಮತ್ತೆ ಯೋಚಿಸಿದೆ ಹೌದಲ್ಲ ನಾವ್ಯಾಕೆ ಹೀಗಾದ್ವಿ …
ಕುವೆಂಪು ಅವರ `ಮಲೆಗಳಲಿ ಮದುಮಗಳು’ ಕಾದಂಬರಿಯಲ್ಲಿ ಒಂದು ದೃಶ್ಯ ಬರುತ್ತದೆ. ಹೊಲೆಯರ ಆಳು ಸಣ್ಣಬೀರನನ್ನು ಯಜಮಾನಿಕೆಯ ದರ್ಪದಿಂದ ಗೌಡನೊಬ್ಬ ಕಂಬಕ್ಕೆ ಕಟ್ಟಿಸಿ ಹೊಡೆಸುತ್ತಿರುವಾಗ ಅಡುಗೆ ಮನೆಯಲ್ಲಿದ್ದ ಗೌಡರ ಹೆಂಡತಿ ಅಲ್ಲಿಂದಲೇ ಹೊರಗೆ ನಡೆಯುತ್ತಿರುವುದನ್ನು ಗ್ರಹಿಸಿ ಹೋಗಪ್ಪಾ ಅಲ್ಲಿ ನಡೀತಿರುವುದನ್ನು ತಡೀ ಸಿಟ್ಟು ಬಂದಾಗ ನಿಮ್ಮಪ್ಪ ಮನುಷ್ಯರಾಗಿರುವುದಿಲ್ಲ ಎಂದು ಹೇಳಿ ಆ [...]
Categories: ಕನ್ನಡ ಪುಟಗಳು
ಕವಿ ಜೋಗಿ ಇಲ್ಲಿದ್ದಾರೆ…
ಇಲ್ಲಿಯೂ ಅಲ್ಲಿಯೂ ಸಲ್ಲುತ್ತಾ..
-ಜೋಗಿ
ಹತ್ತೋ ಹದಿನಾರೋ?
ಜೋಗಿ ಸುಮ್ಮನೆ ಕೂತರೆ
ಸೋಮಾರಿತನ.
ಯೋಗಿ ಕುಳಿತರೆ ಧ್ಯಾನ.
ಬಾಣಂತಿಗಾದರೆ ವಿರಾಮ.
ಕವಿಗೆ ರಸನಿಮಿಷ, ಕಡುಶ್ರೀಮಂತನಿಗೆ
ಐಷಾರಾಮ.
ಏಕಾಂತವೆಂದರೆ
ಜಂಗುಳಿ.
ಒಳಮನೆಯಲ್ಲಿ ಜನಸಂದಣಿ.
ತೂಗುಮಂಚದ ಮೇಲೆ
ಅಡ್ಡಾದಿಡ್ಡಿ ಕೈಕಾಲು.
ಅಷ್ಟು ಕಾಲ ಹೊತ್ತು ಸಾಗಿದ
ರುಂಡಮುಂಡದ
ಪ್ರಚಂಡ ವೈರಾಗ್ಯ.
ಇಪ್ಪತ್ತೋ ಎಪ್ಪತ್ತೋ?
ಹಾಗೇ ಸುಮ್ಮನೆ ಕೂತರೆ
ದಿವಂಗತ.
ಪ್ರಾಣಪಕ್ಷಿ ಹಾರಿಹೋಗಿ
ಕಾಯಕದ ಕಾಯ
ಕಾಲವಾದ ಮೇಲೆ
ನನ್ನ ಆಲೋಚನೆ, ವ್ಯಾಮೋಹ,
ಮತ್ಸರ, ಕಾಮ, ಒಳ್ಳೇತನ,
ಅಹಂಕಾರ
ನೆಲೆ ಕಳಕೊಂಡು
ಎಲ್ಲಿ ನೆಲೆಸುತ್ತದೆ ಎಂಬ
ಶೇಷಪ್ರಶ್ನೆಯ ಮುಂದೆ
ನಾನು ಪ್ರಶ್ನಾರ್ಥಕ ಚಿನ್ಹೆ
ಮತ್ತು
ವಿನಯವಂತ
ಹತ್ತೋ ಹದಿನಾರೋ
ಇಪ್ಪತ್ತೋ ಎಪ್ಪತ್ತೋ
ಶ್ರಾದ್ಧದ ಮುನ್ನಾದಿನ ಹಿರಿಮಗನಿಗೆ ಒಪ್ಪತ್ತು.
Categories: ಕನ್ನಡ ಪುಟಗಳು
ಬೆಕ್ಕಿನ ಕೊರಳಿಗೆ ಗಂಟೆ
ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವುದು ಸುಲಭದ ವಿಚಾರವೇನೂ ಅಲ್ಲ. ಅದರಲ್ಲೂ ಮಾಧ್ಯಮವೆಂಬ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವುದು ಇನ್ನೂ ಕಷ್ಟದ ಕೆಲಸ.
ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುತ್ತದೆ. ಹಾಗೆ ಕುಡಿದಾಗಲೆಲ್ಲಾ ಅದು ಬೇರೆಯವರಿಗೆ ಗೊತ್ತಾಗಿಲ್ಲ ಎಂದುಕೊಳ್ಳುತ್ತದೆ. ಬೆಕ್ಕು ಹಾಗೆ ಭಾವಿಸಿದೆ ಅಷ್ಟೆ.‘ಸುದ್ದಿಮಾತು’ ಎಂಬ ಅವರೇ ಘೋಷಿಸಿಕೊಂಡ ಹಾಗೆ ಐವರು ಪತ್ರಕರ್ತರ ಬಳಗ ಈಗ ಮಾಧ್ಯಮದ ಅಂಗೈ ಹುಣ್ಣಿಗೆ ಕನ್ನಡಿ ಹಿಡಿಯಲು ಹೊರಟಿದೆ.
ಮಂಗಳೂರಿನಲ್ಲಿ ಈ ಹಿಂದೆ ವಾರೆ-ಕ್ವಾರೆ ಎನ್ನುವ ಪ್ರಯತ್ನ ಆಗಿತ್ತು. ಸುಧಾ ಆಕಾರದಲ್ಲಿ ಬರುತಿದ್ದ ಪತ್ರಿಕೆ ಮಾಧ್ಯಮಗಳ [...]
Categories: ಕನ್ನಡ ಪುಟಗಳು
ಕೆಲವರು ಹಾಗಿರ್ತಾರೆ….
‘ಸಿರಿ’ ಬಂದ ಕಾಲಕ್ಕೆ…
-ಮೃಗನಯನಿ
ಕೆಲವರು ಹಾಗಿರ್ತಾರೆ…
ಪಟಪಟ ಅಂತ ಮಾತಾಡ್ತಾರೆ. ಚಕಚಕ ಅಂತ ಕೆಲಸ ಮಾಡ್ತಾರೆ. ಒಂದು ರಾಶಿ ಕೆಲಸಗಳನ್ನು ನಾನು ಮಾಡ್ತೀನಿ ಅಂತ ಒಪ್ಕೊಂಡು ಬಿಡ್ತಾರೆ. ಯಾವುದಾದರೂ ಒಂದು ದೊಡ್ಡ ಕೆಲಸ ಮುಗಿಸಿದ ತಕ್ಷಣ ಸ್ವಲ್ಪ ಆರಾಮಾಗಿಬಿಡೋಣ ಅಂದುಕೊಳ್ಳೋದೇ ಇಲ್ಲ. ಕೈಯಲ್ಲಿರೋ ಕೆಲಸ ಮುಗಿಯೋದಕ್ಕೆ ಮುಂಚೇನೇ ಮುಂದೇನು ಮಾಡೋದು ಅಂತ ಯೋಚನೆ ಮಾಡ್ತಿರ್ತಾರೆ.
ನನ್ನ ಅಜ್ಜಿ ಇಂಥೋರೇ. ಅವರಿಗೆ ಒಂದಲ್ಲ ಒಂದು ಕೆಲಸ ಮಾಡ್ತಿರಲೇ ಬೇಕು. ಅವರು ಮಾಡಿದ್ರೆ ಹೋಗ್ಲಿ, ಅವರ ಕಣ್ಣಿಗೆ ಕಾಣೋರು ಯಾರೂ ಸುಮ್ಮನೆ ಕೂತಿರಬಾರದು. ನಿಮ್ಮಜ್ಜಿ [...]
Categories: ಕನ್ನಡ ಪುಟಗಳು
‘ಹುಳಿಮಾವು’ ಲಂಕೇಶ್
ಲಂಕೇಶ್ ಅವರನ್ನು ಯಾವ ದಿಕ್ಕಿನಿಂದೆಲ್ಲಾ ನೋಡಬಹುದು ಎಂಬುದಕ್ಕೆ ಇಲ್ಲಿದೆ ಉದಾಹರಣೆ. ಲಂಕೇಶ್ ಪತ್ರಿಕೆಯ ಮೂಲಕ ಕನ್ನಡ ಪತ್ರಿಕೋದ್ಯಮವನ್ನು ಪ್ರವೇಶಿಸಿದ ಪುಂಡಲೀಕ ಕಲ್ಲಿಗನೂರು ಅವರು ‘ಹುಳಿಮಾವು’ ಲಂಕೇಶರನ್ನು ಗ್ರಹಿಸಿರುವುದು ಹೀಗೆ. ಕಲಾವಿದರು ಬ್ಲಾಗ್ ಲೋಕಕ್ಕೆ ಪ್ರವೇಶಿಸಿರುವುದು ತೀರಾ ಕಡಿಮೆ. ಪುಂಡಲೀಕ ಕಲಾಪ್ರಪಂಚ ಇವರ ಬ್ಲಾಗ್. ಚಿತ್ರ ಬರೆಯುವುದರ ಜೊತೆಗೆ ಕವಿತೆ ಕಥೆ ಇವರ ಹವ್ಯಾಸ.
Categories: ಕನ್ನಡ ಪುಟಗಳು
